ಶಿವಮೊಗ್ಗ:
ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವು ಕ್ಷಣಗಳು ಬಾಕಿ ಉಳಿದಿವೆ. ಗೀತಾ ಶಿವರಾಜ್‌ಕುಮಾರ್ ಚುನಾವಣೆಗೆ ಇಳಿಯುತ್ತಿದ್ದಂತೆ ಶಿವರಾಜ್‌ಕುಮಾರ್ ಹಾಗೂ ಕುಮಾರ್ ಬಂಗಾರಪ್ಪ ನಡುವೆ ಮಾತು ಸಮರ ನಡೆಯುತ್ತಲೇ ಇದೆ. ಒಮ್ಮೆ ಕುಮಾರ್ ಬಂಗಾರಪ್ಪ ಟಾಂಗ್ ಕೊಟ್ಟರೆ, ಮತ್ತೊಮ್ಮೆ ಶಿವಣ್ಣ ಕೊಡುತ್ತಿದ್ದಾರೆ.
ಮೊನ್ನೆಯಷ್ಟೇ ಚುನಾವಣೆ ಆದ್ಮೇಲೆ ಜಾಗ ಖಾಲಿ ಮಾಡುತ್ತಾರೆ ಅನ್ನೋ ಅಂತ ಕುಮಾರ್ ಬಂಗಾರಪ್ಪ ಹೇಳಿಕೆಗೆ ಶಿವಣ್ಣ ತಿರುಗೇಟು ನೀಡಿದ್ದರು. ಆಕ್ಟಿಂಗ್ ಮಾಡ್ಬೇಕಾದ್ರೆ ಮಾಡಿದ್ರೆ ಸೂಪರ್ ಸ್ಟಾರ್ ಆಗಿರುತ್ತಿದ್ದರು ಎಂದಿದ್ದರು. ಈಗ ಕುಮಾರ್ ಬಂಗಾರಪ್ಪ ಸೊರಬದಲ್ಲಿ ಮತ್ತೆ ಶಿವಣ್ಣನ ಹೇಳಿಕೆಯನ್ನು ಇಟ್ಟುಕೊಂಡು ವ್ಯಂಗ್ಯವಾಡಿದ್ದಾರೆ.
ಶಿವಣ್ಣ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಹಾಡು ಹೇಳಿ, ಡ್ಯಾನ್ಸ್ ಮಾಡಿ ಎಂದು ಸಿನಿಪ್ರಿಯರು ಒತ್ತಡ ಹಾಕಿದ್ದರು. ಆ ವೇಳೆ ಶಿವಣ್ಣ ಪ್ರಚಾರದ ಸಂದರ್ಭದಲ್ಲಿ ಚುನಾವಣೆ ಆದ್ಮೇಲೆ 24 ಗಂಟೆ ಡ್ಯಾನ್ಸ್ ಮಾಡುತ್ತೀನಿ ಅಂತ ಹೇಳಿದ್ದನು ನೆನಪಿಸಿಕೊಂಡು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ. ನಿಮಗೆ ಡ್ಯಾನ್ಸ್ ಮಾಡಲೇಬೇಕು ಅಂತಿದ್ದರೆ, ಚಂದ್ರಗುತ್ತಿಗೆ ಬಂದು ಡ್ಯಾನ್ಸ್ ಮಾಡಿ ಎಂದು ಹೇಳಿದ್ದಾರೆ.
ಸೊರಬದಲ್ಲಿ ಪ್ರಚಾರದ ವೇಳೆ ಕುಮಾರ್ ಬಂಗಾರಪ್ಪ ವಿರುದ್ಧ ಶಿವಣ್ಣ ಕಿಡಿಕಾರಿದ್ದರು. ಅದನ್ನೇ ಮುಂದಿಟ್ಟುಕೊಂಡು ಕುಮಾರ್ ಬಂಗಾರಪ್ಪ ಮತ್ತೆ ಶಿವಣ್ಣನಿಗೆ ಟಾಂಗ್ ಕೊಟ್ಟಿದ್ದಾರೆ. “ವರ್ಷಕ್ಕೆ ಒಂದು ಸಾರಿ ಚಂದ್ರಗುತ್ತಿಯಲ್ಲಿ ಡ್ಯಾನ್ಸ್ ನಡೆಯುತ್ತೆ. ಅಲ್ಲಿಗೆ ಬಂದು ಡ್ಯಾನ್ಸ್ ಮಾಡಿ” ಶಿವಣ್ಣನಿಗೆ ಸವಾಲು ಎಸೆದಿದ್ದಾರೆ.
“ನಮ್ಮ ಬಾವನಿಗೆ ಗೊತ್ತಿಲ್ಲ. ಅವರು ಏನೋ ಹೇಳಿದ್ದಾರೆ. ಯಾರೋ ಕನ್ನಡ ಕಲಾಭಿಮಾನಿಗಳು ಹಾಡು ಹೇಳಿ, ಡ್ಯಾನ್ಸ್ ಮಾಡಿ ಅಂದರೆ, ಅವರು ಹೇಳುತ್ತಾ ಬಂದಿದ್ದಾರೆ. ಈ ಚುನಾವಣೆ ಆದ್ಮೇಲೆ ಅಂದ್ರೆ ಮೇ 7ನೇ ತಾರೀಕು ಆದ್ಮೇಲೆ 24 ಗಂಟೆ ಮತ್ತು ಇಡೀ ದಿನ ಡ್ಯಾನ್ಸ್ ಮಾಡುತ್ತಲೇ ಇರುತ್ತೀನಿ ಅಂದಿದ್ದಾರೆ. ದಯಮಾಡಿ ನಿಮಗೆ ಡ್ಯಾನ್ಸ್ ಮಾಡಲೇಬೇಕು ಅಂತ ಇಚ್ಛೆ ಇದ್ದರೆ, ವರ್ಷಕ್ಕೆ ಒಂದು ಸಾರಿ ಚಂದ್ರಗುತ್ತಿ ಜಾತ್ರೆ ನಡೀತಿದೆ. ಅಲ್ಲಿ ಬಂದು ಡ್ಯಾನ್ಸ್ ಮಾಡಿ. ಸೊರಬದಲ್ಲಿ ಬಸವಣ್ಣ ಹಾಗೂ ರಂಗನಾಥಸ್ವಾಮಿ ಜಾತ್ರೆ ನಡೆಯುತ್ತೆ ಅಲ್ಲಿಗೆ ಬಂದು ಡ್ಯಾನ್ಸ್ ಮಾಡಿ.” ಎಂದು ಕುಮಾರ್ ಬಂಗಾರಪ್ಪ ಗುಡುಗಿದ್ದಾರೆ.
ಇದೇ ವೇಳೆ ನಿಮಗೆ ಒಳ್ಳೆಯದು ಮಾಡಬೇಕು ಅಂತಿದ್ದರೆ, ಜಾತ್ರೆಗಳಿಗೆ ಬಂದು ಡ್ಯಾನ್ಸ್ ಎಂದು ಕುಮಾರ್ ಬಂಗಾರಪ್ಪ ತಮ್ಮ ಬಾವ ಶಿವಣ್ಣಗೆ ಟಾಂಗ್ ಕೊಟ್ಟಿದ್ದಾರೆ. “ನೀವು ಈ ಊರಿನ ಅಳಿಯಂದಿರು ಅಂತೀರಿ. ನನ್ನ ಬಾವಂದಿರು ಅಂತೀರಿ. ಕನ್ನಡ ಕಲಾಭಿಮಾನಿಗಳು ಅಂತ ಏನೇನೋ ಅಂತೀರಿ. ರಾಜ್‌ಕುಮಾರ್ ಅವರ ಮಕ್ಕಳು ಅಂತೀರಿ. ಇದನ್ನು ಇಟ್ಕೊಂಡು ಒಳ್ಳೆಯದು ಮಾಡ್ಬೇಕು ಅಂತಿದ್ದರೆ, ಡ್ಯಾನ್ಸ್ ಮಾಡಲೇಬೇಕು ಅಂತಿದ್ದರೆ, ಪ್ರತಿ ವರ್ಷವೂ ಬಂದು ಚಂದ್ರಗುತ್ತಿ ಜಾತ್ರೆಗೆ ಬಂದು ಡ್ಯಾನ್ಸ್ ಮಾಡಿ.” ಎಂದಿದ್ದಾರೆ.
ಇದೇ ವೇಳೆ ಗೀತಾ ಶಿವರಾಜ್‌ಕುಮಾರ್‌ಗೆ ಏನೂ ಗೊತ್ತಿಲ್ಲ. ಅವರು ಡಮ್ಮಿ ಕ್ಯಾಂಡಿಡೇಟ್. ಈ ಬಾರಿ ಚುನಾವಣೆಯಲ್ಲಿ ಸೋಲುವುದು ನೂರಕ್ಕೆ ನೂರರಷ್ಟು ಪಕ್ಕಾ ಎಂದಿದ್ದಾರೆ. “5 ವರ್ಷಕ್ಕೆ ಒಂದು ಸಾರಿ ಚುನಾವಣೆ ಮಾಡುತ್ತೀರಿ. ಜೆಡಿಎಸ್ ಮಾಡ್ತೀರೋ ಮತ್ತೊಂದು ಮಾಡುತ್ತೀರೋ.. ಸೋಲುವುದಂತೂ ಗ್ಯಾರಂಟಿ. ನೂರಕ್ಕೆ ನೂರರಷ್ಟು ಸೋಲುತ್ತಾರೆ.” ಎಂದಿದ್ದಾರೆ.
ಚಿತ್ರರಂಗದಿಂದ ಕೇವಲ ಬೆರಳೆಣಿಕೆಯಷ್ಟು ಕಲಾವಿದರು ಬಂದು ಪ್ರಚಾರ ಮಾಡಿದ್ದಾರಷ್ಟೇ. ಫೋನ್ ಮಾಡಿ, ಬನ್ನಿ ಅಂತ ಕರೆಯುವ ಪರಿಸ್ಥಿತಿ ಬಂದಿದೆ ಎಂದು ಶಿವಣ್ಣಗೆ ಕುಮಾರ್ ಬಂಗಾರಪ್ಪ ಟಾಂಕ್ ಕೊಟ್ಟಿದ್ದಾರೆ.
“ಬೆಳವಣಿಗೆ ಅನ್ನೋದು ಮುಂದಿನ ಪೀಳಿಗೆಯನ್ನು ನೋಡಿ ಹಾಕಿಕೊಂಡಿರುವಂತಹದ್ದು. ಇದು ದ್ವೇಷದ ರಾಜಕಾರಣ. ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಬೇಕು ಅನ್ನೋ ಕಾರಣದಿಂದ ಹೀಗೆ ಮಾಡುತ್ತಿದ್ದಾರೆ. ಇದಕ್ಕೆ ಬಲಿಪಶು ಆಗಿರೋದು ಯಾರು ಅಂದರೆ, ಮೋಸ್ಟ್ ಡಮ್ಮಿ ಕ್ಯಾಂಡಿಡೇಟ್ ನಮ್ಮ ತಂಗಿ. ಅವರಿಗೆ ಏನು ಗೊತ್ತಿದೆ. ನೀವು ಚಿತ್ರನಟರು, ರಾಜ್‌ಕುಮಾರ್ ಮಕ್ಕಳು, ನಾನೂ ಒಬ್ಬ ಚಿತ್ರನಟ. ಚಿತ್ರ ಕಲಾವಿದರಿಗೆ ಹಾಗೂ ಮತ್ತೊಬ್ಬರಿಗೆ ಗೌರವ ಕೊಡುತ್ತೇನೆ. ಯಾರೋ ಒಂದಿಬ್ಬರು ಬಂತು ಪ್ರಚಾರ ಮಾಡುತ್ತಿದ್ದಾರೆ. ಇಡೀ ಚಿತ್ರರಂಗ ಬಂದಿಲ್ಲ. ಇಡೀ ಚಿತ್ರರಂಗ ನನ್ನ ಪರವಾಗಿ ನಿಂತುಬಿಟ್ಟಿದೆ ಅಂತ ಹೇಳಿಕೊಂಡರು ಯಾರೂ ಬರಲಿಲ್ಲ.” ಎಂದಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ