ಏಷ್ಯಾ ಕಪ್ ಹಾಕಿ: ಇಂದು ಭಾರತಕ್ಕೆ ಕೊರಿಯಾ ಸವಾಲು

ರಾಜಗೀರ್: 

    ಹಾಕಿ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ. ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಸೂಪರ್ ಫೋರ್ ಹಂತದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ಎದುರು ಸೆಣಸಾಡಲಿದೆ. ‘ಎ’ ಗುಂಪಿನಲ್ಲಿ ಭಾರತ ತಂಡವು ಚೀನಾ ವಿರುದ್ಧ 4–3, ಜಪಾನ್ ವಿರುದ್ಧ 3–2 ಮತ್ತು ಕಜಾಕಸ್ತಾನ ವಿರುದ್ಧ 15–0 ಗೋಲುಗಳ ಜಯ ಪಡೆದು ಅಜೇಯ ಸಾಧನೆ ಪ್ರದರ್ಶಿಸಿತ್ತು. ಇದೇ ಪ್ರದರ್ಶನವನ್ನು ದಕ್ಷಿಣ ಕೊರಿಯಾ ಕೊರಿಯ ವಿರುದ್ಧವೂ ತೋರಿದರೆ ಗೆಲುವು ಖಚಿತ.

   ಹಾಲಿ ಚಾಂಪಿಯನ್‌ ಆಗಿದರೂ ಕೊರಿಯಾ ಈ ಬಾರಿ ಹೇಳಿಕೊಳ್ಳುವಷ್ಟು ದೊಡ್ಡ ಪ್ರದರ್ಶನ ತೋರಿಲ್ಲ. ಬಿ ಗುಂಪಿನಲ್ಲಿ ಮಲೇಷ್ಯಾ ನಂತರ ಎರಡನೇ ಸ್ಥಾನ ಗಳಿಸಿತ್ತು. ಲೀಗ್ ಹಂತದಲ್ಲಿ ಮಲೇಷ್ಯಾ ಎದುರು ಆಘಾತಕಾರಿ 1–4 ಸೋಲನುಭವಿಸಿತ್ತು. ಹಾಗಂತ ಸವಾಲನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಸೂಪರ್ ಫೋರ್‌ನಲ್ಲಿ ತಂಡದ ಯೋಜನೆ ಬೇರೆಯೇ ಇರಬಹುದು. ಭಾರತ ಪರ ದಿಲ್‌ಪ್ರೀತ್ ಸಿಂಗ್ ಟೂರ್ನಿಯಲ್ಲಿ ಅಷ್ಟೇನೂ ಯಶಸ್ಸು ಕಂಡಿಲ್ಲ. ಅವರು ಲಯ ಕಂಡುಕೊಳ್ಳಬೇಕಾಗಿದೆ. 

   ದಿನದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು, ಚೀನಾ ತಂಡವನ್ನು ಎದುರಿಸಲಿದೆ. ಸೂಪರ್‌ ಫೋರ್ ಹಂತದಲ್ಲಿ ಎಲ್ಲ ತಂಡಗಳು ಮೂರು ಎದುರಾಳಿಗಳ ವಿರುದ್ಧ ಆಡಲಿವೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಭಾನುವಾರ ಫೈನಲ್‌ನಲ್ಲಿ ಎದುರಾಗಲಿವೆ.

Recent Articles

spot_img

Related Stories

Share via
Copy link