ಕೈ ಹಿಡಿದ ಕೆಪಿ ನಂಜುಂಡಿ : ಬೊಮ್ಮಾಯಿ ಹೇಳಿದ್ದಾದ್ರು ಏನು…?

ಹುಬ್ಬಳ್ಳಿ

    ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಕೆಪಿ ನಂಜುಡಿ ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಪಿ ನಂಜುಂಡ್ಡಿ ಅವರು ವಿಶ್ವಕರ್ಮ ಸಮಾಜದ ರಾಜ್ಯ ನಾಯಕರಾಗಿದ್ದಾರೆ. ಇದೀಗ ಅವರು ಚುನಾವಣೆ ಹೊತ್ತಲ್ಲೇ ಬಿಜೆಪಿ ತೊರೆದಿದ್ದು, ಬಿಜೆಪಿ ಬಿಕ್‌ ಶಾಕ್‌ ಕೊಟ್ಟಂತಾಗಿದೆ.

    ಕೆಪಿ ನಂಜುಡಿ ರಾಜೀನಾಮೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕೆ ಪಿ ನಂಜುಡಿ ರಾಜೀನಾಮೆಯಿಂದ ಪರಿಣಾಮ ಬೀರುವುದಿಲ್ಲ ಅವರು ಕಾಂಗ್ರೆಸ್ ‌ನಲ್ಲಿದ್ರು ಬಿಜೆಪಿಗೆ ಬಂದಿದ್ದರು. ಹೀಗಾಗಿ ರಾಜೀನಾಮೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

    ರಾಜ್ಯ ಪೊಲೀಸರ ಮೇಲೆ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದು, ಪೊಲೀಸರು ಅಸಹಾಯಕ ರಾಗುತ್ತಿದ್ದಾರೆ. ಹೀಗಾಗಿ ನೇಹಾ ಹಿರೇಮಠ ‌ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ನೇಹಾ ತಂದೆ ನಿರಂಜನ‌ ಹಿರೇಮಠ ಅವರು ರಾಜ್ಯ ಸರ್ಕಾರದ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಹೀಗಾಗಿ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ.ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ. ರಾಜಕಾರಣಿಗಳು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪೊಲಿಸರು ಅಸಹಾಯಕರಾಗುತ್ತಿದ್ದಾರೆ ಎಂದರು.

    ಬಿಜೆಪಿಯವರಿಗೆ ಹಿಂದುಗಳ ಕೊಲೆಯಾಗದೆ ಖುಷಿ ಎಂಬ ಸಚಿವ ಸಂತೋಷ ಲಾಡ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ನೇಹಾ ಹಿರಮೇಠ ಅವರನ್ನು ಒಂದು ಜಾತಿಗೆ ಸಿಮೀತ, ಮಾಡಬೇಡಿ. ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ರಕ್ಷಣೆ ಕೊಡಲು ಆಗಿಲ್ಲ. ಹಾಡ ಹಗಲೇ ಬೆಳೆದು ಬಾಳಬೇಕಾದ ಯುವತಿಯ ಕೊಲೆ ಆಗಿದೆ. ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap