ಕುಣಿಗಲ್ :
ಶ್ರೀ ಮಹಾವೀರ ಜಂತಿಯಂದೆ ಇಲ್ಲಿನ ಪುರಸಭೆ ಹಾಗೂ ತಾಲ್ಲೂಕು ಆಡಳಿತದ ನಿರ್ಲಕ್ಷದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿಯೆ ಖಸಾಯಿ ಕಾನೆಗಳು ರಾಜಾರೋಷವಾಗಿ ತೆರೆದು ಎಂದಿನಂತೆ ಮಾರಾಟ ವಹಿವಾಟನ್ನು ನೆಡೆಸಿದ ಕ್ರಮ ನಾಗರಿಕರ ಖಂಡನೆಗೆ ಗುರಿಯಾಗಿದೆ.
ಪ್ರತಿ ವರ್ಷ ಮಹಾವೀರ ಜಂತಿಯಂದು ಸರ್ಕಾರದ ನಿಯಮಾನುಸಾರ ಪಟ್ಟಣದಲ್ಲಿ ಮಾಂಸದ ಅಂಗಡಿ, ಕೋಳಿ ಅಂಗಡಿಗಳು ಹಾಗೂ ಮಧ್ಯದ ಅಂಗಡಿಗಳನ್ನು ಮುಚ್ಚಿಸಲಾಗುತ್ತಿತ್ತು ಆದರೆ ಈ ಬಾರಿ ಪುರಸಭೆಯ ಹಾಗೂ ತಾಲ್ಲೂಕು ಆಡಳಿತದ ನಿರ್ಲಕ್ಷ ದೋರಣೆಯಿಂದ ಶ್ರೀಮಹಾವೀರ ಜಯಂತಿ ಇರುವುದನ್ನು ಅಧಿಕಾರಿಗಳು ಮೊದಲೆ ಅರಿತು ಖಸಾಯಿಕಾನೆಯ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ವ್ಯಾಪಾರ ಮಾಡದಂತೆ ತಿಳಿ ಹೇಳಬಹುದಿತ್ತು ಆದರೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಮಾಂಸದ ಅಂಗಡಿಗಳ ವ್ಯಾಪಾರಸ್ಥರ ನಿರ್ಲಕ್ಷ್ಯ ದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದಡೆ ಯಾವುದೆ ಕಾನೂನಿನ ಭಯವಿಲ್ಲದೆ ರಾಜಾ ರೋಷವಾಗಿ ಪ್ರಾಣಿಗಳ ಮರಣಹೋಮ ನಡೆದಿರುವುದು ಇಲ್ಲಿನ ತಾಲ್ಲೂಕು ಆಡಳಿತದ ವೈಪಲ್ಯವೆ ಕಾರಣ ಎಂದು ಹಿರಿಯ ನಾಗರಿಕರು, ಪ್ರಜ್ಞಾಂತರು, ಹಾಗೂ ಜೈನ ಧರ್ಮದವರು ಖಂಡಿಸಿದ್ದು ಮುಂದಿನದ ದಿನಮಾನದಲ್ಲಿ ಮಹಾವೀರ ಜಯಂತಿಯನ್ನು ಕಡೆಗಣಿಸಿದರೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ