ಪ್ರತಿನಿತ್ಯ 3 ಲಕ್ಷ ಗಡಿ ದಾಟಿ ಮುನ್ನುಗುತ್ತಿದೆ ಕೋವಿಡ್​​..!

ದೇಶಾದ್ಯಂತ ಇವತ್ತು ಕೊರೊನಾ ಮಿಂಚಿನ ವೇಗ ಪಡೆದುಕೊಂಡಿದೆ. ಕಳೆದ ಒಂದು ವಾರದಿಂದ 2ಲಕ್ಷದ ಆಸುಪಾಸಿನಲ್ಲಿದ್ದ ಕೇಸ್​ಗಳು ಇದೀಗ ಮೂರು ಲಕ್ಷ ಗಡಿ ದಾಟಿ ಮುನ್ನುಗ್ಗಿದೆ.

ಸೋಂಕಿತರ ಬೆನ್ನಲ್ಲೇ ಸಾವಿನ ಸಂಖ್ಯೆಯೂ ತುಸು ಹೆಚ್ಚಾಗಿದೆ. ಈ ಮಧ್ಯೆ RT-PCR ಬದಲಿಗೆ ಕೊರೊನಾ ಪರೀಕ್ಷೆಗೆ ಮತ್ತೊಂದು ಹೊಸ ವಿಧಾನವನ್ನ ಸಂಶೋಧಿಸಲಾಗಿದೆ.

ಮರುಕಳಿಸುತ್ತಾ ಹಳೆಯ ಕರಾಳ ಅಧ್ಯಾಯ?

ನಾಗಾಲೋಟ.. ದೇಶಾದ್ಯಂತ ಕೊರೊನಾ ನಾಗಾಲೋಟ ಪಡೆದುಕೊಳ್ತಿದೆ. ಮೂರನೇ ಅಲೆ ಮಿಂಚಿನ ವೇಗ ಪಡೆದುಕೊಳ್ತಿದೆ. ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸುತ್ತಿದ್ದಂತೆ ದೇಶಾದ್ಯಂತ ಕೊರೊನಾ ಸ್ಫೋಟವಾಗಿದೆ.

ಇಷ್ಟು ದಿನ 2 ಲಕ್ಷದತ್ತ ಗಿರಕಿ ಹೊಡೀತ್ತಿದ್ದ ಕೇಸ್​ಗಳು ಇವತ್ತು ಬರೊಬ್ಬರಿ ಮೂರು ಲಕ್ಷ ಗಡಿ ದಾಟಿದೆ. ಆತಂಕದ ವಿಷಯ ಅಂದ್ರೆ ಕೊರೊನಾದಿಂದ ಸಾವನಪ್ಪಿದವರ ಸಂಖ್ಯೆಯೂ ತುಸು ಹಿಗ್ಗಿದೆ.

ಮೂರು ಲಕ್ಷ ಗಡಿ ದಾಟಿ ಮುನ್ನುಗಿದ ಹೆಮ್ಮಾರಿ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೊಬ್ಬರಿ 3,17,532 ಕೊರೊನಾ ಕೇಸ್​ಗಳು ಪತ್ತೆಯಾಗಿದ್ರೆ,​ ಇದೇ ಅವಧಿಯಲ್ಲಿ ಬರೊಬ್ಬರಿ 491 ಮಂದಿ ಉಸಿರು ಚೆಲ್ಲಿದ್ದಾರೆ. ಸದ್ಯ ಕೊರೊನಾ ಪಾಸಿಟಿವಿಟಿ ದರ ಶೇಕಡಾ 16.41ರಷ್ಟು ದಾಖಲಾಗಿದೆ. ಈ ಮಧ್ಯೆ ಒಮಿಕ್ರಾನ್ ಸೋಂಕಿತರ ಸಂಖ್ಯೆ 9,287ಕ್ಕೆ ಏರಿಕೆಯಾಗಿದೆ.

ಕಳೆದ ಐದು ದಿನಗಳ ಕೊರೊನಾ ಅಬ್ಬರವನ್ನ ನೋಡೋದಾದ್ರೆ..

ಜನವರಿ 15ರಂದು 2,71,202 ಕೇಸ್​ಗಳು ಪತ್ತೆಯಾಗಿದ್ರೆ, ಜನವರಿ 16ರಂದು 2,58,089 ಕೇಸ್​ಗಳು ದಾಖಲಾಗಿತ್ತು. ಬಳಿಕ ಜನವರಿ 17ರಂದು 2,38,018 ಕೇಸ್​ ದಾಖಲಾಗುವ ಮೂಲಕ ಕೊರೊನಾ ತಗ್ಗುವ ಮುನ್ಸೂಚನೆ ಕೊಟ್ಟಿತ್ತು.

ಆದ್ರೆ ಜನವರಿ 18ರಂದು 2,82,970 ಕೇಸ್​ಗಳು ಪತ್ತೆಯಾಗುವ ಮೂಲಕ ಹೆಮ್ಮಾರಿ ಅಬ್ಬರಿಸಿತ್ತು. ಇನ್ನು ಕಳೆದ 24 ಗಂಟೆಯಲ್ಲಿ ಬರೊಬ್ಬರಿ 3,17,532 ಕೇಸ್​ ಪತ್ತೆಯಾಗುವ ಮೂಲಕ ಮತ್ತೆ ಕೊರೊನಾ ಅಬ್ಬರಿಸಿದೆ.

ಕೇವಲ ಭಾರತವಲ್ಲದೆ ಇಡೀ ಜಗತ್ತಿನಾದ್ಯಂತ ಕೊರೊನಾ ಅಬ್ಬರಿಸ್ತಿದೆ. ಹಲವು ದೇಶಗಳಲ್ಲಿ ಹೆಮ್ಮಾರಿ ನಾಗಾಲೋಟ ಪಡೆದುಕೊಳ್ತಿದೆ. ಹೀಗೆ ಕೊರೊನಾ ಮಿಂಚಿನ ವೇಗ ಪಡೆದುಕೊಳ್ತಿದ್ದಂತೆ, ಕೊರೊನಾ ಪರೀಕ್ಷೆಯ ವಿಧಾನವೂ ಬದಲಾಗ್ತಿದೆ. RT-PCR ಬದಲಿಗೆ ಎಕ್ಸ್​-ರೇ ಬಳಸಿಯೇ ಕೊರೊನಾ ಟೆಸ್ಟ್ ಮಾಡುವ ವಿಧಾನವನ್ನೂ ಸಂಶೋಧಿಸಲಾಗಿದೆ.

RT-PCR ಬದಲಿಗೆ ಎಕ್ಸ್​-ರೇ ಬಳಸಿ ಕೊರೊನಾ ಪರೀಕ್ಷೆ

RT-PCR ಬದಲಿಗೆ ಎಕ್ಸ್​-ರೇ ಬಳಸಿ ಕೊರೊನಾ ಪರೀಕ್ಷೆ ಮಾಡುವ ವಿಧಾನ ಸಂಶೋಧಿಸಲಾಗಿದ್ದು, ಕಡಿಮೆ ಸಮಯದಲ್ಲಿ ಶೇ.98ರಷ್ಟು ನಿಖರ ಫಲಿತಾಂಶ ಸಿಗಲಿದೆ. ಕೇವಲ 2 ಗಂಟೆಗಳ ಅವಧಿಯಲ್ಲಿ ಸೋಂಕು ಇದಿಯೋ ಇಲ್ವೋ ಎಂಬುದು ಗೊತ್ತಾಗಲಿದೆ.

3 ಸಾವಿರ ಜನರಿಗೆ ಎಕ್ಸ್​-ರೇ ಸ್ಕ್ಯಾನ್ ಮಾಡಿ ಸ್ಕಾಟ್​ಲ್ಯಾಂಡ್​ನಲ್ಲಿ ವಿಜ್ಞಾನಿಗಳು ಈ ವಿಧಾನವನ್ನ ಸಂಶೋಧಿಸಿದ್ದಾರೆ. ಕೊರೊನಾ ಹಾಗೂ ನ್ಯೂಮೋನಿಯಾ ಸೋಂಕಿತರಿಗೆ ಎಕ್ಸ್​ರೇ ಸ್ಕ್ಯಾನ್ ಮಾಡಿ ಈ ನೂತನ ವಿಧಾನವನ್ನ ಕಂಡು ಹಿಡಿದಿದ್ದಾರೆ.

ಹೊಸ ಹೊಸ ತಳಿಗಳು ಪತ್ತೆಯಾಗ್ತಿದ್ದಂತೆ ಚಿಕಿತ್ಸಾ ವಿಧಾನವೂ ಬದಲಾಗ್ತಿದೆ. ಇದೀಗ ಹೊಸ ಕೊರೊನಾ ಪರೀಕ್ಷೆಯ ವಿಧಾನವನ್ನೂ ಕಂಡು ಹಿಡಿಯಲಾಗಿದೆ. ಆರ್​​ಟಿಪಿಸಿಆರ್​ ಬದಲಿಗೆ ಎಕ್ಸ್​ರೇ ಮೂಲಕವೇ ಕೊರೊನಾ ಟೆಸ್ಟ್​ ಮಾಡಬಹುದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋದೆ ಸದ್ಯದ ಪ್ರಶ್ನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap