NDA rising star ಆಗಿ ಮಿಂಚುತ್ತಿರುವ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಯಾವಾಗ ಬೀಳುತ್ತದೆ ಎಂಬುದು ಜೆಡಿಎಸ್ ನಾಯಕ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಗೊತ್ತಿದೆ ಎಂದು ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಇತ್ತೀಚೆಗೆ ಹೇಳಿಕೆಯೊಂದನ್ನು ಕೊಟ್ಟಿದ್ದರು.

     ಬರುವ ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ನಾಲ್ಕು ಸುತ್ತಿನ ಆಪರೇಷನ್ ಕಮಲವನ್ನು ಯಶಸ್ವಿಯಾಗಿ ನಡೆಸಿರುವ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರದ ಬೆಳವಣಿಗೆ ಬಗ್ಗೆ ಗೊತ್ತಿದೆ ಎಂದು ಸೋಮಣ್ಣ ಹೇಳದಿರುವುದು ಮತ್ತು ಇತ್ತೀಚೆಗೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದೊಳಗೆ ಪ್ರಮುಖ ನಾಯಕರಾಗಿ ಹೊರಹೊಮ್ಮಿರುವ ಕುಮಾರಸ್ವಾಮಿ ಅವರನ್ನು ಸೋಮಣ್ಣ ಉಲ್ಲೇಖಿಸಿರುವುದು ಇಲ್ಲಿ ಕುತೂಹಲಕಾರಿ ಸಂಗತಿಯಾಗಿದೆ.
    ಈ ಹಿಂದೆ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅದರಲ್ಲೂ ಯಡಿಯೂರಪ್ಪ ಕುಟುಂಬದ ಮೇಲೆ ಸೋಮಣ್ಣ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ರಾಜ್ಯ ಘಟಕದ ಮೇಲೆ ಹಿಡಿತ ಸಾಧಿಸಲು ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ಬಣಗಳ ನಡುವಿನ ಬಿಜೆಪಿಯೊಳಗಿನ ಆಂತರಿಕ ಕಲಹ ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೇ ಸೋಮಣ್ಣ ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
    ಕಾಂಗ್ರೆಸ್ ನಂತೆ ಬಿಜೆಪಿಯೊಳಗೆ ಸಹ ಆಂತರಿಕ ಕಚ್ಚಾಟವಿದೆ ಎಂಬ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿದೆ. ಪ್ರತಿಪಕ್ಷದ ನಾಯಕ ಆರ್ ಅಶೋಕ ಅವರನ್ನು ಬದಲಾಯಿಸಿ ಒಬಿಸಿ ನಾಯಕ ಸುನಿಲ್ ಕುಮಾರ್ ಅಥವಾ ಬೇರೆ ಅಭ್ಯರ್ಥಿಯನ್ನು ತರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಪಕ್ಷವು ಒಡೆದ ಮನೆಯಾಗಿದೆ ಎಂದು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ ಮತ್ತು ಪಕ್ಷದೊಳಗಿನ ಹೊಂದಾಣಿಕೆಯ ಕೊರತೆಯು ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಸೋಮಣ್ಣನವರೇ ಇತ್ತೀಚೆಗೆ ಹೇಳಿದ್ದರು.
    ಪ್ರಹ್ಲಾದ್ ಜೋಶಿ ಅವರು ಸಂಸದರಾಗಿ ಆಯ್ಕೆಯಾಗಿದ್ದರೂ, ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಪ್ರಮುಖ ಖಾತೆಗಳನ್ನು ಪಡೆದುಕೊಂಡು ಕರ್ನಾಟಕದಿಂದ ಪ್ರಬಲ ಎನ್‌ಡಿಎ ನಾಯಕರಾಗಿ ಹೊರಹೊಮ್ಮಿದವರು ಕುಮಾರಸ್ವಾಮಿ. ಎನ್‌ಡಿಎ-ಬಿಜೆಪಿ ಮೈತ್ರಿಕೂಟದೊಳಗೆ ಕುಮಾರಸ್ವಾಮಿ ಅವರ ಪ್ರಭಾವ ಬೆಳೆಯುತ್ತಿರುವುದು ಸ್ಪಷ್ಟವಾಗಿದೆ.
   2006ರಿಂದ ವಿಧಾನಸಭೆಯಲ್ಲಿ ಜೆಡಿಎಸ್‌ನ ಹಿಂದಿನ ಸ್ಥಾನದಲ್ಲಿಯೇ ಇತ್ತು. ಆಗ ಜೆಡಿಎಸ್‌ನಲ್ಲಿದ್ದ ಸಂತೋಷ್ ಲಾಡ್, ಆಗ ಶಾಸಕರಾಗಿದ್ದ ಬಾಲರಾಜ್ ಅಥವಾ ಇಂದು ಕಾಂಗ್ರೆಸ್ ನಲ್ಲಿರುವ ಜಮೀರ್ ಅಹ್ಮಜ್ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದ ಕುಮಾರಸ್ವಾಮಿ ಇಂದು ಬಹುದೂರ ಸಾಗಿ ಬಂದಿದ್ದಾರೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಜಮೀರ್ ಅಹಮದ್ ಖಾನ್ ಆಗ ಜೆಡಿಎಸ್ ಭಾಗವಾಗಿದ್ದರು.
    ಇಷ್ಟು ವರ್ಷ ಕುಮಾರಸ್ವಾಮಿಯವರನ್ನು ಯಾರೂ ರಾಜಕೀಯವಾಗಿ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹಲವರು ಹೇಳುತ್ತಾರೆ. ಚಲನಚಿತ್ರ ವಿತರಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿ ಬೆಂಗಳೂರು ಮತ್ತು ಹೊಳೆನರಸೀಪುರ ನಡುವೆ ಪ್ರಯಾಣ ಮಾಡುತ್ತಿದ್ದರು. ಹೊಳೆನರಸೀಪುರದಲ್ಲಿ ದೇವೇಗೌಡ ಕುಟುಂಬವು ಚೆನ್ನಮ್ಮ ಥಿಯೇಟರ್ ನ್ನು ಹೊಂದಿದೆ. 2006 ರಲ್ಲಿ ಧರಂ ಸಿಂಗ್ ಸರ್ಕಾರವನ್ನು ಉರುಳಿಸಲು ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಒಟ್ಟುಗೂಡಿಸುವ ಮೂಲಕ ಅವರು ರಾಜಕೀಯದಲ್ಲಿ ಮುನ್ನಲೆಗೆ ಬಂದರು.
    ಚಾಣಾಕ್ಷ ರಾಜಕಾರಣಿ ಎಂದೇ ಹೆಸರಾಗಿರುವ ಕುಮಾರಸ್ವಾಮಿ ಈಗ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹೇಳಿರುವುದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇಷ್ಟೊಂದು ಸಂಖ್ಯೆಯ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಕೆಲಸವು ಕಷ್ಟಕರವಾಗಿ ಕಂಡುಬಂದರೂ, ಕುಮಾರಸ್ವಾಮಿ ಇದ್ದಾಗ ಯಾವುದೂ ಅಸಾಧ್ಯವಲ್ಲ ಎಂದು ಕೆಲವರು ಹೇಳುತ್ತಾರೆ.
    ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಇದೇ ಶುಕ್ರವಾರ ತಮ್ಮ ಕ್ಷೇತ್ರ ಮಂಡ್ಯದಲ್ಲಿ ಜನತಾದರ್ಶನ ನಡೆಸಿ ಜನರಿಂದ ಕುಂದುಕೊರತೆ ಮತ್ತು ಅಹವಾಲು ಸ್ವೀಕರಿಸಲಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಚಿವರ ಕಚೇರಿ ಪತ್ರ ಬರೆದಿದ್ದು, ಅಂಬೇಡ್ಕರ್ ಭವನವನ್ನು ಆಯ್ಕೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap