ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್ ಕೊಟ್ಟ ಸಾರಿಗೆ….!

ಬೆಂಗಳೂರು

    ಯುಗಾದಿ, ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ… ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ  ಅಂತ ಮನೆ ಕಡೆ ಹೊರಟವರ ಜೇಬಿಗೆ ಗುನ್ನ ಇಡುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಪ್ರವೇಟ್ ಬಸ್  ಮಾಲೀಕರು, ಈ ಬಾರಿಯೂ ವಸೂಲಿಗೆ ಮುಂದಾಗಿದ್ದಾರೆ.

    ಈ ಬಾರಿ ಸಾಲಾಗಿ ನಾಲ್ಕೈದು ದಿನ ರಜೆ ಸಿಕ್ಕಿದ್ದು ಜನ ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಇಂದು (ಗುರುವಾರ) ಮಹಾವೀರ ಜಯಂತಿ, ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಶನಿವಾರ ಸೆಕೆಂಡ್ ಸ್ಯಾಟರ್​ಡೇ ಮತ್ತು ಹನುಮಜಯಂತಿ ರಜೆ, ಭಾನುವಾರ ಹೇಗೂ ರಜೆ ಸಿಗುತ್ತದೆ. ಸೋಮವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ. ಸರ್ಕಾರಿ ರಜೆ. ಅಲ್ಲಿಗೆ ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಐದು ದಿನ ರಜೆ ಸಿಗುತ್ತದೆ. ಈ ಹಿನ್ನೆಲೆ ಜನ ಬೆಂಗಳೂರಿನಿಂದ  ಊರಿಗೆ ಹೋಗಲು ಮುಂದಾಗುತ್ತಿದ್ದಾರೆ.

ಹಿಂದಿನ ದರ = 750 – 2999

ಪ್ರಸ್ತುತ ದರ = 850 – 10,000

ಬೆಂಗಳೂರು- ಧರ್ಮಸ್ಥಳ

ಹಿಂದಿನ ದರ = 600-850

ಪ್ರಸ್ತುತ ದರ = 1250-2000

ಬೆಂಗಳೂರು-ಮೈಸೂರು

ಹಿಂದಿನ ದರ = 190-1600

ಪ್ರಸ್ತುತ ದರ = 300-5999

ಬೆಂಗಳೂರು-ಕೊಡಗು

ಹಿಂದಿನ ದರ = 580-990

ಪ್ರಸ್ತುತ ದರ = 1000-1900

ಬೆಂಗಳೂರು-ಚಿಕ್ಕಮಗಳೂರು

ಹಿಂದಿನ ದರ = 500-700

ಪ್ರಸ್ತುತ ದರ = 599-1150

ಬೆಂಗಳೂರು-ಮಂಗಳೂರು

ಹಿಂದಿನ ದರ = 600-2999

ಪ್ರಸ್ತುತ ದರ = 900-3000

ಬೆಂಗಳೂರು-ಹುಬ್ಬಳ್ಳಿ

ಹಿಂದಿನ ದರ = 759-3,800

ಪ್ರಸ್ತುತ ದರ = 819-10,000

ಬೆಂಗಳೂರು- ಕಾರವಾರ

ಹಿಂದಿನ ದರ = 850-2999

ಪ್ರಸ್ತುತ ದರ = 1499-3000

ಬೆಂಗಳೂರು-ಕಲ್ಬುರ್ಗಿ

ಹಿಂದಿನ ದರ = 850-4000

ಪ್ರಸ್ತುತ ದರ = 1399-2400

ಬೆಂಗಳೂರು-ಶಿವಮೊಗ್ಗ

ಹಿಂದಿನ ದರ = 350-1899

ಪ್ರಸ್ತುತ ದರ = 799-2299 

   ಈ ಬಾರಿ ರಜೆಗೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಮಾತ್ರ ದರ ಏರಿಕೆ ಮಾಡಿಲ್ಲ. ಕೆಎಸ್ಆರ್​​ಟಿಸಿ ಬಸ್​ಗಳೂ ದರ ಏರಿಕೆ ಮಾಡಿವೆ. ಕೆಎಸ್ಆರ್​​ಟಿಸಿ ಬಸ್​ಗ ಶೇ 15 ರಿಂದ 20 ರಷ್ಟು ದರ ಏರಿಕೆ ಮಾಡಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಸಾಮಾನ್ಯವಾಗಿ ಬೆಂಗಳೂರು – ಹುಬ್ಬಳ್ಳಿಗೆ ಎಸಿ ಸ್ಲೀಪರ್ ಸಾಮಾನ್ಯ ದರ – 1100 ರುಪಾಯಿ. ಆದ್ರೆ ಬುಧವಾರ -1350 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ -800 ರುಪಾಯಿ ಬುಧವಾರ – 1100 ರೂ ಆಗಿದೆ. ಬೆಂಗಳೂರು – ಬೀದರ್ ಎಸಿ ಸ್ಲೀಪರ್ ಸಾಮಾನ್ಯ ದರ – 1500 ಇತ್ತು. ಈಗ 1900 ರಿಂದ 2100 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ – 1200 ಯಿಂದ 1850 ರೂ.ಗೆ ಜಾಸ್ತಿ ಆಗಿದೆ. ಬೆಂಗಳೂರು – ಮಂಗಳೂರು ಎಸಿ ಸ್ಲೀಪರ್ ಸಾಮಾನ್ಯ ದರ – 1500 ರೂ. ಈಗಿನ ದರ – 1850 ರೂ. ಆಗಿದೆ. ನಾನ್ ಎಸಿ ಸಾಮಾನ್ಯ ದರ – 1100 ರೂ, ಈಗಿನ ದರ – 1500 ಆಗಿದೆ. 

   ಒಟ್ಟಿನಲ್ಲಿ ಖಾಸಗಿ ಬಸ್​ಗಳೇನೋ ದುಪ್ಪಟ್ಟು ದರ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದರೆ, ಇತ್ತ ಸಾರ್ವಜನಿಕ ಸಾರಿಗೆಯಾಗಿರುವ ಕೆಎಸ್​ಆರ್​ಟಿಸಿ ಕೂಡ ಹೆಚ್ಚಿನ ದರ ಪಡೆಯಲು ಮುಂದಾಗಿರುವುದು ದುರಂತವೇ ಸರಿ.