ಕುಣಿಗಲ್ : ಮುಂಚಿತವಾಗಿ ಆಸ್ತಿ ತೆರಿಗೆ ಕಟ್ಟಿದರೆ ಶೇ.5 ರಷ್ಟು ರಿಯಾಯಿತಿ

ಕುಣಿಗಲ್ :

      ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಸರ್ಕಾರದ ನಿಯಮಾನುಸಾರ ಆಸ್ತಿ ತೆರಿಗೆಯನ್ನು ಶೇಕಡಾ 1.5 ಕ್ಕೆ ಏರಿಸಲಾಗಿದ್ದು, ಜುಲೈ ತಿಂಗಳೊಳಗೆ ಆಸ್ತಿ ತೆರಿಗೆ ಕಟ್ಟಿದರೆ ಶೇ 5 ರಷ್ಟು ಕಡಿತಗೊಳಿಸಲಾಗುವುದು ಎಂದು ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಅವರು ತಿಳಿಸಿದರು.

      ಪುರಸಭಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆಸ್ತಿ ತೆರಿಗೆಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಷ್ಕರಣೆ ಮಾಡಿ ಶೇ. 1.5 ರಷ್ಟು ಏರಿಕೆ ಮಾಡಲಾಗಿದೆ. ನೂತನ ದರವನ್ನು ಪಟ್ಟಣದ 26 ವಾರ್ಡ್‍ವಾರು ವಿಂಗಡಿಸಲಾಗಿದ್ದು, ವಾರ್ಡಿನ ಪ್ರದೇಶಕ್ಕೆ ಅನುಗುಣವಾಗಿ ಉಪ ನೋಂದಣಾಧಿಕಾರಿಗಳು ವಿವಿಧ ಪ್ರದೇಶಗಳ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ದರಗಳನ್ನು, ವಸತಿ, ವಾಣಿಜ್ಯ ಸಂಕಿರಣ ಹಾಗೂ ನಿವೇಶನ, ಆಸ್ತಿ ತೆರಿಗೆಗಳನ್ನು ಪರಿಷ್ಕರಣೆ ಮಾಡಿದ್ದು 20 ಮತ್ತು 21 ಸಾಲಿನಲ್ಲಿ 2 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ನಿರೀಕ್ಷಣೆ ಮಾಡಿದ್ದು ಈ ಹಣವನ್ನು ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು.

      ಈಗ ವಿಧಿಸಿರುವ ಆಸ್ತಿ ತೆರಿಗೆಯು ಹೆಚ್ಚೇನೂ ಆಗಿರುವುದಿಲ್ಲ. ಹೀಗಿದ್ದರೂ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದ್ದು ಅದಕ್ಕೆ ಯಾವುದೇ ಆಸ್ಪದ ಕೊಡಬಾರದು, ಸರ್ಕಾರದ ಮಾರ್ಗಸೂಚಿ ಅನ್ವಯ ಶೇ 1.5 ರಷ್ಟು ತೆರಿಗೆಯನ್ನು ಪರಿಷ್ಕರಿಸಿಲಾಗಿದೆ. ಹಿಂದಿನ ಪುರಸಭೆಯ ಸಾಮಾನ್ಯ ಸಭೆಯ ಅನುಮೋದನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

      ಕೊರೋನಾ ರೋಗ ಇರುವುದರಿಂದ ಆಸ್ತಿ ತೆರಿಗೆಯಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ಇದ್ದು ಆಗಸ್ಟ್ ನಂತರ ಪಾವತಿಸುವ ತೆರಿಗೆಗೆ ಎರಡರಷ್ಟು ದಂಡ ವಿಧಿಸಲಾಗುವುದು. ಪಟ್ಟಣದಲ್ಲಿ 11.505 ಕ್ಕೂ ಹೆಚ್ಚು ನಿವೇಶನ, ವಾಣಿಜ್ಯ ಕಟ್ಟಡ, ವಸತಿಗಳಿದ್ದು ಇವುಗಳಿಂದ 2 ಕೋಟಿ ರೂ. ಗೂ ಹೆಚ್ಚು ಆದಾಯ ನಿರೀಕ್ಷೆ ಮಾಡಿದ್ದು, ಪುರಸಭೆಯಲ್ಲಿ ಕೇವಲ 4.700 ಅಧಿಕೃತ ಖಾತೆದಾರರಿದ್ದು, ಈಗಾಗಲೇ ಇ-ಖಾತೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆಸ್ತಿ ತೆರಿಗೆ ವಿಚಾರದಲ್ಲಿ ಜನರು ಸುಳ್ಳು ವದಂತಿಗೆ ಕಿವಿಕೊಡದೆ ಕಾಲಕಾಲಕ್ಕೆ ಸಲ್ಲಿಸಬೇಕಾದ ಆಸ್ತಿತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷರಾದ ಮಂಜುಳಾ ರಂಗಪ್ಪ, ಮುಖ್ಯಾಧಿಕಾರಿ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸನಾವುಲ್ಲಾ, ಸದಸ್ಯರಾದ ಅರುಣ್‍ಕುಮಾರ್, ನಾಗರಾಜ್, ಮಲ್ಲಿಪಾಳ್ಯ ಶ್ರೀನಿವಾಸ್, ದೇವರಾಜ, ವೆಂಕಟಲಕ್ಷ್ಮಮ್ಮ, ಉದಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link