ಕುಣಿಗಲ್ : ಕಾಲುಬಾಯಿ ರೋಗಕ್ಕೆ ಹಸುಗಳು ಬಲಿ!

ಕುಣಿಗಲ್ : 

      ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಸೇರಿದಂತೆ ಚಲಮಸಂದ್ರ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಕಾಲುಬಾಯಿ ರೋಗಕ್ಕೆ ಹಸುಗಳು ಸಾವನ್ನಪ್ಪುತ್ತಿರುವುದು ರೈತಾಪಿ ಜನರಲ್ಲಿ ಆತಂಕ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಹಸು ಕರುಗಳಿಗೆ ಕಾಲುಬಾಯಿ ಜ್ವರ ಹರಡುತ್ತಿರುವುದು ಹೆಚ್ಚಾಗಿದ್ದು ಕಳೆದ 1 ವಾರದಿಂದ ಸೋಂಕು ಪ್ರತಿದಿನ ಉಲ್ಬಣಗೊಳ್ಳುತ್ತಿದೆ. ಸರಿಸುಮಾರು ಐದಾರು ಜಾನುವಾರುಗಳು ಮರಣ ಹೊಂದಿದ್ದು ಅಕ್ಕಪಕ್ಕದ ಹಳ್ಳಿಗಳಿಗೂ ಕೂಡ ಸೋಂಕು ಹರಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಕೂಡಲೆ ವ್ಯಾಕ್ಸಿನೇಷನ್ ನ ಅಗತ್ಯವಿದೆ ಸದರಿ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದರೆ ಸಿಬ್ಬಂದಿ ಕೊರತೆಯಿದೆ ಎಂದು ಕೈಚೆಲ್ಲುತ್ತಾರೆ ನಿಡಸಾಲೆ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ಪಶು ವೈದ್ಯಾಧಿಕಾರಿ ಹಾಗೂ ಡಿ ಗ್ರೂಪ್ ನೌಕರರನ್ನು ಹೊರತುಪಡಿಸಿ ಇನ್ಯಾವುದೇ ಸಿಬ್ಬಂದಿ ಗಳಿರುವುದಿಲ್ಲ ಇದರ ಜತೆಗೆ ಉಜ್ಜಿನಿ ಗ್ರಾಮದ ಆಸ್ಪತ್ರೆಗೂ ಇವರೇ ವೈದ್ಯರಾಗಿರುವುದು ತುಂಬಾ ಅನಾನುಕೂಲವಾಗಿದೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪ್ರತಿ ಜಾನುವಾರುಗಳಿಗೆ ವ್ಯಾಕ್ಸಿನೇಷನ್ ನೀಡುವುದರ ಮೂಲಕ ಕಾಲುಬಾಯಿ ರೋಗ ನಿಯಂತ್ರಿಸಿ ಮೂಕ ಪ್ರಾಣಿಗಳ ರೊದನೆ ತಪ್ಪಿಸಿ ನಷ್ಟ ಅನುಭವಿಸುತ್ತಿರುವ ರೈತರ ಹಿತ ಕಾಪಡಬೇಕೆಂದು ಗ್ರಾಮದ ರೈತರು ಅಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link