ಕುಣಿಗಲ್ :

ಮಗನೇ ತನ್ನ ತಾಯಿಯ ತಲೆ ಮೇಲೆ ಕಲ್ಲು ಗುಂಡು ಎತ್ತಿ ಹಾಕುವ ಮೂಲಕ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ತಾಲ್ಲೂಕಿನ ಹುಲಿಯುರುದುರ್ಗ ಹೋಬಳಿ ಸಂತೇಮಾವತ್ತೂರು ಅಂಗರಹಳ್ಳಿ ಗ್ರಾಮದ ವಿರೂಪಾಕ್ಷ (32) ಎಂಬಾತ ತನ್ನ ತಾಯಿ ಜಯಮ್ಮಳ (54) ತಲೆಯ ಮೇಲೆ ಗುಂಡು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.
ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಈ ಕೊಲೆಯ ಕಾರಣ ತಿಳಿದುಬಂದಿಲ್ಲ. ಹಿಂದೆಯು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನಿಗೆ ಶಿಕ್ಷೆ ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಜಗದೀಶ್, ತಾಲ್ಲೂಕು ವೃತ್ತ ನಿರೀಕ್ಷಕ ಗುರುಪ್ರಸಾದ್, ಹುಲಿಯೂರುದುರ್ಗ ಠಿsi ವೆಂಕಟೇಶ್ ಭೇಟಿ ನೀಡಿದ್ಧು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








