ಕುಣಿಗಲ್ :

ಐತಿಹಾಸಿಕ ಪ್ರಸಿದ್ಧವಾದ ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಸನ್ನಿಧಿಗೆ ಮೈಸೂರು ಮಹಾರಾಜ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತಂಗಿ ನವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿದ್ಯಾಚೌಡೇಶ್ವರಿ ಮಹಾಸಂಸ್ಥಾನದ ಬಾಲಮಂಜುನಾಥ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದಲ್ಲಿ ಫೆ.21 ಭಾನುವಾರ ಹಮ್ಮಿಕೊಂಡಿರುವ ಮಾತಂಗಿ ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಲು ಆಗಮಿಸುತ್ತಿರುವ ಮೈಸೂರು ಮಹಾರಾಜ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಅನ್ನಪ್ರಸಾದ ನಿಲಯದ ಶಂಕುಸ್ಥಾಪನೆ ಹಾಗೂ ಚಂಡಿ ಹೋಮದ ಪೂರ್ಣಾಹುತಿಯಲ್ಲಿ ಅವರು ಪಾಲ್ಗೊಳ್ಳುವರು. ನಂತರ ಮಹಾರಾಜರಿಗೆ ಶ್ರೀಮಠದ ಸಮಿತಿವತಿಯಿಂದ ಗೌರವಸಮರ್ಪಣೆಯನ್ನು ಸಲ್ಲಿಸಲಾಗುವುದು ಎಂದರು.
ಕಳೆದ ಫೆ.12 ರಿಂದ ಫೆ.23ರವರೆಗೆ ನಿತ್ಯ ಪುರಾಣ ಪ್ರಸಿದ್ದವಾದ ಈ ಕ್ಷೆತ್ರದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡಎಯುತ್ತಿದ್ದು ಇಂತಹ ಹೆಸರಾಂತ ಸನ್ನಿಧಿಗೆ ಬರಬೇಕೆಂದು ಬಯಸಿ ಮಹಾರಾಜರು ಆಗಮಿಸುತ್ತಿದ್ದಾರೆ ಅವರು ಬಂದು ಹೋಗುವವರೆಗೆ ಸಂಪೂರ್ಣ ಸುಸಜ್ಜಿತವಾದ ವಾತಾವರಣದೊಂದಿಗೆ ವಿಶೇಷ ರೀತಿಯಲ್ಲಿ ಗೌರವ ಸಮರ್ಪಣ ಕಾರ್ಯವನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








