ಕುಣಿಗಲ್:
ತಾಲ್ಲೂಕಿನ ಆಲಪ್ಪನ ಗುಡ್ಡೆ ಬಳಿ ಇದ್ದ ಕುಡಿಯುವ ನೀರಿನ ಟ್ಯಾಂಕ್‍ನ್ನು ರಾತ್ರೋರಾತ್ರಿ ಕಿಡಿಗೇಡಿಗಳು ತೆರವುಗೊಳಿಸಿ ಕದ್ದೊಯ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಆಲಪ್ಪನ ಗುಡ್ಡೆಯ ವೃತ್ತಕ್ಕೆ ಬರುವ ಸಾವಿರಾರು ಜನರಿಗೆ ನೀರುಣಿಸುತ್ತಿದ್ದ ಹಾಗೂ ಸುತ್ತಮುತ್ತಲಿನ ಹಲವಾರು ಮಂದಿ ನೀರಿಗಾಗಿ ಆಶ್ರಯಿಸಿದ್ದ ನೀರಿನ ಟ್ಯಾಂಕ್ ಇದ್ದಕ್ಕಿದ್ದ ಹಾಗೆ ಬುಧವಾರ ರಾತ್ರಿ ಕಳವಾಗಿದೆ .
ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಸರಕಾರದ ಆಸ್ತಿಗಳನ್ನು ರಕ್ಷಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಪಂ ಅಧ್ಯಕ್ಷ ಹರೀಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಬಾರದು. ಸರ್ಕಾರದ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಈ ವೃತ್ತದಲ್ಲಿನ ಸಾರ್ವಜನಿಕರ ನೀರಿನ ಸಮಸ್ಯೆಗೆ ಟ್ಯಾಂಕ್ ಇದ್ದ ಜಾಗದಲ್ಲಿ ಪುನಃ ಮತ್ತೊಂದು ನೀರಿನ ಘಟಕವನ್ನು ಪ್ರಾರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
