ಕುಣಿಗಲ್ :
ಶ್ರೀ ಕಪರ್ದಿ ಸಿದ್ಧಲಿಂಗೇಶ್ವರಸ್ವಾಮಿಗಳಿಂದ ಸ್ಥಾಪಿತವಾದ ಕುಣಿಗಲ್ ಯೋಗವನ ಬೆಟ್ಟವು ಸೇವಾ ಸಂಸ್ಥೆಯಾಗಿ ಮಾನ್ಯತೆ ಪಡೆದು ಪಾರಂಪರಿಕ ಆಯುರ್ವೇದ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಸಮಾಜದಲ್ಲಿ ಕೀರ್ತಿಯನ್ನು ಪಡೆದು ಕೊಂಡಿರುವುದನ್ನು ಸಹಿಸದೆ ಶ್ರೀ ಕಪದ್ರಿ ಸಿದ್ಧಲಿಂಗೇಶ್ವರಸ್ವಾಮೀಜಿಗಳು ಲಿಂಗೈಕ್ಯ ಆದ ನಂತರ ಕಿಡಿಗೇಡಿಗಳು ಇಲ್ಲಸಲ್ಲದ ಆರೋಪ ಮಾಡುತ್ತ ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯುವುದರ ಜೊತೆಗೆ ಕಬಳಿಸುವ ಹುನ್ನಾರ ನೆಡಸುತ್ತಿರುವುದನ್ನು ಖಂಡಿಸಿ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಯೋಗವನ ಬೆಟ್ಟದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಹುರುಳಿಬೋರಸಂದ್ರ ಶ್ರೀ ಸಿದ್ಧಲಿಂಗೇಶ್ವರ ಯೋಗವನ ಬೆಟ್ಟದ ಅಭಿವೃದ್ಧಿಯನ್ನು ಸಹಿಸದೆ ಕೆಲವು ವ್ಯಕ್ತಿಗಳು ಶ್ರೀ ಕಪದ್ರಿ ಸಿದ್ಧಲಿಂಗೇಶ್ವರಸ್ವಾಮೀಜಿಗಳು ಲಿಂಗೈಕ್ಯ ಆದ ನಂತರ ಅಪಪ್ರಚಾರದಲ್ಲಿ ತೊಡಗಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮಸ್ಥರು ಹಾಗೂ ಕ್ಷೇತ್ರದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ 25 ವರ್ಷಗಳಿಂದೆ ಶ್ರೀಗಳು ಹಗಲಿರುಳೆನ್ನದೆ ದುಡಿದು ಆಯುರ್ವೇದ ಪದ್ದತಿಯ ಚಿಕಿತ್ಸೆಯನ್ನು ನೀಡುತ್ತ ಈ ಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳ ಕೀರ್ತಿಬೆಳಗಿಸುವುದರ ಜೊತೆಗೆ ತಾಲ್ಲೂಕಿನ ಕೀರ್ತಿಗೆ ಪಾತ್ರರಾಗಿದ್ದಾರೆ ಇಂತಹವರು ಲಿಂಗೈಕ್ಯ ಆದ ನಂತರ ಇಲ್ಲಿ ಹಿಂದೆ ಕೆಲಸ ಮಾಡಿಕೊಂಡಿದ್ದ ಆಸಾಮಿಯೊಬ್ಬರು ಇದೀಗ ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಗವನ ಬೆಟ್ಟದ ಟ್ರಸ್ಟಿಯಾದ ಪವಿತ್ರ ಅವರು ಮಾತನಾಡುತ್ತ ತಾಲ್ಲೂಕಿನ ಹುರುಳಿಬೋರಸಂದ್ರ ಶ್ರೀ ಸಿದ್ಧಲಿಂಗೇಶ್ವರ ಯೋಗವನ ಬೆಟ್ಟದಲ್ಲಿ ದಾರ್ಮಿಕ ಪರಂಪರೆಯುಳ್ಳ ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಕಳೆದ 25 ವರ್ಷಗಳಿಂದ ನಾಡಿನ ಎಲ್ಲ ಸಮುದಾಯಗಳಿಗೆ ಪಾರಂಪರಿಕವಾಗಿ ಚಿಕಿತ್ಸೆ ನೀಡುತ್ತಿದ್ದು ಇತ್ತೀಚೆಗೆ ಶ್ರೀ ಕಪದ್ರಿ ಸಿದ್ಧಲಿಂಗೇಶ್ವರಸ್ವಾಮೀಜಿಗಳು ಲಿಂಗೈಕ್ಯ ಆದನಂತರ ಇದೇ ಯೋಗವನ ಬೆಟ್ಟದಲ್ಲಿ ಹಿಂದೆ ಕೆಲಸ ಮಾಡಿಕೊಂಡಿದ್ದ ತಿಪ್ಪೆರುದ್ರಸ್ವಾಮಿ ಎಂಬ ವ್ಯಕ್ತಿ ಆಶ್ರಮದಲ್ಲಿ ಕೆಲವಿ ವರ್ಷ ಕೆಲಸ ಮಾಡುತ್ತಿದ್ದಾಗ ಈತನ ದುರ್ವತನೆ ದುರಾಡಳಿತದಿಂದ ಯೋಗವನ ಬೆಟ್ಟದಿಂದ ಶ್ರೀಗಳು ಹೊರಹಾಕಿದರು. ಈತನ ವಿರುದ್ದ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ. ಹೊರ ಹಾಕುವಾಗ ಈತನ ಕುಟುಂಬ ನಿರ್ವಹಣೆಗೆ 5 ಲಕ್ಷ ರೂ. ನೀಡಿ ಮುಚ್ಚಳಿಕೆ ಬರೆಸಿಕೊಂಡು ಶ್ರೀಗಳು ಕಳುಹಿಸಿದ್ದರು. ಇದುವರೆಗೂ ನಾಪತ್ತೆಯಾಗಿದ್ದ ತಿಪ್ಪೆರುದ್ರಸ್ವಾಮಿ ಎಂಬ ಈತ ಶ್ರೀಗಳು ಲಿಂಗೈಕ್ಯವಾದ ನಂತರ ಇದೀಗ ಪ್ರತ್ಯಕ್ಷನಾಗಿ ಈ ಯೋಗವನ ಬೆಟ್ಟವು ನನಗೆ ಬರಬೇಕೆಂದು ಅಪಪ್ರಚಾರ ಮಾಡಿಕೊಂಡು ಕುಟುಂಬ ಸಮೇತ ಬೆಂಗಳೂರು ಹಾಗೂ ಕುಣಿಗಲ್ ಯೋಗವನ ಬೆಟ್ಟದಲ್ಲಿ ಧರಣಿ ಮಾಡುತ್ತ ಠಿಕಾಣಿಯೂರಿದ್ದಾರೆ ಇವರು ಏನಿದ್ದರೂ ನ್ಯಾಯಾಲಯದಲ್ಲಿ ಬೇಕಿದ್ದರೆ ಪ್ರಶ್ನಿಸಲಿ ಇಲ್ಲಿ ಸುಳ್ಳು ಹೇಳುತ್ತ ಭಕ್ತರನ್ನು ದಿಕ್ಕುತಪ್ಪಿಸುವುದು ಬೇಡ ಎಂದರು.
ಶ್ರೀಗಳ ವಿಲ್ :- ಶ್ರೀಗಳು ಲಿಂಗೈಕ್ಯವಾಗುವ ಮುನ್ನ ಶ್ರೀ ಸಿದ್ದಲಿಂಗೇಶ್ವರ ಯೋಗವನ ಬೆಟ್ಟಗಳ ಟ್ರಸ್ಟ್ ರಚಿಸಿದ್ದು, ಅದರ ಪ್ರಕಾರ ಅಧ್ಯಕ್ಷರನ್ನಾಗಿ ಶ್ರೀ ಬಸವಕುಮಾರ್ ಶರಣರು ಮತ್ತು ಕಾರ್ಯದರ್ಶಿಯಾಗಿ ಚಿತ್ರದುರ್ಗದ ಮಾಜಿ ಶಾಸಕ ಬಸವರಾಜನ್ ಅವರನ್ನು ನೇಮಿಸಿ ಬೆಂಗಳೂರು ಬೆಟ್ಟಕ್ಕೆ ಶಾಮೇಗೌಡರನ್ನು, ಕುಣಿಗಲ್ ಬೆಟ್ಟಕ್ಕೆ ಪವಿತ್ರ ರನ್ನು ಚಿತ್ರದುರ್ಗ ಬೆಟ್ಟಕ್ಕೆ ರಶ್ಮಿಯನ್ನು ಆಲೂರು ಬೆಟ್ಟಕ್ಕೆ ಪ್ರವೀಣ್ ರನ್ನು ಶ್ರೀಗಳು ಟ್ರಸ್ಟಿಗಳನ್ನಾಗಿ ನೇಮಿಸಿದ್ದಾರೆ. ಹೀಗಿದ್ದರೂ ಸಹ ಇದುವರೆಗೂ ನಾಪತ್ತೆಯಾದ ತಿಪ್ಪೆರುದ್ರಸ್ವಾಮಿ ಇದೀಗ ಬಂದು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತ ಕುಣಿಗಲ್ ಹುರುಳಿಬೋರಸಂದ್ರದ ಯೋಗವನ ಬೆಟ್ಟವನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯೋಗವನ ಬೆಟ್ಟಗಳ ಮುಖ್ಯ ಕಾರ್ಯನಿರ್ವಾಹಣಾಧಿಕರಿ ಡಾ. ಪ್ರಕಾಶ್ ಮಾತನಾಡಿ ಮೂರನೇ ವ್ಯಕ್ತಿಯಾಗಿರುವ ತಿಪ್ಪೆರುದ್ರಸ್ವಾಮಿಯು ಇಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಹಾಗೂ ಬೆಟ್ಟದ ಬಗ್ಗೆ ಸುಳ್ಳು ಮಾಹಿತಿಯನ್ನು ಭಕ್ತರಿಗೆ ನೀಡುವ ಮೂಲಕ ದಿಕ್ಕು ತಪ್ಪಿಸುತ್ತ ಮಸಿ ಬಳಿಯುವುದರ ಜೊತೆಗೆ ಈ ಆಸ್ಥಿಯ ಅಧಿಪತ್ಯವನ್ನು ಹಿಡಿಯಲು ಸಂಚುರೂಪಿಸುತ್ತಿದ್ದಾನೆ ಈತನ ಕಾಯಕ ನಿಷ್ಠಿಯನ್ನು ಗಮನಿಸಿ ಶ್ರೀಗಳು ಚೀಮಾರಿ ಹಾಕಿ ಹೊರಹಾಕಿದ್ದರು ಈತನ ವಿರುದ್ದ ಸುತ್ತ ಮುತ್ತಲ ಗ್ರಾಮಸ್ಥರು ಸಹ ಈತನ ವರ್ತನೆಯನ್ನು ಖಂಡಿಸಿದ್ದರು ಇಂತಹವರ ವಿರುದ್ದ ಕೂಡಲೆ ಸಂಸ್ಥೆಯು ಮಾನನಷ್ಟ ಮೊಖದ್ದಮೆ ದಾಖಲಿಸಿ ಶಿಸ್ತುಕ್ರಮಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ