ಕೊರಟಗೆರೆ :
ರಾಜ್ಯದಲ್ಲಿ ಕೊರೋನಾ ಸೊಂಕಿನಿಂದ ಲಾಕ್‍ಡ್‍ನ್ ನಿಂದ ಮುಚ್ಚಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀದೇವಾಲಯ ಸರ್ಕಾರದ ಹೊಸ ನಿಯಮಾವಳಿಗೆ ಅನುಸಾರವಾಗಿ ಸೋಮವಾರದಿಂದ ತೆರೆದು ಮಹಾಲಕ್ಷ್ಮೀದೇವಾಲಯ ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ತಿಳಿಸಿದ್ದಾರೆ.
ರಾಜ್ಯಾದ್ಯಾಂತ ಕೊರೋನಾ ವೈರಸ್ ಹರಡುವಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇವಾಲಯಗಳನ್ನು ಜು.5 ಸೋಮವಾರದಿಂದ ತೆರಯಲು ಸರ್ಕಾರ ಅನುಮತಿ ನೀಡಿದ ಹಿನ್ನೆ ಲೆಯಲ್ಲಿ ದೇವಾಲಯ ಸೇರಿದಂತೆ ಸಂಪೂರ್ಣ ಅವರಣ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿ ಭ್ತಕಾದಿಕಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ದೇವಿಯ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಗಿ ಮಾಸ್ಕ್ ಧರಿಸುವುದು ಮತ್ತು ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಬೇಕು, ಕೈಗಳನ್ನು ಸ್ಯಾನಿಟೈಜರ್ ಗಳಿಂದ ಸ್ವಚ್ಛಗೊಳಿಸಿಕೊಂಡು ದೇವಾಲಯ ಪ್ರವೇಶಿಸ ಬೇಕು, ಸರದಿಯಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯಬೇಕು.
ಭಕ್ತರಿಗೆ ದೇವಿಯ ದರ್ಶನ ಮಾತ್ರ ಲಭ್ಯವಿದ್ದು ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ. ದೇವರ ದರ್ಶನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ದರ್ಶನ ಕ್ಕೆ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ