ಮಹಾರಾಷ್ಟ್ರ ಸರ್ಕಾರಕ್ಕೆ ಕುಮಾರ ಸ್ವಾಮಿ ಖಡಕ್‌ ವಾರ್ನಿಂಗ್….!

ಬೆಂಗಳೂರು:

   ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಗೆ ಸಮೀಪ ಇರುವ  ಗ್ರಾಮಗಳಲ್ಲಿ ವಿಮೆ ನೀಡಲು ಮುಂದಾಗಿರುವ  ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮ ತೀವ್ರವಾಗಿ ಖಂಡಿಸಿದ್ದಾರೆ. ಅವರು, ಈ ವಿಚಾರ ಸಂಬಂಧ ಕೇಂದ್ರ ಸರ್ಕಾರ ಮೌನ ವಹಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಲಿದೆ ಎಂದಿದ್ದಾರೆ.

    ಕರ್ನಾಟಕದ ಗಡಿ ಭಾಗದ 865 ಹಳ್ಳಿಗಳ ಜನರಿಗೆ ವಿಮಾ ಯೋಜನೆ ಜಾರಿಗೊಳಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ಬುಧವಾರ ಸರಣಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದ್ದು, ಕರ್ನಾಟಕದ ಆಂತರಿಕ ವಿಚಾರದಲ್ಲಿ ನೆರೆಯ ರಾಜ್ಯ ಹಲವು ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದ್ದಾರೆ.

     ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರದ ಈ ಹೊಸಹತುಶಾಯಿ ಧೋರಣೆ ಖಂಡನೀಯವಾಗಿದೆ ಎಂದಿದ್ದಾರೆ. ಚೀನಾ ಮನಸ್ಥಿತಿಯನ್ನು ಹೊಂದಿರುವ ಆ ರಾಜ್ಯವು ಕರ್ನಾಟಕವನ್ನು ಶತ್ರುವಂತೆ ನೋಡುತ್ತಿದೆ. ಕೇಂದ್ರ ಸರಕಾರ ಇದೆಲ್ಲಾ ನೋಡಿಕೊಂಡು ಮೌನವಾಗಿರುವುದಾದರೂ ಏಕೆ ಎಂಬ ಪ್ರಶ್ನೆ ಕನ್ನಡಿಗರ ಮನಸ್ಸಿನಲ್ಲಿ ಮೂಡುತ್ತದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap