ಕುಣಿಗಲ್ : ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಗೊಂದಲ

ಕುಣಿಗಲ್  : 

      ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಇದುವರೆಗೂ ಇದ್ದಂತಹ ಶೀತಲಸಮರ ಇದೀಗ ಸ್ಫೋಟಗೊಂಡಿದೆ. ಸಂಘದಲ್ಲಿ ಎರಡು ಬಣವಾಗಿ ವಿಭಜನೆಗೊಂಡು, ನಡೆಯಬೇಕಾಗಿದ್ದ ಸಾಮಾನ್ಯ ಸಭೆ ಮುಂದೂಡಿ ಯಥಾಸ್ಥಿತಿ ಮುಂದುವರೆಯುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

      ಸೋಮವಾರ ನಿಗಧಿಯಾಗಿದ್ದ ತಾಲ್ಲೂಕು ಒಕ್ಕಲಿಗರ ಸಂಘದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಅಡಕ ಕಮಿಟಿ ಅಧ್ಯಕ್ಷರಾದ ಕೆ.ಎನ್ .ರಾಜಣ್ಣ, ಈಗಾಗಲೇ ಸದಸ್ಯರ ಸದಸ್ಯತ್ವ ನ್ಯಾಯಾಲಯದಲ್ಲಿ ಹಾಗೂ ಜಿಲ್ಲಾ ರಿಜಿಸ್ಟಾರ್‍ನಲ್ಲಿ ಇತ್ಯರ್ಥವಾಗಬೇಕಾಗಿದೆ ಆದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

      ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ಯಾವುದೇ ನಿರ್ದೇಶಕರನ್ನಾಗಿ ಅಧ್ಯಕ್ಷರನ್ನಾಗಿ ಕಾರ್ಯದರ್ಶಿಯನ್ನಾಗಿ ವಜಾ ಮಾಡುವ ಅಧಿಕಾರ ಕಾರ್ಯಕಾರಿ ಸಮಿತಿ ಮಂಡಳಿಗೆ ಇರುವುದಿಲ್ಲ ಇದು ಕೇವಲ ಜನರಲ್ ಬಾಡಿ, ಸರ್ವ ಸದಸ್ಯರಿಗೆ ಅಧಿಕಾರ ಇರುವುದಾಗಿ ತಿಳಿಸಿದರು. ಸಂಘದಲ್ಲಿ ಯಾವುದೇ ದುರುಪಯೋಗ ಆಗುವಂತಹ ಕೆಲಸವನ್ನು ಮಾಡಿರುವುದಿಲ್ಲ. 17 ಜನ ನಿರ್ದೇಶಕರಲ್ಲಿ ಕೇವಲ 8 ಜನ ನಿರ್ದೇಶಕರು ತೀರ್ಮಾನ ಕೈಗೊಂಡರೆ ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಪ್ರಕಾರ ಆಡಳಿತ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ.

      ಕಾನೂನು ಬದ್ಧವಾಗಿ ಸಹಕಾರ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದರೂ ಒಕ್ಕಲಿಗರ ಸಂಘದಲ್ಲಿ 6 ಕೋಟಿಗೂ ಹೆಚ್ಚು ಹಣ ಇರುವುದರಿಂದ ಯಾವುದೇ ಹಣಕಾಸು ವ್ಯವಹಾರವನ್ನು ಆಡಕ ಕಮಿಟಿ ವ್ಯವಹರಿಸುವಂತಿಲ್ಲ ಎಂದು ಈ ಬಗ್ಗೆ ನ್ಯಾಯಾಲಯದಲ್ಲಿ ಜಿಲ್ಲಾ ರಿಜಿಸ್ಟರ್ ಅವರಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದರು.

      ಈ ಸಾಮಾನ್ಯ ಸಭೆಯಲ್ಲಿ ಘರ್ಷಣೆಯಾಗುವ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಬಿನ್ಸ್‍ಪೆಕ್ಟರ್‍ಗಳಾದ ವಿಕಾಸ್‍ಗೌಡ, ಮಂಜುನಾಥ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ