ವಿದ್ಯುತ್‌ ಕಳ್ಳತನದ ಕೇಸ್‌ :ದಂಡ ಕಟ್ಟುವಂತೆ ಮಾಜಿ ಸಿಎಂಗೆ ಸೂಚನೆ…..!

ಬೆಂಗಳೂರು:

     ವಿದ್ಯುತ್ ದೀಪ ಅಲಂಕಾರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

    ಈ ದೂರಿನ ಅನ್ವಯ ಎಫ್‌ಐಆರ್ ಕೂಡ ದಾಖಲಾಗಿತ್ತು. ಆದ್ರೇ ಅವರು ತಪ್ಪೊಪ್ಪಿಕೊಂಡಿರೋ ಹಿನ್ನಲೆಯಲ್ಲಿ ಕೇವಲ ದಂಡಕ್ಕೆ ಸೀಮಿತಗೊಳಿಸುತ್ತಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಬಿಗ್ ರಿಲೀಫ್ ನೀಡಲಾಗಿದೆ.

    ಈ ಬಗ್ಗೆ ಬೆಸ್ಕಾಂ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ವಿದ್ಯುತ್ ಲೈನ್ ನಿಂದ ವಿದ್ಯುತ್ ಕಳವು ಮಾಡಿರುವುದರಿಂದ ವಿದ್ಯುತ್ ಶಕ್ತಿ-2003ರ ಕಾಯ್ದೆ 135 ಅಡಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಮೂರು ವರ್ಷ ಜೈಲು ಅಥವಾ ದಂಡ ವಿಧಿಸಬಹುದಾಗಿದೆ ಎಂದಿದೆ.

    ಹೆಚ್ ಡಿ ಕುಮಾರಸ್ವಾಮಿಯವರು ಅಚಾತುರ್ಯದಿಂದ ಘಟನೆ ನಡೆದಿರುವುದನ್ನು ಒಪ್ಪಿಕೊಂಡು, ದಂಡ ಪಾವತಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಶಿಕ್ಷೆ ದಂಡಕ್ಕೆ ಸೀಮಿತವಾಗಲಿದೆ ಎಂಬುದಾಗಿ ಬೆಸ್ಕಾಂ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ವಿದ್ಯುತ್ ಕಳ್ಳತನ ಆರೋಪದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap