ಹೊಸ ತಲೆಮಾರಿನ ಟಿಕೆಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಿದೆ KSRTC …….!

ಬೆಂಗಳೂರು 

    ನಗದು ರಹಿತ ಪ್ರಯಾಣಕ್ಕೆ ಪ್ರಯಾಣಿಕರ ಒಲವು ಹೆಚ್ಚುತ್ತಿರುವ ಕಾರಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ನಗದು ರಹಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಮಾಡುವುದು ಹಾಗೂ ಚಿಲ್ಲರೆ ಕಿರಿಕಿರಿ ಇಲ್ಲದೆ ಸೇವೆ ಒದಗಿಸಲು ನಗದು ರಹಿತ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿ ಮಾಡುತ್ತಿದೆ.

    ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಮತ್ತು ಇತರ ನಗದು ರಹಿತ ವಹಿವಾಟು ವಿಧಾನಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂಗಳು) ಬಸ್ ಕಂಡಕ್ಟರ್‌ಗಳು ಶೀಘ್ರದಲ್ಲೇ ಬಳಸಲಿದ್ದಾರೆ. ಇಬಿಕ್ಸ್ ಕ್ಯಾಸ್ ಲಿಮಿಟೆಡ್ ಕಂಪನಿ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅನ್ನು ನೀಡಲು ದೀರ್ಘಾವಧಿಯ ಒಪ್ಪಂದವನ್ನು ಪಡೆದುಕೊಂಡಿದೆ. ವಿದ್ಯುನ್ಮಾನ ಟಿಕೆಟ್ ಯಂತ್ರದಲ್ಲೇ ಏಕೀಕೃತ ಹಣ ಪಾವತಿ ವಿಧಾನ ಕೂಡ ಇರಲಿದೆ.

   ಇಬಿಕ್ಸ್ ಕ್ಯಾಸ್ ಲಿಮಿಟೆಡ್ ಕಂಪನಿಗೆ ಇತ್ತೀಚೆಗೆ ಕೆಎಸ್ಆರ್‌ಟಿಸಿ ಅಡಿಯಲ್ಲಿ ಎಲ್ಲಾ ರಾಜ್ಯ ಚಾಲಿತ ಬಸ್‌ಗಳಿಗೆ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗೆ ಪರಿಕಲ್ಪನೆ, ಅಭಿವೃದ್ಧಿ, ಸ್ಥಾಪನೆ, ನಿರ್ವಹಣೆ, ಮತ್ತು ಪರಿವರ್ತನೆಗಾಗಿ ದೀರ್ಘಾವಧಿಯ ಗುತ್ತಿಗೆಯನ್ನು ನೀಡಲಾಗಿದೆ. ಈ ಒಪ್ಪಂದದ ಆರಂಭಿಕ ಹಂತವು ಐದು ವರ್ಷಗಳವರೆಗೆ ಇರಲಿದೆ ” ಎಂದು ಕೆಎಸ್ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಆರಂಭದಲ್ಲಿ 8,000 ಬಸ್‌ಗಳಲ್ಲಿ 10,245 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಆಳವಡಿಸಲಾಗುತ್ತದೆ. ನಂತರದ ಐದು ವರ್ಷಗಳಲ್ಲಿ ಹೆಚ್ಚುವರಿ 15,000 ಹೊಸ ಯಂತ್ರಗಳ ಖರೀದಿ ಮಾಡಲು ಯೋಜಿಸಲಾಗಿದೆ. ಐಟಿಎಂಎಸ್ ಶುಲ್ಕ ಟಿಕೆಟಿಂಗ್ ಮತ್ತು ಸಂಗ್ರಹಣೆಯನ್ನು ಸ್ವಯಂಚಾಲಿತಗೊಳಿಸುವ ಗುರಿಯನ್ನು ಹೊಂದಿದೆ. ಇಟಿಎಂಗಳು ಮತ್ತು ಸಂಬಂಧಿತ ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ. ಬಸ್ ಟಿಕೆಟ್‌ ನೀಡುವಲ್ಲಿ ನಗದು ರಹಿತ ವಹಿವಾಟಿಗಾಗಿ ಪ್ರಯಾಣಿಕರಿಂದ ದೀರ್ಘಕಾಲದಿಂದ ವಿನಂತಿ ಬರುತ್ತಿತ್ತು.ಅನೇಕ ಜನರು ಈಗಾಗಲೇ ಯುಪಿಐ ಮತ್ತು ಇತರ ನಗದು ರಹಿತ ಟಿಕೆಟ್ ಪಡೆಯಲು ಆಸಕ್ತಿ ವಹಿಸುತ್ತಿದ್ದಾರೆ. ನಗದು ಬದಲಾವಣೆ ಒದಗಿಸುವುದು, ಚಿಲ್ಲರೆ ಸಮಸ್ಯೆಗಳು ಬಸ್ ಕಂಡಕ್ಟರ್‌ಗಳಿಗೆ ಸವಾಲಾಗಿದೆ. ನಗದು ರಹಿತ ವಹಿವಾಟು ಪರಿಚಯಿಸುವುದರಿಂದ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ಇಬ್ಬರಿಗೂ ಅನುಕೂಲವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿವರಿಸಿದ್ದಾರೆ.

   ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಬಸ್‌ನಲ್ಲಿ ಮತ್ತು ಟಿಕೆಟಿಂಗ್ ಪಾಯಿಂಟ್‌ಗಳಲ್ಲಿ ಸರತಿ ಸಾಲುಗಳಿಂದ ವಿನಾಯಿತಿ ಪಡೆಯಲು ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ತಮ್ಮ ಟಿಕೆಟ್‌ಗಳಿಗೆ ಪಾವತಿ ಮಾಡುವ ಮೂಲಕ ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap