ಕುಣಿಗಲ್ :
ಪಟ್ಟಣದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದರೆ ಗ್ರಾಮದ ಸುತ್ತಮುತ್ತಲಿನ ಕಲ್ಮಶ, ಚರಂಡಿ ನೀರು ಕೆರೆಗೆ ಹರಿಯುತ್ತಿರುವುದನ್ನು ತಡೆಯಲು ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್ ಸಿಬ್ಬಂದಿಯೊಂದಿಗೆ ಕೆರೆ ಕೋಡಿಹಳ್ಳಿ ಸ್ವಚ್ಚತೆಗೆ ಕಾರ್ಯ ನಡೆಸಿದರು.
ಕುಣಿಗಲ್ ಪಟ್ಟಣದ ನಾಗರಿಕರಿಗೆ ಕುಡಿಯಲು ಹೇಮಾವತಿ ನೀರು ದೊಡ್ಡಕೆರೆ ಹರಿದು ನಗರದ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಆದರೆ ಪಕ್ಕದ ಗ್ರಾಮವಾದ ಕೊತ್ತಗೆರೆ ಬಾಗೇನಹಳ್ಳಿ ನೀಲತ್ತಹಳ್ಳಿ ಜೊತೆಗೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ಚರಂಡಿ ನೀರು ದೊಡ್ಡ ಕೆರೆಗೆ ಹರಿಯುವುದರಿಂದ ಜನರು ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮುಖ್ಯಾಧಿಕಾರಿ ರವಿಕುಮಾರ್ ಸಿಬ್ಬಂದಿಯೊಂದಿಗೆ ಕೊತ್ತಗೆರೆ ಕೂಡಿ ಸಮೀಪದ ಇಂದ ಬರುತ್ತಿದ್ದ ಚರಂಡಿ ನೀರನ್ನು ಜೆಸಿಬಿ ಯಂತ್ರಗಳು ಹಾಗೂ ಸಿಬ್ಬಂದಿಗಳ ಸಹಾಯದಿಂದ ನಿಲ್ಲಿಸುವ ಕಾರ್ಯ ಮಾಡಿದರು.
ಅಲ್ಲದೆ, ಕೊತ್ತಗೆರೆ ಗ್ರಾಮ ಪಂಚಾಯಿತಿಯ ಅಶುದ್ಧ ಚರಂಡಿ ನೀರನ್ನು ಕುಡಿಯುವ ನೀರಿನ ದೊಡ್ಡಕೆರೆಗೆ ಹರಿಸುವುದನ್ನು ಕೂಡಲೇ ತಡೆಗಟ್ಟುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿಗಳು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ