ಕುಣಿಗಲ್ :
ಹೇಮಾವತಿ ನೀರಿನ ನಾಲೆಯ ಡಿ.26 ರ ಬಳಿ ಬೃಹತ್ ನಾಲೆಯನ್ನೇ ಕಾನೂನು ಬಾಹೀರವಾಗಿ ದ್ವಂಸ ಮಾಡಿ ತುರುವೇಕೆರೆ ಭಾಗಕ್ಕೆ ನೀರು ಹರಿಸಿ ಕೊಳ್ಳುತ್ತಿದ್ದರೂ ಹೇಮಾವತಿ ಇಂಜಿನಿಯರ್ ಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಅಧಿಕಾರ ಹಸ್ತ ರಾಜಕಾರಣಿಗಳ ಕೈ ಗೊಂಬೆಗಳಾಗಿದ್ದಾರೆಂದು ರಾಜ್ಯ ಯುವ ಜೆ.ಡಿ.ಎಸ್. ಪ್ರಧಾನಿ ಕಾರ್ಯದರ್ಶಿ ಜಗದೀಶ್ ಡಿ.ನಾಗರಾಜಯ್ಯ ಕಿಡಿಕಾರಿದ್ದಾರೆ.
ಅವರು ನಗರದ ಜೆ.ಡಿ.ಎಸ್. ಕಚೇರಿಯಲ್ಲಿ ನಾಲೆ ಹೊಡೆದು ಹಾಕಿರುವ ಟೋ ಮತ್ತು ವಿಡಿಯೋಗಳ ಸಮೇತ ಪತ್ರಿಕಾ ಗೋಷ್ಠಿಯಲ್ಲಿ ಸಾಬೀತು ಪಡಿಸಿ ಮಾತನಾಡುತ್ತ ಪ್ರತಿ ವರ್ಷ ಕುಣಿಗಲ್ ತಾಲ್ಲೂಕಿಗೆ ವಾಡಿಕೆಯಂತೆ ಮೊದಲನೇ ಹಂತದಲ್ಲಿಯೇ ಹೇಮಾವತಿ ನೀರನ್ನು ಹರಿಸಲಾಗುತ್ತಿತ್ತು ಆದರೆ ಈ ಬಾರಿ ಇಲ್ಲಿನ ಶಾಸಕರ ಬೇಜವಾಬ್ದಾರಿಯೋ, ಅಥವಾ ಸಲಹಾಸಮಿತಿಯಲ್ಲಿನ ಕೊರತೆಯೋ ಇಲ್ಲ ಒಳಕುಮ್ಮಕ್ಕೋ ಈ ಬಾರಿ ನಮ್ಮ ತಾಲ್ಲೂಕಿಗೆ ಬರಬೇಕಾಗಿದ್ದ ಹೇಮಾವತಿ ನೀರು ಇನ್ನೂ ಬರದೆ ಬೇರೆಡೆಗೆ ಹೋಗುತ್ತಿದೆ. ನಾಲೆಯನ್ನು ಹೊಡೆದು ಹಾಕಿ ತುರುವೇಕೆರೆ ಭಾಗಕ್ಕೆ ಹರಿಸಿಕೊಳ್ಳುತ್ತಿರುವ ಶಾಸಕ ಜಯರಾಂ ಅವರ ನಡೆ ಖಂಡನೀಯ ಏಕಾಏಕಿ ನಾಲೆಯನ್ನು ಹೊಡೆದು ಹಾಕುವ ಪ್ರಮಯ ಏನು ಇಲ್ಲ ಈ ಹಿಂದಿನಿಂದಲೂ ಈ ಡಿ. 26ನಾಲೆಯ ಭಾಗದಿಂದ ಕುಣಿಗಲ್ ತಾಲ್ಲೂಕಿಗೆ ಸರಾಗವಾಗಿ ನೀರು ಹರಿದು ಬರುತ್ತಿತ್ತು ಆದರೆ ಈ ಬಾರಿ ನಾಲೆಯನ್ನೇ ಹೊಡೆದು ಹಾಕುವ ಸಂಚು ಏಕೆ ಮಾಡಿದರು ಇದಕ್ಕೆ ಯಾರ ಕುಮ್ಮಕ್ಕು ಇದೆ ಎಂದು ಪ್ರಶಗನಿಸಿದ ಅವರು ಕೂಡಲೇ ಹೆಬ್ಬೂರು ಹೇಮಾವತಿ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕುಣಿಗಲ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರುಗಳಿಗೆ ಈ ನಾಲೆಯ ದ್ವಂಸದ ವಿಚಾರ ಗೊತ್ತಿದ್ದರೂ ತಪ್ಪು ಮಾಡಿದ ವರ ವಿರುದ್ದ ಕ್ರಮ ಕೈಗೊಂಡು ಶೀಕ್ಷೆಗೊಳಪಡಿಸದೇ ಮೀನಾ ಮೇಷ ಎಣಿಸುತ್ತಿದ್ದಾರೆ. ಅದೇ ಒಬ್ಬ ಸಾಮಾನ್ಯ ರೈತ ಬರೀ ಪಂಪ್ ಮೂಲಕ ಹೇಮಾವತಿ ನೀರು ಹೊಡೆದು ಕೊಂಡರೆ ಸಾಕು ಅಂತಹವರ ಮೇಲೆ ಕೇಸು ಹಾಕಿಬಿಡುತ್ತಿದ್ದರು, ಆದರೆ ಈಗ ನಾಲೆಯನ್ನೇ ಹೊಡೆದು ಹಾಕಿದ್ದಾರಲ್ಲ ಅವರ ಮೇಲೆ ಏಕೆ ಈ ಹೇಮಾವತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಇನ್ನೂ ಕುಣಿಗಲ್ ಕ್ಷೇತ್ರದ ಶಾಸಕರು ಹೇಮಾವತಿ ನೀರು ಹರಿಯುತ್ತಿದ್ದರೂ ಏಕೆ ಕ್ಷೇತ್ರಕ್ಕೆ ಹರಿಸುವ ಮನಸ್ಸು ಮಾಡಿಲ್ಲ ಇವರೇನಾದರೂ ಅವರಿಗೆ ಹರಿಸಿಕೊಳ್ಳುವಂತೆ ಅವಕಾಶ ಮಾಡಿಕೊಟ್ಟರೇ ಎಂಬ ಶಂಕೆ ವ್ಯಕ್ತಪಡಿಸಿದ ಅವರು ಈ ಭಾಗದ ಬಿ.ಜೆ.ಪಿ. ಮುಖಂಡರಿಗೂ ಅಧಿಕಾರ ಇದೆ ಅವರೂ ಸಹ ತಾಲ್ಲೂಕಿಗೆ ಹೇಮಾವತಿ ಹರಿಸುವ ಕೆಲಸ ಮಾಡಬಹುದಿತ್ತು ಆದರೆ ಈ ಇಬ್ಬರೂ ಅಧಿಕಾರ ಇದ್ದರೂ ಹೆಮಾವತಿ ನೀರನ್ನು ಸರಿಯಾದ ಸಮಯಕ್ಕೆ ಹರಿಸಲು ವಿಫಲರಾಗಿದ್ದರೆ, ಇನ್ನಾದರೂ ಸಬೂಬು ಹೇಳದೆ ಕ್ಷೇತ್ರಕ್ಕೆ ಈ ಬಾರಿಯಾದರೂ ಹೇಮಾವತಿ ನೀರನ್ನು ಸಮರ್ಪಕವಾಗಿ ಹರಿಸಿ ಜನರಿಂದ ಮೆಚ್ಚಿಗೆ ಪಡೆಯಲಿ, ಅದನ್ನು ಬಿಟ್ಟು ಬರೀ ಗಂಗಾಪೂಜೆ ಮಾಡುವ ಮೂಲಕ ಪ್ರಚಾರ ಪಡೆಯುವುದನ್ನು ಬಿಡಲಿ ಎಂದು ಕುಹಕವಾಡಿದರು. ಹೇಮಾವತಿ ನಾಲೆಯನ್ನು ಅಕ್ರಮವಾಗಿ ಹೊಡೆದು ಹಾಕಿರುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಮೇಲ್ನೋಟಕ್ಕೆ ಅಧಿಕಾರಿಗಳ ಕುಮ್ಮಕ್ಕು ಇರುವುದು ಕಂಡು ಬಂದಿರುವುದರಿಂದ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ನಿರ್ದೇಶಕರು, ನೀರಾವರಿ ನಿಗಮ ನಿಯಮಿತ ಬೆಂಗಳೂರು ಹಾಗೂ ಮುಖ್ಯ ಇಂಜಿನಿಯರ್ ಹೇಮಾವತಿ ನಾಲವಲಯ ತುಮಕೂರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರುನೀಡಲಾಗಿದೆ ಎಂದು ತಿಳಿಸಿದ ಅವರು ನ್ಯಾಯ ಸಿಗದಿದ್ದರೆ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಪುರಸಭಾ ಸದಸ್ಯ ಶ್ರೀನಿವಾಸ್, ಮುಖಂಡರುಗಳಾದ ಪ್ರೆಸ್ ರಂಗಸ್ವಾಮಿ, ಎಡೆಯೂರು ದೀಪು, ನಾಗರಾಜು, ತರೀಕೆರೆ ಪ್ರಕಾಶ್, ಮನೋಜ್, ಧನಂಜಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
