ಅಭಿವೃದ್ಧಿ ಕನಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದಿರುವ ಯುವಜನ

 ಕುಣಿಗಲ್ :

       ತಾಲ್ಲೂಕಿನಲ್ಲಿ ಬಹಳ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿದ್ದ ಹಲವು ಯುವಕರು ದುಡಿಮೆಗೆಂದು ನಗರಗಳಿಗೆ ಹೋದವರು ಕೊರೋನಾ ಬಂದನಂತರ ವಾಪಸ್ ಬಂದು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡಿದ್ದವರು ರಾಜಕಾರಣ ಮಾಡುವ ಮಹದಾಸೆಯೊಂದಿಗೆ ಇದೀಗ ಬಂದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಊರಿನ ಅಭಿವೃದ್ದಿಯ ಕನಸೊತ್ತಿದ್ದಾರೆ.

      ಈ ಬಾರಿ ಉತ್ಸಾಹಿ ಯುವಕರ ಸಂಖ್ಯೆ ಹೆಚ್ಚಾಗಿದ್ದು ಬಾರಿ ಪೈಪೋಟಿಯನ್ನು ನೀಡುವ ಮೂಲಕ ಮಹಿಳೆಯರು ವೃದ್ದರಿಗೆ ಹಲವು ಭರವಸೆಯೊಂದಿಗೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿನ ಡಿ.ಹೊಸಹಳ್ಳಿ ಗ್ರಾಮ ಪಂಚಾಯಿಯ ದೊಡ್ಡ ಮತ್ತೂರು ಕ್ಷೇತ್ರದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲೇಶ್ ಡಿ.ಜೆ ಈ ಕುರಿತು ಪ್ರತಿಕ್ರಿಯಿಸುತ್ತಾ, ಗ್ರಾಮೀಣ ಭಾಗದ ಜನರು ಬಹುತೇಕ ಅನಕ್ಷರಸ್ಥರಿದ್ದಾರೆ.ಅಂತಹವರ ಒಡನಾಡಿಯಾಗಿ ಗ್ರಾಮದ ಸಂಪೂರ್ಣ ಏಳಿಗೆಗೆ ಪ್ರಾಮಾಣಿಕ ಕೆಲಸ ಮಾಡುವುದರ ಜತೆಯಲ್ಲಿ ಸರ್ಕಾರದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಮತದಾರರಿಗೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ದೊಡ್ಡ ಮಾವತ್ತೂರು ಗ್ರಾಮದಲ್ಲಿ ಜನರ ಸಮಸ್ಯೆಯನ್ನುಪರಿಹರಿಸಲು ಕಚೇರಿ ಆರಂಭಿಸುವುದಾಗಿ ತಿಳಿಸಿದ್ದಾರೆ.

ದೊಡ್ಡ ಮಾವತ್ತೂರಿನಿಂದ ಜಲದರ ಪಾಳ್ಯ ಗ್ರಾಮಕ್ಕೆ ರೈತರಿಗೆ ಕಿಸಾನ್ ಕಾರ್ಡ್ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಯೋಜನೆಗಳನ್ನು ದೊರಕಿಸಿಕೊಡಲಾಗುವುದು. ಕುಡಿಯುವ ನೀರು ಶುದ್ಧೀಕರಣ ಘಟಕ ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಸಿಸಿ ರಸ್ತೆ ಒಳಚರಂಡಿ ಎರಡು ಮನೆಗಳಿಗೆ ಒಂದು ಕುಡಿಯುವ ನೀರು ಸೇರಿದಂತೆ ಗ್ರಾಮದ ಎಲ್ಲಾ ವೃದ್ಧರು ವಿಧವೆಯರು ಹಾಗೂ ಅಂಗವಿಕಲರಿಗೆ ಮಾಸಾಶನ ದೊರಕಿಸುವಂತೆ ಮಾಡಲಾಗುವುದು .ಜೊತೆಗೆ ಗ್ರಾಮದಲ್ಲಿ ಬ್ಯಾಂಕ್ ಆಧಾರ್ ತಿದ್ದುಪಡಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಸೇರಿದಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಗ್ರಾಮದಲ್ಲಿ ದೊರೆಯುವಂತೆ ಶ್ರಮಿಸಲಾಗುವುದು.

     ಪ್ರತೀ 6 ತಿಂಗಳಿಗೊಮ್ಮೆ ಗ್ರಾಮಸಭೆಯಲ್ಲಿ ಸಾಧನೆಯನ್ನು ತಿಳಿಸಿ ಜನರ ರೈತರ ಕುಂದುಕೊರತೆಯನ್ನು ಆಲಿಸುವ ಮೂಲಕ ಸಮಾಜಮುಖಿಯಾಗಿ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link