ಪಿಡಿಓ ಗಳ ಹುದ್ದೆ ಖಾಲಿ : ಆಡಳಿತ ಯಂತ್ರ ಕುಸಿತ

ಕುಣಿಗಲ್ :

      ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ತಾಲ್ಲೂಕು ಆಡಳಿತದ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ರಾಜ್ಯ ಜೆ.ಡಿ.ಎಸ್.ಯುವ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಗರಾಜಯ್ಯ ತಿಳಿಸಿದರು.
ಅವರು ತಾಲೂಕು ಪಂಚಾಯಿತಿ ಕಚೇರಿಯ ಮುಂದೆ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಪಿ.ಡಿ.ಓ.ಗಳ ಹಾಗೂ ಕಾರ್ಯದರ್ಶಿಗಳನ್ನು ಏಕಾಏಕಿ ಸುಮಾರು 10 ಜನ ಅಧಿಕಾರಿಗಳ ವರ್ಗಾವಣೆ ಕೊಂಡಿರುವುದರಿಂದ ಗ್ರಾಮೀಣ ಭಾಗದ ಆಡಳಿತ ಯಂತ್ರ ಸುಪೂರ್ಣ ಕುಸಿದು ಕುಸಿದು ಹೋಗಿದೆ. ಆದ್ದರಿಂದ ವರ್ಗಾವಣೆ ಗೊಂಡಿರುವ ಇವರುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿ ಕ್ಷೇತ್ರದ ಜನರ ಕೆಲಸ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ವರ್ಗ ವಾಗಿರುವ ಪಿ.ಡಿ.ಒ.ಗಳನ್ನು ರಿಲೀವ್ ಮಾಡಬಾರದು. ಕಳೆದ ಮೂರು ವರ್ಷಗಳಿಂದ ಶಾಸಕರು ಜಿಲ್ಲಾ ಪಂಚಾಯಿತಿ ಪಿ.ಡಿ.ಒ. ನೀರಾವರಿ ಇಲಾಖೆ,ಆಸ್ಪತ್ರೆಗಳಲ್ಲಿ ಸಮರ್ಪಕವಾದ ಸಿಬ್ಬಂದಿ ಇಲ್ಲದೆ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ದೂರಿದರು. ಶಾಸಕರಿಗೆ ದಲಿತರ ಬಗ್ಗೆ ಯಾವುದೇ ಅಭಿಮಾನ ಇಲ್ಲದೆ ಕೇವಲ ಕಣ್ಣೊರೆಸುವ ತಂತ್ರ ಅನುಭವಿಸುತ್ತಿದ್ದಾರೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಯಾವುದೇ ದಲಿತರಿಗೆ ಸಹಾಯ ಮಾಡಿರುವುದಿಲ್ಲ ಎಂದು ತಿಳಿಸುತ್ತಾ ಕೂಡಲೇ ಸರ್ಕಾರದೊಂದಿಗೆ ವ್ಯವಹರಿಸಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಸಬೇಕೆಂದು ಆಗ್ರಹಿಸಿದರು.

     ಜೆ.ಡಿ.ಎಸ್.ದಲಿತ ಮುಖಂಡ ಶೇಷಣ್ಣ ಮಾತನಾಡಿ ಶಾಸಕರು ಮೂರುವರ್ಷದ ಆಡಳಿತ ಯಾವುದೇ ಜನಪರ ಯೋಜನೆ ಪರ ಕೆಲಸ ಮಾಡಿಲ್ಲ ದ್ವೇಷ ರಾಜಕಾರಣ ಮಾಡುತ್ತಾ ಹಿಂದಿನ ಶಾಸಕರಾದ ನಾಗರಾಜಯ್ಯ ಹುಚ್ಚಮಸ್ತಿಗೌಡ ಹಾಗೂ ವೈ.ಕೆ.ರಾಮಯ್ಯ ಇವರ ಆಡಳಿತಾವಧಿಯಲ್ಲಿ ಮಾಡಿದಂತಹ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೆ ಜನಸಾಮಾನ್ಯರಿಗೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಾರೆ ಇವರು ಶಾಸಕರಾದ ನಂತರ 2000 ಮನೆಗಳನ್ನು ಮಂಜೂರು ಮಾಡಿದ್ದೇವೆ ಎನ್ನುತ್ತಾರೆ ಆದರೆ ಅಷ್ಟು ಮನೆಗಳು ನಿರ್ಮಾಣ ಮಾಡಿರುವುದಿಲ್ಲ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ ಇವರು ದಲಿತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರಿಗೆ ಟೋಪಿ ಹಾಕುವ ಕೆಲಸವನ್ನು ಇನ್ನಾದರೂ ಸಂಸದರು ಮತ್ತು ಶಾಸಕರು ನಿಲ್ಲಿಸಬೇಕಾಗಿದೆ ಎಂದು ಒತ್ತಾಯಿಸಿದರು.ಯಾವುದೇ ಇಲಾಖೆಗಳಲ್ಲಿ ಸರಿಯಾದ ಸಿಬ್ಬಂದಿ ಇಲ್ಲದೆ ಜನಸಾಮಾನ್ಯರಿಗೆ ಕೆಲಸಗಳು ನಡೆಯುತ್ತಿಲ್ಲ ಎಂದು ದೂರಿದರು.

      ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ನಾಯಕ್, ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್,ಜೆ.ಡಿ.ಎಸ್. ಅಧ್ಯಕ್ಷರು ಕೆ.ಎಲ್.ಹರೀಶ್, ವೈ.ಎಚ್.ರಂಗಸ್ವಾಮಿ,ವರದರಾಜು ಮಾಜಿ ಪುರಸಭಾ ಸದಸ್ಯ ರಂಗಸ್ವಾಮಿ, ಪುರಸಭಾ ಸದಸ್ಯ ವಾಸು ಉಪಸ್ಥಿತರಿದ್ದು. ನಂತರ ಬಂದ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಅವರಿಗೆ ಮನವಿ ನೀಡುವ ಮೂಲಕ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap