ಮತದಾನದ ದಿನ ರಜೆ ಘೋಷಿಸಿದ ಕೆಎಸ್‌ಆರ್‌ಟಿಸಿ ……!

ಬೆಂಗಳೂರು

   ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ಸರ್ಕಾರ ಸಾರ್ವಜನಿಕ ರಕೆ ಃಓಷಿಸಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ಮತ್ತು ಮೇ 07 ರಂದು ಎರಡು ದಿನ ಮತದಾನ ನಡೆಯಲಿದೆ. ಆ ದಿನಗಳಲ್ಲಿ ಆಯಾ ಲೋಕಸಭಾ ವ್ಯಾಪ್ತಿಯಲ್ಲಿ ರಜೆ ಘೋಷಿಸಲಾಗಿದೆ.

   ಇದೇ ವೇಳೆ ಕೆಸ್‌ಆರ್‌ಟಿಸಿ ಕೂಡ ತನ್ನ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ. ವೇತನ ಸಹಿತ ರಜೆ ಘೋಷಿಸಿದೆ. ಹೀಗಾಗಿ ಈ ದಿನಗಳಂದು ಬಸ್‌ಗಳು ಓಡಾಡುವುದಿಲ್ಲವೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಬರುತ್ತದೆ. ಹೀಗಾಗಿ, ನಿಗಮ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

    ‘ದಿನಾಂಕ:26-04-2024 ಮತ್ತು 07-05-2024 ರಂದು ಕರ್ನಾಟಕ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆ-2024 ರ ನಿಮಿತ್ತ ರಾಜ್ಯ ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಸೂಚಿಸಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ನೆಗೋಷಿಯೇಬಲ್‌ ಇಸ್ಟ್ರುಮೆಂಟ್ಸ್ ಆಕ್ಟ್ 1981 ರ ಪ್ರಕಾರ ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ. 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 135 (ಬಿ) ರಡಿಯಲ್ಲಿ ವೇತನ ಸಹಿತ ರಜೆ ನೀಡಲು ಆದೇಶಿಸಿದೆ”.

    ಕ.ರಾ.ರ.ಸಾ.ನಿಗಮವು ಅಗತ್ಯ ಸೇವೆಯಡಿಯಲ್ಲಿ ಬರುವುದರಿಂದ ದಿನಾಂಕ: 26/04/2024 ಹಾಗೂ ದಿನಾಂಕ: 07/05/2024 ರಂದು ನಡೆಯುವ ಲೋಕಸಭಾ ಚುನಾವಣೆ ದಿನದಂದು ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ.

   ಘಟಕ, ವಿಭಾಗೀಯ ಕಾರ್ಯಾಗಾರ, ಪ್ರಾದೇಶಿಕ ಕಾರ್ಯಾಗಾರ, ಕರಾಸಾ ಮುದ್ರಣಾಲಯ ಹಾಗೂ ಕರಾಸಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತದಾನದ ದಿನಾಂಕದಂದು ವೇತನ ಸಹಿತ ರಜೆಯನ್ನು ನೀಡುವುದು. ಈ ಹಿನ್ನೆಲೆಯಲ್ಲಿ ಚುನಾವಣಾ ದಿನದಂದು ಅವಶ್ಯಕತೆಗೆ ಅನುಗುಣವಾಗಿ ಕನಿಷ್ಠ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳುವುದು ಎಂದು ಹೇಳಿದೆ.

    ಚುನಾವಣಾ ದಿನದಂದು ಕರ್ತವ್ಯದ ಮೇಲಿರುವ ಸಿಬ್ಬಂದಿಗೆ ಅವರ ಅನುಕೂಲಕ್ಕನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಅಥವಾ ಕರ್ತವ್ಯದ ಅವಧಿಯ ಮಧ್ಯೆ ಮತ ಚಲಾಯಿಸಲು ಅವಕಾಶವನ್ನು ಮಾಡಿಕೊಡುವಂತೆ / ಅನುಮತಿ ನೀಡುವಂತೆ ಸೂಕ್ತಾಧಿಕಾರಿಗಳು ಆದೇಶಿಸಿರುತ್ತಾರೆ. ಅದರಂತೆ, ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಆದೇಶಿಸಿದೆ. ಹೀಗಾಗಿ ಮತದಾನದ ದಿನದಂದು ಕನಿಷ್ಟ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಬಸ್ಸುಗಳ ಸಂಖ್ಯೆ ಕಡಿಮೆಯಿರಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap