ಪಾಟ್ನಾ:
ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತಗೊಂಡಿದ್ದು, ದುರ್ಘಟನೆಯಲ್ಲಿ ಕನಿಷ್ಠ 1 ಸಾವಾಗಿ, 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರದ ಕೋಸಿ ನದಿಗೆ ನಿರ್ಮಿಸಲಾಗುತ್ತಿದ್ದ ದೇಶದ ಅತೀದೊಡ್ಡ ಸೇತುವೆ ಇದಾಗಿದ್ದು, ಆದರೆ ದುರಾದೃಷ್ಟವಶಾತ್ ಸೇತುವೆ ನಿರ್ಮಾಣ ಹಂತದಲ್ಲೇ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವಾರು ಮಂದಿ ಸೇತುವೆಯ ಅವಶೇಷದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ಬಿಹಾರದ ಸುಪೌಲ್‌ನ ಬಾಕೂರ್ ಮತ್ತು ಭೇಜಘಾಟ್ ಮಧುಬನಿ ನಡುವೆ ನಿರ್ಮಾಣವಾಗುತ್ತಿರುವ ಈ ಸೇತುವೆಯ 50, 51 ಮತ್ತು 52 ಪಿಲ್ಲರ್‌ಗಳ ಗಾರ್ಟರ್‌ಗಳು ಕುಸಿದು ಬಿದ್ದಿವೆ. ಸುಪಾಲ್ ಡಿಎಂ ಕೌಶಲ್ ಕುಮಾರ್ ಅವರು ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಪರ್ಯಾಸ ಅಂದ್ರೆ ದುರ್ಘಟನೆ ಸಂಭವಿಸಿ ಗಂಟೆಗಳು ಕಳೆದರೂ ಇನ್ನೂ ರಕ್ಷಣಾ ಕಾರ್ಯ ಪ್ರಾರಂಭವಾಗಿಲ್ಲ. ಆದರೆ, ಡಿಎಂ ಮತ್ತು ಎಸ್ಪಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಅಂತೆಯೇ 20ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ದುರ್ಘಟನೆಯ ನಂತರ ಸ್ಥಳೀಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಬಾಕೂರ್ ಮತ್ತು ಭಾಜ್ ನಡುವಿನ ಸೇತುವೆಯ ಗಾರ್ಟರ್ ಕುಸಿದ ನಂತರ ಇನ್ನೂ ರಕ್ಷಣಾ ಕಾರ್ಯ ಪ್ರಾರಂಭವಾಗಿಲ್ಲ. ಆದರೆ ಇಲ್ಲಿ ಅಧಿಕಾರಿಗಳ ತಂಡ ಮೊಕ್ಕಾಂ ಹೂಡಿದೆ.
ಆದರೆ ಸೇತುವೆ ಕುಸಿದ ಭಾಗ ಕೋಸಿ ನದಿಯ ಮಧ್ಯದಲ್ಲಿ ಇರುವುದರಿಂದ ಸಾಕಷ್ಟು ಉಪಕರಣಗಳು ಘಟನಾ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಇಂತಹ ಪರಿಸ್ಥಿತಿಯಲ್ಲಿ, ಪರಿಹಾರ ಮತ್ತು ರಕ್ಷಣೆಗೆ ಸಾಕಷ್ಟು ತೊಂದರೆಗಳನ್ನು ಉಂಟಾಗುತ್ತಿದೆ ಎಂದು. 3 ಅಡಿ ಆಳಕ್ಕೆ ಗಾರೆ ಬಿದ್ದಿದ್ದು, ಸೇತುವೆ ನಿರ್ಮಾಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪವೂ ಕೇಳಿಬಂದಿದ್ದು, ಜನರು ಇದನ್ನು ಆರಂಭದಲ್ಲೇ ವಿರೋಧಿಸಿದ್ದರೂ ಈ ಬಗ್ಗೆ ಯಾವುದೇ ವಿಚಾರಣೆ ನಡೆದಿಲ್ಲ. ಸದ್ಯ ಗ್ರಾಮಸ್ಥರ ನೆರವಿನಿಂದ 20 ಮಂದಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.
