ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಚಿನ್ನೇನಹಳ್ಳಿ ಗ್ರಾ.ಪಂ.ಗೆ ಸೇರಿದ ವೀರಚಿನ್ನೇನಹಳ್ಳಿ ಗ್ರಾಮದ ರಂಗಧಾಮಪ್ಪ (55) ಬಿನ್ ರಂಗದಾಸಪ್ಪ ಎನ್ನುವ ವ್ಯಕ್ತಿ ತನ್ನ ಸಂಸಾರದ ನಿರ್ವಹಣೆಗಾಗಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಅದೇ ರೀತಿಯಲ್ಲಿ ಫೆ.20 ರಂದು ಕತ್ತಿರಾಜನಹಳ್ಳಿ ಗ್ರಾಮದ ಬಸಣ್ಣ ಬಿನ್ ಶ್ರೀರಂಗಪ್ಪ ಎನ್ನುವವರಿಗೆ ಸೇರಿದ ಹುಣಸೆ ಮರದಲ್ಲಿನ ಹುಣಸೆ ಹಣ್ಣು ಕಿತ್ತು ಕೊಡಲು ಹೋಗಿದ್ದು
ಹಣಸೆ ಹಣ್ಣನ್ನು ಮರದಲ್ಲಿ ಕೀಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಕ್ಕೆ ಇದೇದಿನ ಸಮಯ 1-00 ಗಂಟೆಯ ವೇಳೆಯಲ್ಲಿ ಕೆಳಗಡೆ ಬಿದ್ದಿದ್ದು ಬಲವಾದ ಪೆಟ್ಟು ಬಿದ್ದಿದ್ದ ವ್ಯಕ್ತಿಯನ್ನು ಗ್ರಾಮಸ್ಥರ ಸಹಕಾರದಿಂದ ಮಧುಗಿರಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗೆ ಚಿಕಿತ್ಸೆ ಫಲಕಾರಿಯಾದೆಯೆ ಇದೇ ದಿನ ರಾತ್ರಿ 9-30 ರ ಸಮಯದಲ್ಲಿ ಅಸುನೀಗಿರುವ ಬಗ್ಗೆ ವರದಿಯಾಗಿದ್ದು.
ಸಾವಿಗೀಡಾದ ವ್ಯಕ್ತಿಯ ಪುತ್ರ ನವೀನ್‌ಕುಮಾರ್ ಫೆ.21 ರಂದು ಬೆಳಿಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿರುತ್ತಾರೆ. ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಮೃತರ ಮರಣೋತ್ತರ ಪರೀಕ್ಷೆ ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರಿಂದ ನೆರವೇರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ