ಮಾರ್ಗ ಬದಲಾವಣೆ : ಗುಬ್ಬಿ ಪಟ್ಟಣಕ್ಕೆ ಬಾರದ ಕೆ ಎಸ್ ಆರ್ ಟಿ ಸಿ ಬಸ್ಸುಗಳು

ಗುಬ್ಬಿ:

    ಗುಬ್ಬಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಮುದಿಗೆರೆ ಗೇಟ್ ನಿಂದ ಎನ್ ಮತ್ತಿಘಟ್ಟದ ವರೆಗೆ ವೈಟ್ ಟ್ಯಾಪಿಂಗ್ ಅಂದರೆ ಸಿಮೆಂಟ್ ಕಾಂಕ್ರೀಟ್ ರಸ್ತೆಯ ನಿರ್ಮಾಣ ಮಾಡುತ್ತಿದ್ದುದು ಸರಿಯಷ್ಟೇ ಈ ಕಾಮಗಾರಿ ಕಳೆದ ಎರಡು ಮೂರು ತಿಂಗಳಿಂದ ಆಮೆಗತಿಯಲ್ಲಿ ಸಾಗಿದ್ದು ದಿನವೊಂದಕ್ಕೆ ಸುಮಾರು 500 ಮೀಟರ್ ರಸ್ತೆ ನಿರ್ಮಾಣವಾಗುತ್ತಿದೆ,

“ಕಳೆದ ಶನಿವಾರ ತುಮಕೂರಿನಿಂದ ಗುಬ್ಬಿಗೆ ಬರಲು ಶಿವಮೊಗ್ಗ ಬಸ್ಸು ಹತ್ತಲು ಹೋದರೆ ಗುಬ್ಬಿಗೆ ಹೋಗುವ ರಸ್ತೆ ಬಂದ್ ಆಗಿದ್ದು ನಾವು ಬೈ ಪಾಸ್ ನಲ್ಲಿ ಹೋಗುತ್ತೇವೆ ಎಂದು ನನ್ನ ಕೆಳಗೆ ಇಳಿಸಿದರು ಎಂದು ಹಿರಿಯ ನಾಗರಿಕ ಗೋಪಾಲ್ ದೀಕ್ಷಿತ್ ಬೇಸರ ವ್ಯಕ್ತಪಡಿಸಿದರು”   ಈಗಾಗಲೇ ಬಾಗಶಃ ಸಿಂಗೋನಹಳ್ಳಿಯಿಂದ ಹಳೆಯ ಸ್ವಾತಿ ಹೋಟೆಲ್ ವರೆಗೆ ರಸ್ತೆ ಯಾಗಿದ್ದು ರೈಲ್ವೆ ಮೇಲ್ಸೇತುವೆ ಮೇಲೆ ಬಾಕಿ ಇರುವ ರಸ್ತೆ ಕೆಲಸ ಈಗ ಪ್ರಾರಂಭವಾಗಿದೆ, ಈ ರಸ್ತೆ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸಂಚಾರದಿಂದ ರಸ್ತೆ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ತುಮಕೂರು ಜಿಲ್ಲಾಧಿಕಾರಿಗಳು ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಂಚಾರ ಮಾರ್ಗ ಬದಲಾಯಿಸಿ ಆದೇಶ ಹೊರಡಿಸಿದ್ದರು ಆ ಪ್ರಕಾರ ಕೆಲವು ಬಸ್ಸುಗಳು ಮಾತ್ರ ಗುಬ್ಬಿಗೆ ಬಂದು ಹೋಗುತ್ತಿದ್ದು ಹೆಚ್ಚಿನ ಬಸ್ಸುಗಳು ಅದರಲ್ಲೂ ಚಾಲಕರೇ ನಿರ್ವಾಹಕ ರಾಗಿರುವ ಬಸ್ಸುಗಳು ಬೆಂಗಳೂರು ಮತ್ತು ತುಮಕೂರು ನಿಲ್ದಾಣಗಳಲ್ಲೇ ಗುಬ್ಬಿಯ ಪ್ರಯಾಣಿಕರನ್ನ ನಿರಾಕರಿಸುವುದು ಸಾಮಾನ್ಯ ಸಂಗತಿಯಾಗಿದ್ದು ಈ ಬಗ್ಗೆ ಇಲಾಖೆ ಯವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎನ್ನುವುದೇ ನಿತ್ಯ ಸಂಚಾರ ಮಾಡುವ ಪ್ರಯಾಣಿಕರ ಅಹವಾಲಾಗಿದೆ

“ಗುಬ್ಬಿಯನ್ನು ಸಂಪರ್ಕ ಮಾಡಲು ರಾಯವಾರ ಬಳಿ ಸರ್ವಿಸ್ ರಸ್ತೆಗೆ ಮುಖ್ಯ ರಸ್ತೆಯಿಂದ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸಿದರೆ ಬಸ್ಸುಗಳು ಗುಬ್ಬಿ ಪಟ್ಟಣಕ್ಕೆ ರೈಲ್ವೆ ಸ್ಟೇಷನ್ ಮುಖಾಂತರ ಬರಲು ಅನುಕೂಲವಾಗುತ್ತದೆ ಎಂದು ಗುಬ್ಬಿ ಪಟ್ಟಣ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಎಚ್ ಡಿ ಎಲ್ಲಪ್ಪ ತಿಳಿಸಿದ್ದಾರೆ”    ಗುಬ್ಬಿ ಬೈ ಪಾಸ್ ಮೂಲಕ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ಸುಗಳು ಸಂಚರಿಸುತ್ತಿದ್ದು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಹೆದ್ದಾರಿ ಬಂದ್ ಮಾಡಿ ಮುಷ್ಕರ ಮಾಡಬೇಕಾದೀತು ಎಂದು ಗುಬ್ಬಿಯ ಹಲವು ಸಂಘಟನೆಗಳು ಎಚ್ಚರಿಕೆ ನೀಡಿವೆ

Recent Articles

spot_img

Related Stories

Share via
Copy link