ಕುಣಿಗಲ್ :
ರಾಜ್ಯದ ರಾಜಕಾರಣಕ್ಕೆ ಅಡಿಪಾಯವೇ ಆದ ಗ್ರಾಮ ಪಂಚಾಯಿತಿ ಚುನಾವಣೆ ಈ ಬಾರಿ ತಾಲ್ಲೂಕಿನಲ್ಲಿ ಭಾರಿ ಯುವ ಉತ್ಸಾಹಿ ಯುವಕರೊಂದಿಗೆ ಕುತುಹಲಕ್ಕೆ ಎಡೆಮಾಡಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲವೆಡೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಶೇ.90 ರಷ್ಟು ಮತದಾನ ನಡೆದಿದೆ. ಮತದಾನ ಪ್ರಾರಂಭವಾದಾಗಿನಿಂದಲೂ ಹೆಚ್ಚು ಉತ್ಸಾಹದಿಂದ ಮತದಾರರು ಮತಗಟ್ಟೆಗೆ ನಡುಗುವ ಚಳಿಯಲ್ಲಿಯೂ ಹೋಗುತ್ತಿದ್ದ ದೃಶ್ಯ ಕಂಡು ಬಂತು.
ತಾಲೂಕಿನ 36 ಗ್ರಾಮ ಪಂಚಾಯಿತಿಯಲ್ಲಿ ಬಿರುಸಿನಿಂದ ಮತದಾನವು ಬೆಳಿಗ್ಗೆ 7 ಗಂಟೆ ಇಂದ ಆರಂಭಗೊಂಡು ಸಂಜೆಯವರೆಗೆ ಮತದಾರರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನಿಂದ ಮತ ಚಲಾಯಿಸುತ್ತ ಪ್ರತಿ ಮತಗಟ್ಟೆಯಲ್ಲಿಯೂ ಕೆಲವು ಮತದಾರರು ನಗರದಿಂದ ಬಂದು ಮತ ಚಲಾಯಿಸುತ್ತ ತಮ್ಮ ಪಾಲಿನ ಕಪ್ಪಕಾಣಿಕೆ ಪಡೆದುಕೊಂಡು ವಾಪಸ್ ಹೋಗುವ ದೃಶ್ಯ ಒಂದು ರೀತಿ ಅಪಹಾಸ್ಯಕ್ಕೆ ಗುರಿಮಾಡಿತ್ತು.
ಕುಣಿಗಲ್ ಪಟ್ಟಣಕ್ಕೆ ಸಮೀಪವಾಗಿದ್ದ ಕೊತ್ತಗೆರೆ ಗ್ರಾ.ಪಂ. ಬಾಗೇನಹಳ್ಳಿ ಪಂಚಾಯ್ತಿಯ ಹೊನ್ನೇನಹಳ್ಳಿ ಗ್ರಾಮ ಮುಖ್ಯರಸ್ತಗೆ ಹೊಂದಿಕೊಂಡಂತಿರುವ ಹಲವು ಗ್ರಾಮಗಳ ಮತದಾರರು ದಟ್ಟನೆಯ ವಾಹನಗಳ ಸಂಚಾರದ ನಡುವೆ ಪ್ರಾಣ ಭಯದಿಂದ ರಸ್ತೆ ದಾಟಿ ಮತ ಚಲಾಯಿಸುತ್ತದ್ದ ಪ್ರಸಂಗವಂತೂ ನೋಡುಗರಿಗೆ ಭಯಭೀತಿಗೊಳಿಸಿತ್ತು. ಕೊತ್ತಗೆರೆ ಕ್ಷೇತ್ರದ ಮಾವಿನಕಟ್ಟೆ ಪಾಳ್ಯದಲ್ಲಿ ಬಾರೀ ಪೈಪೆÇೀಟಿ ಸೇರಿದಂತೆ ಗೊಟ್ಟೀಕೆರೆ, ಬೇಗೂರು, ಕೆಂಪನಹಳ್ಳಿ, ಇಪ್ಪಾಡಿ, ಹುಲಿಯೂರುದುರ್ಗ, ಅಮೃತೂರು,ಎಡೆಯೂರು ಬಿಳಿದೇವಾಲಯ, ಬೋರ ಲಿಂಗನ ಪಾಳ್ಯ ಆಲಪ್ಪನಗುಡ್ಡೆ ಕಗ್ಗೆರೆ ಕೊಪ್ಪ ನಾಗಸಂದ್ರ ಗ್ರಾಮದಲ್ಲಿ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತದಾನಕ್ಕೂ ಮುನ್ನ ಪ್ರತಿಯೊಬ್ಬ ಮತದಾರನಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು ಧರ್ಮಲ್ ಸ್ಕ್ಯಾನಿಂಗ್ ಕೈಗೆ ಸ್ಯಾನಿಟರಿ ಹಾಕಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದ ಪೋಲೀಸರು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಮೆಚ್ಚುವಂತಿತ್ತು.
ಬೆಳಿಗ್ಗೆ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ನಂತರ ಬಿರುಸಿನಿಂದ ಆರಂಭಗೊಂಡಿತು. ಶೇಕಡಾ 40ರಷ್ಟು ಹೆಚ್ಚು ಎಲ್ಲಾ ಮತಗಟ್ಟೆಯಲ್ಲಿ ಮಧ್ಯಾಹ್ನದ ವೇಳೆಗೆ ಮತದಾನವಾಗಿದ್ದು ಬಹುತೇಕ ಮತಗಟ್ಟೆಯಲ್ಲಿ ಶಾಂತವಾಗಿ ಮತದಾನ ನಡೆಯುತ್ತಿದ್ದು ಗೋಚರಿಸುತ್ತಿತ್ತು. ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಮಹಿಳೆಯರು ಪುರುಷರು ವಯೋವೃದ್ದರು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ತಾಲೂಕಿನ 496 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜನರು ಉತ್ಸುಕರಾಗಿದ್ದರು.
ಅಹಿತಕರ ಘಟನೆ : ಪ್ರಕರಣ ದಾಖಲು :
ಅಮೃತೂರು ಹೋಬಳಿ ಹೊಸಕೆರೆ ಗ್ರಾಮದಲ್ಲಿ ವಯೋವೃದ್ದರನ್ನು ಮತಹಾಕಲು ಕರೆತಂದಾಗ ಗುಂಪುಗಳ ನಡುವೆ ಉಂಟಾದ ಗಾಲಟೆ ತಾರಕಕ್ಕೇರಿ ಕೈ ಕೈ ಮಿಲಾಸಿದ್ದು ಪೊಲೀಸರಿಂದ ಪ್ರಕರಣ ದಾಖಲಿಸಿ ತಿಳಿಗೊಳಿಸಲಾಗಿದೆ.
36ಕುಕ್ಕರ್ ವಶ:
ಮಹಿಳಾ ಅಭ್ಯರ್ಥಿ ಪರ ನೀಡಲು ತಂದು ತಿಪ್ಪಯ್ಯ ಎನ್ನುವರ ತೋಟದ ಮನೆಯಲ್ಲಿ ಇರಿಸಿದ್ದ 36ಕುಕ್ಕರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಇಂತಹ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಚುನಾವಣೆಗೂ ಮುನ್ನ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನಾಲ್ವರು ಗಡಿಪಾರು:
ಕಾಡುಮತ್ತಿಕೆರೆ ಗ್ರಾಮದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ನಾಲ್ಕು ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 1208 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು ಕೊರೆಯುವ ಚಳಿಯನ್ನು ಲೆಕ್ಕಿಸದೆ ಮತಗಟ್ಟೆಗೆ ತೆರಳುತ್ತಿದ್ದು ದೃಶ್ಯಗಳು ಸಾಮಾನ್ಯವಾಗಿತ್ತು. ಶಿಕ್ಷಣ ಸಂಸ್ಥೆಗಳು ಕಾಸಿಗಿ ಉದ್ಯೋಗಸ್ಥರು ಸರ್ಕಾರಿ ನೌಕರರಿಗೆ ಬ್ಯಾಂಕುಗಳಿಗೆ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಕಾರ್ಖಾನೆಗಳಿಗೆ ಸರ್ಕಾರ ರಜೆ ಘೋಷಿಸಿರುವುದರಿಂದ ನಗರದ ಯುವಕರು ತಮ್ಮ ಊರುಗಳಿಗೆ ಬೈಕು, ಕಾರು, ಇತರೆ ವಾಹನಗಳಲ್ಲಿ ಆಗಮಿಸಿ ಸಂಬಂಧಿಗಳ ಸ್ನೇಹಿತರ ಹಿತೈಷಿಗಳ ಪರ ಮತಯಾಚನೆ ಮಾಡುವುದು ಗಮನಸೆಳೆದಿತ್ತು. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒಲವು ವ್ಯಕ್ತಪಡಿಸಿರುವ ಯುವ ಸಮೂಹ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಯನ್ನು ಎದುರು ನೋಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
