ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ರಸ್ತೆ ತಡೆದು ಆಕ್ರೋಶ
ಆನೇಕಲ್:
ತಾಲ್ಲೂಕಿನ ಚಂದಾಪುರದ ಬಳಿಯಿರುವ ಸ್ಟೇಟ್ ಬ್ಯಾಂಕ್ ನ ಮ್ಯಾನೇಜರ್ ರವರ ಕನ್ನಡ ವಿರೋಧಿತನವನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮತಿಯ ಕಾರ್ಯಕರ್ತರು ಬ್ಯಾಂಕ್ ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಉದ್ಯೋಗಿ ಹಾಗೂ ಅಧಿಕಾರಿಗಳಿಂದ ಕನ್ನಡ ನೆಲ, ಭಾಷೆಯನ್ನು ಅವಮಾನಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ತಮ್ಮ ಬ್ಯಾಂಕ್ ಗೆ ಬರುವ ಗ್ರಾಹಕರೊಂದಿಗೆ ಕನಿಷ್ಟ ಸೌಜನ್ಯವಾಗಿ ಮಾತನಾಡದ ಬ್ಯಾಂಕ್ ಅಧಿಕಾರಿಗಳು ಉದ್ದಟತನವಾಗಿ ವರ್ತಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಹಿರಿಯ ಆಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವವರಿಗೆ ನಿರಂತರವಾಗಿ ಹೋರಾಟ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನಾವು ಎಲ್ಲಿಯೇ ಹುಟ್ಟಿರಬಹುದು. ಆದರೆ, ನಾವು ಕೆಲಸ ಮಾಡುವ ಪ್ರದೇಶದ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿರುತ್ತದೆ. ಆದರೆ, ಉತ್ತರ ಭಾರತದ ಬ್ಯಾಂಕ್ ಅಧಿಕಾರಿಗಳು ಕನ್ನಡಿಗರ ಬಗ್ಗೆ ಹಾಗೂ ಭಾಷೆಯ ಕುರಿತು ಉದ್ದಟತನವನ್ನಾಗಿ ವರ್ತಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕೆಆರ್ ಎಸ್ ಪಕ್ಷ ನಿರಂತರವಾಗಿ ಹೋರಾಟ ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ತಿಳಿಸಿದರು.
