ಕುಣಿಗಲ್ :
ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಜನಪರ ಯೋಜನೆ ಮತ್ತು ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದರು ವಿರೋಧಪಕ್ಷಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸರ್ಕಾರಕ್ಕೆ ಕೆಟ್ಟಹೆಸರು ತರಲು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಪಿ.ಎಲ್.ಡಿ. ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಕಟುವಾಗಿ ಟೀಕಿಸಿದರು.
ಅವರು ತಾಲ್ಲೂಕಿನ ವಡ್ಡರಕುಪ್ಪೆ ಬಳಿ ಇರುವ ಕಲ್ಯಾಣಮಂಟಪದಲ್ಲಿ ರೈತ ಮೋರ್ಚ ವತಿಯಿಂದ ಹಮ್ಮಿಕೊಂಡಿದ್ದ ಕಿಸಾನ್ ಸನ್ಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ಅತ್ಯುತ್ತಮ ವಿನೂತನ ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ ಸಹ ವಿರೋಧ ಪಕ್ಷದವರ ಕುಮ್ಮಕ್ಕಿನವರಿಂದ ದೆಹಲಿಯಲ್ಲಿ ಇಂದು ನಿಜವಾದ ರೈತಾಪಿ ವರ್ಗ ಹೋರಾಟ ಮಾಡುತ್ತಿಲ್ಲ ಬರೀ ರಾಜಕೀಯ ದುರುದ್ದೇಶವನ್ನು ಸೃಷ್ಠಿಸಿ ಬಿಜೆಪಿ ಹಾಗೂ ಪ್ರಧಾನಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದರೆ ಎಂದು ಟೀಕಿಸಿದರು. ಅಲ್ಲದೆ ಇಂದು ಉತ್ತಮ ಆಡಳಿತ ನೀಡುತ್ತಿರುವ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಮತದಾರ ಪ್ರಭುಗಳ ಮನೆ ಮನೆಗೆ ಹೋಗಿ ಪ್ರಚಾರ ಪಡಿಸಬೇಕು ಜೊತೆಗೆ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಮಾಡುವ ಮೂಲಕ ಬಿಜೆಪಿ ಪಕ್ಷಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕೆಂದರು.
ಸಮಾವೇಶದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣಗೌಡ, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಮಾತನಾಡಿದರು , ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಿವಶಂಕರ್ , ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ್, ರಾಜ್ಯ ಯುವಮೋರ್ಚಾ ಕಾರ್ಯಕಾರಣಿ ಸದಸ್ಯ ರುದ್ರೇಶ್ ಜಿಲ್ಲಾ ಕಾರ್ಯದರ್ಶಿ ಸುಜಾತಾ ಚಂದ್ರಶೇಖರ್ , ಜಿಲ್ಲಾ ಉಪಾಧ್ಯಕ್ಷ ಮಹೇಶ್ ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ,ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಲೇಗೌಡ ,ರೈತ ಮೋರ್ಚಾ ಅಧ್ಯಕ್ಷ ಕುಂಬ್ಳಕಾಯಿ ರಾಜಣ್ಣ,ಮಂಡಲದ ಅಧ್ಯಕ್ಷ ಬಲರಾಮ್ ,ಮಂಡಲದ ಪ್ರಧಾನ ಕಾರ್ಯದರ್ಶಿ ದಿಲೀಪ್ ಗೌಡ , ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಕುಮಾರ್ , ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಇದೇ ಸಂದರ್ಭದಲ್ಲಿ ತರೇದಕುಪ್ಪೆ ರಮೇಶ್ ರವರನ್ನು ತಾಲ್ಲೂಕು ಮಾದರಿ ರೈತ ಎಂದು ಗುರುತಿಸಿ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ