ಕುಣಿಗಲ್ :
ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಪಟ್ಟಣದಲ್ಲಿ ಯಾವುದೇ ಸ್ಪಂದನೆ ದೊರಕಿಲ್ಲ ಬಂದ್ ಕುಣಿಗಲ್ ನಲ್ಲಿ ಸಂಪೂರ್ಣ ವಿಫಲಗೊಂಡಿದೆರೈಲು, ಆಟೋ, ಖಾಸಗಿ ಬಸ್, ಸಾರಿಗೆ ಸಂಸ್ಥೆ ಬಸ್ ಗಳು ಎಂದಿನಂತೆ ಸಂಚರಿಸಿದವು
ಪಟ್ಟಣದ ಸಂತೇಮೈದಾನ, ದೊಡ್ಡಪೇಟೆ, ಹುಚ್ಚಮಾಸ್ತಿಗೌಡ ವೃತ್ತ, ಗ್ರಾಮ ದೇವತೆ ವೃತ್ತ ಹಾಗೂ ಮದ್ದೂರು, ತುಮಕೂರು ರಸ್ತೆಯಲ್ಲಿ ವರ್ತಕರು ವಾಣಿಜ್ಯ ಅಂಗಡಿ ಮುಂಗಟ್ಟುಗಳು ತೆರೆದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ, ಮುಂಜಾಗ್ರತ ಕ್ರಮವಾಗಿ ಪೊಲೀಸರು ಬಿಗಿ ಬಂದೂಬಸ್ತ್ ವ್ಯವಸ್ಥೆ ಮಾಡಿದ್ದರು,
ನಾಲ್ಕನೇ ಶನಿವಾರ ಆದ ಕಾರಣ ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳು ಮುಚ್ಚಿದವು,
