ನಿಟ್ಟೂರು :
ಕಳ್ಳನೊಬ್ಬ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಜೇಬಿನಲ್ಲಿ ಹಣ ಕದ್ದು ನಿಟ್ಟೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ತುಮಕೂರು ಕಡೆಯಿಂದ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿ ಬೀರಸಂದ್ರದ ಚನ್ನೇಗೌಡ ಎಂಬುವರು ಸ್ವಗ್ರಾಮಕ್ಕೆ ತೆರಳುವಾಗ ಇವರ ಜೇಬಿನಲ್ಲಿದ್ದ 5,000 ರೂ.ಹಣವನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಜೇಬುಗಳ್ಳನನ್ನು ಹಿಂಬಾಲಿಸಿ ನಿಟ್ಟೂರು ಬಸ್ ನಿಲ್ದಾಣದಲ್ಲಿ ಆತನನ್ನು ಹಿಡಿದುಕೊಂಡಾಗ ಕಳ್ಳನಿಗೆ ಸ್ಥಳೀಯರಿಂದ ಧರ್ಮದೇಟು ಬಿದ್ದಿವೆ.
ನಿಟ್ಟೂರಿನಲ್ಲಿ ಇತ್ತೀಚೆಗೆ ಜೇಬುಗಳ್ಳತನ, ಮೊಬೈಲ್ ಕಳ್ಳತನ, ಕುಡುಕರ ಹಾವಳಿ, ಪುಂಡರ ಹಾವಳಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ