ಬೆಂಗಳೂರು
ಆ.27ಕ್ಕೆ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಿಗದಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಪರೀಕ್ಷೆ ಮುಂದೂಡಬೇಕೆಂದು ಹೇಳುತ್ತಿದ್ದಾರೆ. ಆದರೆ ನಾವು ಈಗ ಪರೀಕ್ಷೆಯನ್ನು ಮುಂದೂಡುವುದಿಲ್ಲ. ಒಂದು ಪತ್ರಿಕೆಯನ್ನು ಮಾತ್ರ ಮುಂದೂಡಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಆ.25ಕ್ಕೆ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಅಂದು ಐಪಿಬಿಎಸ್ ಪರೀಕ್ಷೆ ಇರುವ ಕಾರಣದಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿತ್ತು. ಇದೀಗ ಆ.27ಕ್ಕೆ ಪರೀಕ್ಷೆ ನಿಗದಿಯಾಗಿದೆ.
ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ನೀವೇ ಎಲ್ಲವನ್ನೂ ಹೇಳ್ತಿದ್ದೀರಿ. ಈಗ ನೀರಿನ ದರ ಏರಿಕೆ ಎಂದಿದ್ರಿ, ಇನ್ನೂ ಏರಿಸಿಲ್ಲ. ಬಹಳ ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಜಲಮಂಡಳಿಯೂ ಕಷ್ಟದ ಪರಿಸ್ಥಿತಿಯಲ್ಲಿ ಇದೆ. ಆದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೆ ಹೇಳಿದ್ದಾರೆ ಎಂದಿದ್ದಾರೆ.
ಮೂಡ ಪ್ರಕರಣದಲ್ಲಿ ಬಿಜೆಪಿಗರು ಪಾದಯಾತ್ರೆ ಮಾಡಿದರು. ನಾವು ಅದನ್ನು ರಾಜಕಾರಣಿವಾಗಿ ಎದುರಿಸಿದ್ದೇವೆ. ರಾಜ್ಯಪಾಲರ ಪ್ರಾಸ್ಯೂಕ್ಯೂಷನ್ ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ರಾಷ್ಟ್ರಪತಿಗಳಿಗೆ ದೂರು ವಿಚಾರವಾಗಿ ಮಾತನಾಡಿದ್ದು, ಎಲ್ಲಾ ಅಭಿಪ್ರಾಯಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಸರ್ಕಾರದ 11 ಬಿಲ್ ವಾಪಸ್ ಕಳುಹಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಾಪಸ್ ಕಳುಹಿಸಿರುವ ಬಿಲ್ಗಳು ಸದನದಲ್ಲಿ ಪಾಸ್ ಆಗಿದ್ದವು. ವಿವರಣೆ ಕೇಳಿದ್ರೆ ಕೊಡುತ್ತಿದ್ದೆವು, ಆದರೆ ವಾಪಸ್ ಕಳುಹಿಸಿದ್ದಾರೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.