ಕುಣಿಗಲ್ ಅಣ್ಣ-ತಂಗಿ ನಡುವೆ ಫೈಟ್ ; ಲಾಟರಿ ಮೂಲಕ ಗೆದ್ದ ಅಣ್ಣ!!

ಕುಣಿಗಲ್ : 

      ಅಣ್ಣ ತಂಗಿಯ ನಡುವೆ ಬಿಗ್ ಫೈಟ್ ನಡೆದು ಚುನಾವಣೆಯಲ್ಲಿ ಇಬ್ಬರೂ ಸರಿ ಸಮಾನವಾಗಿ ಮತಗಳಿಸಿದ ಪರಿಣಾಮ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಿದಾಗ ಅಣ್ಣ ಜಯಭೇರಿ ಬಾರಿಸಿದ ಪ್ರಸಂಗ ನಡೆಯಿತು.

      ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಮಡಿಕೆಹಳ್ಳಿ ಗ್ರಾಮ ಪಂಚಾಯ್ತಿಗೆ ಬೊಮ್ಮಡಿಗೆರೆ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬೆಟ್ಟಸ್ವಾಮಿಗೌಡ (221) ಹಾಗೂ ಆತನ ತಂಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ರಂಗಲಕ್ಷ್ಮಮ್ಮ (221) ಇವರಿಬ್ಬರ ನಡುವೆ ಪ್ರತಿ ಹಂತದ ಮತ ಎಣಿಕೆಯು ಸಹ ಅಚ್ಚರಿ ಮೂಡಿಸುತ್ತಲೆ ಬಂದು ಕೊನೆಗೆ ಇಬ್ಬರ ಮತಗಳ ಸಂಖ್ಯೆ ಸಮವಾದಾಗ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಎತ್ತಿದಾಗ ಅಣ್ಣ ಬೆಟ್ಟಸ್ವಾಮಿಗೌಡನಿಗೆ ವಿಜಯ ಮಾಲೆ ದೊರಕಿದ ಪ್ರಸಂಗ ನಡೆದು ಆತ ಅಯ್ಯೋ ಇಷ್ಟೊಂದು ಸ್ಪರ್ಧೆ ನೀಡಿದ ನನ್ನ ತಂಗಿಯೇ ಗೆಲಬುಹುದಿತ್ತಲ್ಲ ಎಂದು ಕೊಂಡು ಹೇಳಿದರು ಸಹ ಚುನಾವಣಾಧಿಕಾರಿಗಳ ಪ್ರಕಾರ ಲಾಟರಿ ನಡೆದು ನಾನೇ ಗೆಲು ಸಾಧಿಸುವಂತಾಯಿತು ಇದರಿಂದ ಒಂದುತರ ಖುಷಿ ಮತ್ತೊಂದುತರಹ ನೋವಾಗುತ್ತಿದೆ ಏನು ಮಾಡೋದು ಸಾರ್ ಎಂದು ಪ್ರಗತಿ ಪತ್ರಿಕೆಗೆ ತಿಳಿಸಿ ಹೊರನಡೆದ ಪ್ರಸಂಗವೊಂದು ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link