ಕುಣಿಗಲ್ :
2020-21ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಮೀಕ್ಷೆಗಳ ವರದಿಯಂತೆ
ತಾಲ್ಲೂಕಿನ ಅಮೃತೂರು ಸರ್ಕಾರಿ ಆಸ್ಪತ್ರೆಯು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎ.ಬಿ.ಆರ್.ಕೆ) ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಸ್ಪಂದಿಸಿ ಸಮರ್ಪಕವಾಗಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದ ಪರಿಣಾಮ ರಾಜ್ಯಮಟ್ಟದ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 12ನೇ ಸ್ಥಾನ ಪಡೆಯುವ ಮೂಲಕ ತಾಲ್ಲೂಕಿನ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಲ್ಲಿನ ಆಡಳಿತಾಧಿಕಾರಿ ಹಾಗೂ ದಂತ ವೈದ್ಯ ಕೆ.ಜಗದೀಶ್ ಮಾತನಾಡಿ, ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಮಾಡುತ್ತಿರುವ ವೈದ್ಯರು ಮತ್ತು ದಾದಿಯರು ಹಾಗೂ ಆರೋಗ್ಯ ಮಿತ್ರ ಜಿ.ಎಲ್.ಹರಿಪ್ರಸಾದ್ ಇವರುಗಳು ಸೇವಾ ಮನೋಬಾವವನ್ನು ಅರಿತು ಉತ್ತಮ ಸೇವೆಯನ್ನು ಸಮರ್ಪಿಸುತ್ತಿರುವುದರಿಂದ ಈ ಯೋಜನೆಯಲ್ಲಿ ರಾಜ್ಯಕ್ಕೆ 12ನೇ ಸ್ಥಾನ ಲಭಿಸಿದೆ ಎಂದು ಹೇಳಲು ಬಯಸಿತ್ತೇನೆ ಎಂದು ತಿಳಿಸಿದ ಅವರು ಸರ್ಕಾರಿ ಆಸ್ಪತ್ರಯು ನೀಡುವ ಔಷದೋಪಚಾರಗಳು ಸೇರಿದಂತೆ ಇತರೆ ಸೌಲತ್ತುಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಂಡು ಸದಾ ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿಟ್ಟುಕೊಳ್ಳಬೇಕು ಎಂದ ಅವರು ಬಹುತೇಕರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದೊಂದಿಗೆ ರೋಗಿಗಳಿಗೆ ಚಿಕಿತ್ಸೆಗಳು ದೊರೆಯುತ್ತಿದ್ದು ಆ ಬಗ್ಗೆ ನಾಗರಿಕರು ತಿಳಿದುಕೊಂಡು ಸರ್ಕಾರಿ ಆಸ್ಪತ್ರೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಆರೋಗ್ಯವಂತರಾಗಿ ಬಾಳಬಹುದು. ಈ ಯೋಜನೆಯ ಲ್ಲಿ ಸುಮಾರು 3200 ಹೆಲ್ತ್ ಕಾರ್ಡ್ ಗಳನ್ನು ವಿತರಿಸಿದ್ದಾರೆ, 1600 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಲಭಿಸಿದೆ. ಈ ಯೋಜನೆಯ ಲಾಭ ಪಡೆಯಬೇಕಾದರೆ ಫಲಾನುಭವಿಗಳು ರೇಷನ್ ಕಾರ್ಡ್ ಹಾಗೂ ಹೆಲ್ತ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಬಂದು ಚಿಕಿತ್ಸೆ ಪಡೆಯುವ ಅನುಕೂಲವನ್ನು ನೀಡಲಾಗಿದೆ ಇನ್ನೂ ಮೆಲ್ಮಟ್ಟದ ಆಸ್ಪತ್ರೆಗಳಿಗೆ ಹೋಗ ಬೇಕಾದರೆ ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ನೊಂದಾಯಿಸಿ ಅಲ್ಲಿನ ವೈದ್ಯರು ನೀಡುವ ರೆಫರಲ್ ಮೂಲಕ ಈ ಯೋಜನೆಯಲ್ಲಿ ನೊಂದಾವಣಿ ಗೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವ ಅವಕಾಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ