ಸಿಎಂ ವಿರುದ್ಧ ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ‌…..!

ಬೆಂಗಳೂರು

   ನಾನು ತಪ್ಪು ಮಾಡಿಲ್ಲ, ಮುಂದೆಯೂ ಮಾಡಲ್ಲ, ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಮುಡಾ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ  ನಿನ್ನೆ ರಾಮನಗರದಲ್ಲಿ ಆಡಿರುವ ಮಾತು. ಪ್ರಕರಣದ ವಿಚಾರಣೆ ಮುಗಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಮಧ್ಯೆ ಮೂಡ ಆರೋಪದ ಬಳಿಕ‌ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

   ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯನವರು ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ, ಆ ದಾಖಲೆ ಬೇಕಾ? ದಲಿತ ಸಿಎ ಸೈಟ್​ನಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

   15 ಸೈಟ್ ತಗೊಂಡಿರುವುದಲ್ಲದೇ, ಇಂತದೇ ಹಗರಣದ ಸರಣಿಯೇ ಇದೆ‌ ಮೈಸೂರಿನಲ್ಲಿ. ವಿಕಲಚೇತನ ದಲಿತ ವ್ಯಕ್ತಿ 24 ಸಾವಿರ ರೂ. ನೀಡಿ ಸೈಟ್​ ಪಡೆಯುತ್ತಾರೆ. ಸಾಕಮ್ಮ ಎಂಬುವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ. ಸ್ಕೈಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ಸೈಟ್ ತಗೊಂಡವನು ಯಾರೋ ಮನೆ ಕಟ್ಟಿದ್ದಾರೆಂದು ನೋಡುವುದಕ್ಕೆ ಬರ್ತಾರೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

   ನನ್ನದು ತೆರದ ಪುಸ್ತಕ ಅಂತಾ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಅದನ್ನ ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ? ಇನ್ನೂ ಯಾರ ಕೈಯಲ್ಲಿದೆ ಸೈಟ್, ಹೆಸರಿಗೆ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ ಎಂದು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

  ಹಾಲಿನ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ವಿಚಾರವಾಗಿ ಮಾತನಾಡಿದ್ದು, ಯಾರ ಬಳಿಯೋ ಕಿತ್ತುಕೊಂಡು ಯಾರಿಗೊ ದಾನ ಮಾಡಿದ ರೀತಿ ಇದೆ. ಗ್ರಾಹಕರ ಮೇಲೆ ಹೊರೆಹಾಕಿ ರೈತರಿಗೆ ಪ್ರೋತ್ಸಾಹಧನ ಕೊಡುತ್ತೇವೆ ಅಂತಾರೆ ಎಂದು ಕಿಡಿಕಾರಿದ್ದಾರೆ. 

   ಹಾಲು ಉತ್ಪಾದಕರ ಸಂಘದ ಜಿಲ್ಲೆಗಳಲ್ಲಿ ಒಂದುವರೆ ಎರಡು ರೂಪಾಯಿ ಯಾಕೆ ಕಡಿಮೆ ಮಾಡಿದ್ದಿರಾ. ಎಲ್ಲೆಲ್ಲಿ ಕಡಿಮೆ ಮಾಡಿದ್ದಿರಲ್ಲಾ ಅಲ್ಲಿ ಬೆಲೆ ಏರಿಕೆ ಮಾಡಿದ್ದಿರಲ್ಲಾ. ಆ ದುಡ್ಡನ್ನ ರೈತರಿಗೆ ಕೊಡುತ್ತೇವೆ ಅಂತ ಹೇಳ್ತಿದ್ದಿರಲ್ಲಾ ಹಾಗಾದ್ರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹಾಲಿನ ಪ್ರೊತ್ಸಾಹ ದರ ಕಡಿಮೆ ಮಾಡಿದ್ದಿರಾ. ದಾಖಲೆ‌ ಇಲ್ವಾ, ಪಟ್ಟಿ ಇಲ್ವಾ. ರೈತರಿಗೆ ಕೊಡುತ್ತೇವೆ ಅಂತ ಸುಳ್ಳು ಹೇಳಿ, ಒಂದು ಕಡೆ ರೈತರಿಗೂ ಇಲ್ಲಾ ಗ್ರಾಹಕರಿಗೂ ಇಲ್ಲಾ. ದುಡ್ಡು ಮಾತ್ರ ಸರ್ಕಾರ ವಸೂಲಿ ಮಾಡುತ್ತಿದೆ. ಇದು ನಿಮ್ಮ ಹವ್ಯಾಸ ಎಂದು ವಾಗ್ದಾಳಿ ಮಾಡಿದ್ದಾರೆ.

  ನಾನು ಕೇಂದ್ರ ಸಚಿವನಾಗಿದ್ದಕ್ಕೆ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ರಾಜ್ಯಕ್ಕೆ ಬಂದ್ರೆ ಇವರು ಸಹಿಸಲ್ಲ, ಇದು ನನ್ನ ಪರಿಸ್ಥಿತಿ. ನನ್ನ ಮುಖ ನೋಡಿದಾಗಲೆಲ್ಲ ಮುಗಿದೆ ಹೋದ ಅಂತಿದ್ದರು. ಆದರೆ ನಾನು ಕೇಂದ್ರ ಮಂತ್ರಿ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ನೋವಿಗೆ ಎಲ್ಲಿ ಔಷಧಿ ಕೊಡಲಿ ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap