‘ಅಂಧಕಾರ ತೊಲಗಿಸಿ ಬೆಳಕು ನೀಡುವ ಬೆಸ್ಕಾಂ’ – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

 ಕುಣಿಗಲ್ : 

      ಸನಾತನ ಧರ್ಮದ ಆಚರಣೆ ಹಾಗೂ ತತ್ವಸಿದ್ದಾಂತಗಳು ಮನುಷ್ಯನ ಆಂತರಾತ್ಮಕ್ಕೆ ಜ್ಞಾನದ ಬೆಳಕು ನೀಡಿದರೆ ವಿದ್ಯುತ್ ಇಲಾಖೆಯು ಇಂದಿನ ಸಮಾಜದ ಹೊರ ಜಗತ್ತಿಗೆ ಬೆಳಕು ನೀಡುವ ಮೂಲಕ ಜನ ಜಿವನದ ಬದುಕಿನ ಅಂಧಕಾರ ತೊಲಗಿಸಿ ಜ್ಞಾನದ ಅರಿವು ಮೂಡಿಸುವ ಕಾರ್ಯ ಮಾಡುತ್ತಿವೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಿಳಿಸಿದರು.

      ಅವರು ಪಟ್ಟಣದ ಬೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ ದೇವಾಲಯದ ಉದ್ಘಾಟನೆ ಹಾಗೂ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

      ಎಲ್ಲಾ ಶುಭಕಾರ್ಯಗಳಿಗೆ ವಿಘ್ನೇಶ್ವರನ ಅನುಗ್ರಹ ಅವಶ್ಯಕವಾಗಿದ್ದು ಮನುಷ್ಯನ ಒಳಭಾಗದಲ್ಲಿ ಪರಮಾತ್ಮ ದಿವ್ಯಜ್ಯೋತಿ ನೀಡುತ್ತಿದ್ದಾರೆ. ಆಧುನಿಕ ಬದುಕಿನಲ್ಲಿ ವಿದ್ಯುತ್ ಇಲಾಖೆಯು ಹೊರಜಗತ್ತಿಗೆ ಬೆಳಕು ನೀಡುತ್ತಾ ವಿಜ್ಞಾನದಲ್ಲಿ ಆವಿಷ್ಕಾರವನ್ನು ಮುಂದುವರಿಸುತ್ತಿದೆ. ಇದನ್ನು ಉತ್ತಮ ಕೆಲಸಗಳಿಗೆ ಸಮಾಜವು, ಮನುಷ್ಯರು ಬಳಸಿಕೊಂಡು ತಮ್ಮ ಜ್ಞಾನವನ್ನು ರೂಢಿಸಿಕೊಂಡು ಸನಾತನ ಧರ್ಮವನ್ನು ಆಧ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ಮನುಷ್ಯನ ಬದುಕು ಸಾರ್ಥಕ ಮಾಡಿಕೊಳ್ಳಲು ಅಜ್ಞಾನ ಅಂಧಕಾರ, ಮೌಢ್ಯತೆ, ಜಡತ್ವವನ್ನು ಹೋಗಲಾಡಿಸಿ ಬೆಳಕಿನತ್ತ ಮುನ್ನಡೆಯುವಲ್ಲಿ ಮುಂದಾಗಬೇಕಾಗಿದೆ ಎಂದು ತಿಳಿಸಿದರು

      ಕೆಪಿಟಿಸಿಎಲ್ ಎಂ.ಡಿ.ರಾಜೇಶ್ ಗೌಡ ಮಾತನಾಡಿ, ವಿದ್ಯುತ್ ನೌಕರರು ದಕ್ಷ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಜನಸಾಮಾನ್ಯರಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ನೀಗಿಸುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಇಲಾಖೆಯು ಆರ್ಥಿಕವಾಗಿ ಬಹಳಷ್ಟು ಮುಂದುವರೆದಿದ್ದು ಶೇಕಡ 80ರಷ್ಟು ವಿದ್ಯುತ್ ಅನ್ನು ತಂತ್ರಜ್ಞಾನ, ಸೋಲಾರ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳಲು ಮೂಲಕ ಜನರು ಮುಂದಾಗಬೇಕಾಗಿದೆ. ಗ್ರಾಹಕರಿಗೆ ಇತ್ತೀಚಿಗೆ ವಿದ್ಯುತ್ ಬಿಲ್ಲು ಜಾಸ್ತಿಯಾಗುತ್ತಿದೆ ಎಂದು ತಿಳಿಸುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಹಲವಾರು ಸುಧಾರಣೆ ಬದಲಾವಣೆಗಳನ್ನು ತರುತ್ತಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಶ್ರೀ ಮಂಗಳಾನಂದ ಸ್ವಾಮೀಜಿಗಳು, ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ಆದಿನಾರಾಯಣ, ಬೆಸ್ಕಾಂ ರಾಜ್ಯ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ರಾಜ್ಯ ಬೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಶ್ರೀನಿವಾಸಗೌಡ, ತುಮಕೂರು ಎಸ್.ಇ ಗೋವಿಂದಪ್ಪ, ಕುಣಿಗಲ್ ಉಪವಿಭಾಗದ ಇಇ ಪುರುಷೋತ್ತಮ್ ಎಇಇ ವೀರಭದ್ರಾಚಾರಿ, ಗಿರೀಶ್ ಸೇರಿದಂತೆ ಹಲವಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link