ಕುಣಿಗಲ್:
ಬಾರಿ ಕುತೂಹಲ ಮೂಡಿಸಿದ್ದ ವಿಧಾನಪರಿಷತ್ ಚುನಾವಣೆಯು ಶುಕ್ರವಾರ ನಡೆಯಿತು. 524 ಮತದಾರರ ಪೈಕಿ ಒಬ್ಬರು ಮಾತ್ರ ಗೈರಾಗಿದ್ದು, ಉಳಿದವರೆಲ್ಲ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಶಾಂತಿಯುತವಾಗಿ ಚಲಾಯಿಸಿದರು.
ಬೆಳಿಗ್ಗೆ 10 ಗಂಟೆಗೆ ಚುನಾವಣೆ ಪ್ರಾರಂಭವಾದರೂ ಮೊದಲು ಮಂದಗತಿಯಲ್ಲಿ ಮತದಾನ ಸಾಗಿ, ಮಧ್ಯಾಹ್ನದ ವೇಳೆಗೆ ಶೇ.70 ರಷ್ಟು ಜನಪ್ರತಿನಿಧಿಗಳು ತಮ್ಮ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ತೆರಳಿ ಮತ ಚಲಾಯಿಸಿದರು.
ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್ಸಿಗರು :
ಮತದಾನದ ವೇಳೆ ಕಾಂಗ್ರೆಸ್ಸಿನ 14 ಮಂದಿ ಪುರಸಭಾ ಸದಸ್ಯರು ಸದಸ್ಯ ರಂಗಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಅರುಣ್‍ಕುಮಾರ್ ಅವರ ನೇತೃತ್ವದಲ್ಲಿ ಒಟ್ಟಾಗಿ ಹೋಗಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಗೈರಾದ ಗ್ರಾಪಂ ಸದಸ್ಯ :
ಶಾಸಕ ಮತ್ತು ಸಂಸದ ಹಾಗೂ ಪುರಸಭೆಯ 5 ಜನ ನಾಮಿನಿ ಸದಸ್ಯರ ಮತಗಳು ಸೇರಿದಂತೆ ಪುರಸಭೆಯ 30 ಜನಪ್ರತಿನಿಧಿಗಳ ಮತಗಳು ಮತ್ತು 36 ಗ್ರಾಪಂ ಸದಸ್ಯರ 494 ಮತಗಳು, ಒಟ್ಟು 524 ಮತಗಳಲ್ಲಿ ಮಹಿಳಾ ಮತದಾರರು 275, 244 ಪುರುಷ ಮತದಾರರು ಇದ್ದು, ಮಡಿಕೆಹಳ್ಳಿ ಗ್ರಾಪಂನ ಗುನ್ನಾಗರೆ ಬ್ಲಾಕ್‍ನ ಸದಸ್ಯ ರಂಗಸ್ವಾಮಿ ಅನಾರೋಗ್ಯದಿಂದ ಮತಗಟ್ಟೆಗೆ ಗೈರು ಹಾಜರಾಗಿದ್ದರು. ಸಂಸದರು ಬೇರೆ ಕ್ಷೇತ್ರದಲ್ಲಿ ಮತ ಹಾಕಿದ್ದು, ಇನ್ನುಳಿದ ಬಹುತೇಕ ಮತದಾರರು ಶಾಂತಿಯುತವಾಗಿ ಮತ ಚಾಲಯಿಸಿದ್ದಾರೆಂದು ತಹಶೀಲ್ದಾರ್ ಮಹಬಲೇಶ್ವರ್ ತಿಳಿಸಿದ್ದಾರೆ.
ತಾಪಂ ಇಒ ಜೋಸೆಫ್ ಮತ್ತು ಕುಣಿಗಲ್, ಅಮೃತೂರು, ಹುಲಿಯೂರುದುರ್ಗ ಪೆÇಲೀಸರು ಮತಗಟ್ಟೆ ಕೇಂದ್ರಗಳಲ್ಲಿ ಮುಂಜಾನೆಯಿಂದಲೆ ಸೂಕ್ತ ಬಂದೋಬಸ್ತ್ ಮಾಡಿ ಚುನಾವಣೆಯ ಯಶಸ್ಸಿಗೆ ಸಹಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ