ಹಿಂದುಳಿದವರ ಮೀಸಲಾತಿಗೆ ಬಲಾಢ್ಯರ ಲಗ್ಗೆ

ಕುಣಿಗಲ್ :

     ರಾಜ್ಯದಲ್ಲಿ ಹಿಂದುಳಿದ ಸಮಾಜದ ಮೀಸಲಾತಿಯನ್ನು ಕಬಳಿಸಲು ಮೇಲ್ವರ್ಗದ ಜಾತಿಗಳು ಹವಣಿಸುತ್ತಿರುವುದು ವಿಪರ್ಯಾಸ ಎಂದು ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟಗಳ ಸಂಚಾಲಕ ಧನಿಯಕುಮಾರ್ ಆರೋಪಿಸಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ತುಮಕೂರು ಹಿಂದುಳಿದ ವರ್ಗಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಆ.21ರ ಶನಿವಾರ ಅರ್ಬನ್ ರೆಜಾರ್ಟ್ ತುಮಕೂರು ಇಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾತನಾಡುತ್ತ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನರು ಶೇಕಡಾ 63ರಷ್ಟು ಜನಸಂಖ್ಯೆ ಹೊಂದಿದ್ದಾರೆ ಆದರೆ ಕೇವಲ 6ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ವರ್ಗದ ಪಂಚಮಸಾಲಿ ಲಿಂಗಾಯಿತರು, ಕುಂಚಿಟಿಗ ಒಕ್ಕಲಿಗ ಸಮಾಜವು ಹಿಂದುಳಿದ ವರ್ಗದ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿರುವುದು ವಿಪರ್ಯಾಸ ಹಾಗೂ ಆ ಸಮಾಜಕ್ಕೆ ಶೋಭೆ ತರುವುದಿಲ್ಲ ಎಂದ ಅವರು ಈಗಿರುವ ಹಿಂದುಳಿದವರ್ಗದವರಿಗೆ ಮೇಲ್ವರ್ಗದವರನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೆ ಸಣ್ಣಪುಟ್ಟ ಜಾತಿಗಳಾದ ತಿಗಳ, ಸವಿತಾ, ಗೊಲ್ಲ, ಮಡಿವಾಳ, ಕುರುಬ, ಮಡಿವಾಳ, ಈಡಿಗ, ಕುಂಬಾರ, ದೊಂಬಿದಾಸ, ಅಕ್ಕಿಪಿಕ್ಕಿ, ಸೇರಿದಂತೆ ಇತರೆ ನೂರಾರು ಸಣ್ಣ ಜಾತಿಗಳ ವರ್ಗದವರಿಗೆ ಅನ್ಯಾಯವಾಗುತ್ತದೆ ಆದ್ದರಿಂದ ಇಂತಹ ಧೋರಣೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಂಘಟನೆ ನಡೆಯುತ್ತಿದ್ದು ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಸಮ್ಮೇಳನವು ನಡೆದಿದ್ದು, ಮುಂದಿನ 21ರಂದು ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಭೆ ಜರಗಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು ಪಾಲ್ಗೊಂಡು ತಮ್ಮ ಹಕ್ಕಿಗಾಗಿ ಹೋರಾಟದ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದ ಅವರು ದಿ.ಮುಖ್ಯಮಂತ್ರಿ ದೇವರಾಜಾರಸು ಅವರ ಆಡಳಿತ ಸುವರ್ಣಾಕ್ಷರದಿಂದ ಬರೆದಿಡುವಂತಿತ್ತು. ಅವರು ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸಲು ಕಾರಣಕರ್ತರು, ಹಾಗೂ ಜೀತ ಪದ್ಧತಿ ತೊಲಗಿಸಿದರು, ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಶ್ರಮಿಸಿದವರು ಇದೇ ಹಿಂದುಳಿದ ವರ್ಗದ ನಾಯಕ. ನಂತರ ನಾಯಕರಾದಂತಹ ಬಂಗಾರಪ್ಪ ಹಾಗೂ ಇತರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿದರು.

     ಸಮಾವೇಶ ಒಂದರಲ್ಲಿ ಡಾ. ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಮುಖ್ಯಮಂತ್ರಿ ಚಂದ್ರು ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ, ಸಣ್ಣಮುದ್ದಯ್ಯ ಸೇರಿದಂತೆ ಅನೇಕ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರಗೌಡ, ಪ್ರೆಸ್ ರಾಜಣ್ಣ ಪ್ರಜಾಪ್ರಗತಿ ಉಪಸಂಪಾದಕ ಟಿ.ಎನ್.ಮಧುಕರ್, ಶ್ರೀನಿವಾಸ್, ಶ್ರೀನಿವಾಸ್ ರಾವ್, ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡಯ್ಯ , ತಾ.ಪಂ., ಅಧ್ಯಕ್ಷ ಎಸ್.ಆರ್. ಚಿಕ್ಕಣ್ಣ, ಟೆಂಟ್ ನಾರಾಯಣರಾವ್, ಸುರೇಶ್, ವಿಶ್ವಕರ್ಮ ಕುಮಾರ್, ಇಂಜಿನಿಯರ್ ನಟರಾಜು, ಶಹಬಾಜ್,ರಂಗಸ್ವಾಮಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ