ಗುಬ್ಬಿ ವಿಜೃಂಭಣೆಯಿಂದ ನೆರವೇರಿದ ಚನ್ನಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಕೃತಿಕೋತ್ಸವ

ಗುಬ್ಬಿ:

      ಇತಿಹಾಸ ಪ್ರಸಿದ್ಧ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಹಾಗೂ ಬ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ಯವರ ಕೃತಿಕೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆಡೆಯಿತು, ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಲೇ ಪ್ರಾರಂಭವಾದ ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಗಳು ಸಂಜೆಯವರೆಗೆ ನೆಡೆದವು

    ಸಂಜೆ ದೇವಾಲಯದ ಆವರಣದಲ್ಲಿ ದೀಪೋತ್ಸವವನ್ನು ಬರುವ ಭಕ್ತರೆಲ್ಲರೂ ಸೇರಿ ನೆರವೇರಿಸಿಕೊಟ್ಟರು.

    ರಾತ್ರಿ ಹನ್ನೊಂದು ಗಂಟೆಗೆ ಸ್ವಾಮಿಯವರನ್ನು ಹೂವಿನ ವಾನದಲ್ಲಿ ಕೂರಿಸಿ ನಂತರ ದೇವರ ಮುಂದೆ ಗೊನೆ ಸಹಿತ ಬಾಳೆಕಂದುಗಳನ್ನು ಕಡಿದು ಸ್ವಾಮಿಯವರಿಗೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದರು 

    ಉತ್ಸವ ವಕ್ಕೆ ತುಮಕೂರು ಉಪವಿಭಾಗಾಧಿಕಾರಿ ನಾಯಿದಾ ಜಮ್ ಜಮ್ ಬಾಳೆ ಕಂದು ಕಡಿಯುವುದರಮೂಲಕ ಚಾಲನೆ ನೀಡಿದರು

    ಈ ಉತ್ಸವವು ಗುಬ್ಬಿಯ ರಾಜ ಬೀದಿಗಳಲ್ಲಿ ಚಲಿಸಿ ಕೊನೆಗೆ ದೊಡ್ಡಪೇಟೆ ಮತ್ತು ದೇಶಾವರಪೇಟೆಯ ಕೊನೆಯ ವೃತ್ತ ಹಳೆಯ ಬಂಗಲಿ ಮಠದ ಬಳಿ ಕೊನೆಗೊಂಡಿತು.

   ಶುಕ್ರವಾರ ಬೆಳಿಗ್ಗೆಯಿಂದ ಪ್ರಾರಂಭವಾದ ದೂಳ್ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿಚಿಕ್ಕ ಗುಬ್ಬಿಯಪ್ಪನ ದೇವಾಲಯದ ಬಳಿ ಅಂತ್ಯ ಗೊಂಡಿತು.ಈ ಉತ್ಸವದಲ್ಲಿ ವೀರಗಾಸೆ, ನಂದಿ ಧ್ವಜ ಹಾಗೂ ವಿವಿಧ ಜಾನಪದ ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು

   ಈ ಸಂದರ್ಭದಲ್ಲಿ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ತುಮಕೂರಿನ ಚಾಮುಂಡೇಶ್ವರಿ ರೈಸ್ ಮಿಲ್ ಮಾಲೀಕರಾದ ನಂಜುಂಡಪ್ಪ ಮತ್ತು ಮಕ್ಕಳು ಮಾಡಿದ್ದರು,

     ಕಾರ್ಯಕ್ರಮ ದಲ್ಲಿ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ತುಮಕೂರು ವಿವಿ ಉಪ ಕುಲಪತಿ ಲಿಂಗರಾಜ್, ತಹಶೀಲ್ದಾರ್ ಹಾಗೂ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಆರತಿ ಬಿ. , ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉಂಡೆ ರಾಮಣ್ಣ, ದಾಸೋಹ ಸಮಿತಿ ಅಧ್ಯಕ್ಷ ಕಾಯಿ ಸುರೇಶ್, ಕಾರ್ಯದರ್ಶಿ ಜಿ ಟಿ ಸುರೇಶ್, ಪಣಗಾರ್ ನಿಜಲಿಂಗಪ್ಪ  ಪಟೇಲ್ ಕೆಂಪೇಗೌಡರು, ಯಜಮಾನ್ ಕುಮಾರ್, ಫೇಷ್ಕಾರ್ ವಿನೋದ್, ಪ್ರಧಾನ ಅರ್ಚಕ ರಾಜೇಶ್, ಆಗಮಿಕರಾದ ರುದ್ರಪ್ರಸಾದ್, ಅರ್ಚಕರಾದ ನಿರಂಜನ್ ಮೂರ್ತಿ, ರೋಹಿತ್, ಹಾಗು 18 ಕೋಮಿನ ಮುಖಂಡರು, ಭಕ್ತರು ಭಾಗವಹಿಸಿದ್ದರು,

Recent Articles

spot_img

Related Stories

Share via
Copy link