ಕುಣಿಗಲ್ : ಕೆರೆ-ಕಟ್ಟೆಗಳಿಗೆ ಹೇಮಾವತಿ ನೀರು ಹರಿಸಲು ಒತ್ತಾಯ

 ಕುಣಿಗಲ್ : 

     ಮಂಗಳ ಹಾಗೂ ಮಾರ್ಕೋನಹಳ್ಳಿ ನಡುವಿನ ಜಲಾಶಯದ ಲಿಂಕ್ ಕೆನಾಲ್ ಯೋಜನೆಯನ್ನು ಮಂಜೂರು ಮಾಡಿ ತಾಲ್ಲೂಕಿನ ಕೆರೆ, ಕಟ್ಟೆಗಳಿಗೆ ಸಮರ್ಪಕವಾಗಿ ಹೇಮಾವತಿ ನೀರನ್ನು ಹರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಒತ್ತಾಯಿಸಿದರು.

       ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರಿಗೆ ನೂರಾರು ರೈತರು ಮೆರವಣಿಗೆ ನಡೆಸಿ ಮಾತನಾಡುತ್ತಾ, ತಾಲೂಕಿನ ಪ್ರಮುಖ ಜೀವನಾಡಿಯಾದ ಮಂಗಳ ಜಲಾಶಯ ಸುಮಾರು 8 ವರ್ಷಗಳಿಂದ ನೀರಿಲ್ಲದೆ ಬರಿದಾಗಿದ್ದು, ಡ್ಯಾಂ ಗೆ ಅಪಾಯ ಸ್ಥಿತಿ ಉಂಟಾಗಿದೆ. ಜಲಾಶಯವನ್ನು ನಂಬಿಕೊಂಡಿದ್ದ ಸಾವಿರಾರು ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ. ಮಾರ್ಕೋನಹಳ್ಳಿ ಜಲಾಶಯದಿಂದ ಪ್ರತಿವರ್ಷ ನೀರು ಪೋಲಾಗುತ್ತಿದೆ ಹೆಚ್ಚಾದ ನೀರನ್ನು ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮೂಲಕ ನೀರು ಹರಿಸಬೇಕು ಮಾಜಿ ಮಂತ್ರಿ ವೈ.ಕೆ.ರಾಮಯ್ಯ ಆಡಳಿತದ ಅವಧಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೂ ಸಹ ಈಗಿನ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಕಾರ್ಯರೂಪಕ್ಕೆ ಬರುವುದಿಲ್ಲ ಈಗಿನ ಶಾಸಕರು ಮಂಗಳ ಮಾರ್ಕೋನಹಳ್ಳಿ ಲಿಂಕ್ ಕೆನಾಲ್ ಮೂಲಕ ನೀರು ಹರಿಸಲು ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೊತ್ತಗೆರೆ, ಗುನ್ನಾಗರೆ, ಹಡೋನಹಳ್ಳಿ, ಕಂಠನಹಳ್ಳಿ, ಮಡಿಕೆಹಳ್ಳಿ, ಬೇಗೂರು, ಕುಣಿಗಲ್ ಕೆರೆ ಸೇರಿದಂತೆ ಹೇಮಾವತಿ ನಾಲೆ ಮಾಲ್ ಸಂಪರ್ಕದಿಂದ ಎಲ್ಲ ಕೆರೆಗಳನ್ನು ತುಂಬಿಸುವುದರ ಜೊತೆಯಲ್ಲಿ ಶಿಂಷಾ ನದಿಯ ಮೂಲಕ ತಮಿಳುನಾಡು ಸೇರುವ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಹುಲಿಯೂರುದುರ್ಗ, ದೀಪಾಂಬುದಿ, ಮುದ್ದು ಲಿಂಗನ ದೊಡ್ಡಿ, ಹಳೆಯೂರು, ಮುತ್ತುರಾಯನ ಕೆರೆ, ಶಿವನಕೆರೆ ಸೇರಿದಂತೆ ಹುತ್ರಿದುರ್ಗ ಎಲ್ಲಾ ಕೆರೆಗಳಿಗೂ ಶಿಂಷಾ ನದಿಯ ಏತ ನೀರಾವರಿ ಕಾಮಗಾರಿ ಕೈಗೊಳ್ಳಬೇಕು ಎಂದರು.

ರಂಗಸ್ವಾಮಿ ಗುಡ್ಡ ಕಾವಲಿನಲ್ಲಿ 1943 ರಲ್ಲಿ 44 ರೈತರಿಗೆ ಜಮೀನು ಮಂಜೂರಾಗಿದ್ದು, ಅರಣ್ಯ ಇಲಾಖೆಯವರು ರೈತರ ಜಮೀನನ್ನು ಕಸಿದುಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲಿ ನಿಲ್ಲಿಸುವಂತೆ ಆಗಬೇಕು. ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ರಸಗೊಬ್ಬರದ ಪೂರೈಕೆ ಆಗಬೇಕು. ಏಜೆನ್ಸಿಯವರು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರೂ, ಕೃಷಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.

      ಕೂಡಲೇ ತಾಲ್ಲೂಕು ಆಡಳಿತ ಹೇಮಾವತಿ ಅಧಿಕಾರಿಗಳು ಕೃಷಿ ಇಲಾಖೆಯವರು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಅನಿಲ್, ಕಾರ್ಯದರ್ಶಿಗಳಾದ ವೆಂಕಟೇಶ್ ಲಕ್ಷ್ಮಣ್ ಮತ್ತಿತರ ರೈತ ಮುಖಂಡರು ಭಾಗವಹಿಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link