ಕುಣಿಗಲ್ :
ರಾತ್ರಿಯ ವೇಳೆಯಲ್ಲಿ ಮನೆಯ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಮೂವ ಖದೀಮರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ನಗರದ ಕೆ.ಆರ್.ಎಸ್.ಅಗ್ರಹಾರದ ವಾಸಿ ಶ್ರೀಧರ್ ಕುಮಾರ್ ಎಂಬುವರ ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 22 ಗ್ರಾಂ. ಚಿನ್ನದ ಒಡವೆಗಳು ಹಾಗೂ 12000 ನಗದು ಹಣವನ್ನು ಮೂರು ಜನ ಆರೋಪಿಗಳು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಈ ಪ್ರಕರಣವನ್ನು ಪತ್ತೆಗಾಗಿ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಜಗದೀಶ್ ಹಾಗೂ ವೃತ್ತ ನಿರೀಕ್ಷಕರಾದ ಗುರುಪ್ರಸಾದ್ ಇನ್ಸ್ಪೆಕ್ಟರ್ ಡಿ.ಎಲ್. ರಾಜು ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ವಿಕಾಸ್ ಶೆಟ್ಟವಳ್ ಅಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಕುಣಿಗಲ್‍ನ ಅಹಮದ್ ನವಾಜ್, ಅಫ್ಜಲ್ ಹಾಗೂ ಸದ್ದಾಮ್ ಇವರನ್ನು ದಸ್ತಗಿರಿ ಮಾಡಿ ಕಳ್ಳತನಕ್ಕೆ ಬಳಸಿದ್ದ ಹೋಂಡಾ ಶೈನ್ ಬೈಕ್ ಕಳ್ಳತನ ಮಾಡಿದ್ದ ಸುಮಾರು 80 ಗ್ರಾಂ ಚಿನ್ನಾಭರಣಗಳು 400 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಪೊಲೀಸ್ ಸಿಬ್ಬಂದಿಗಳಾದ ಸಿದ್ದರಾಜು ನಂದೀಶ ಪುಟ್ಟರಾಜು ದಯಾನಂದ ಷಡಾಕ್ಷರಿ, ಮಹೇಶ್, ಗಂಜಿಗಟ್ಟಿ ಇವರು ಆರೋಪಿಗಳನ್ನು ಬಂಧಿಸುವಲ್ಲಿ ನೆರವಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ