ಲಡ್ಡು ಪ್ರಸಾದ ಬಗ್ಗೆ ಭಯ ಪಡಬೇಡಿ : ಟಿಟಿಡಿ

ವಿಜಯವಾಡ:

   ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಸಿದ್ಧ ‘ಲಡ್ಡು ಪ್ರಸಾದ’ದಲ್ಲಿ ಬಳಸುವ ತುಪ್ಪದ ಗುಣಮಟ್ಟದ ಬಗ್ಗೆ ಭಕ್ತರಲ್ಲಿ ಆತಂಕ ಉಂಟಾಗಿರುವುದರ ಮಧ್ಯೆ, ತಿರುಮಲ ತಿರುಪತಿ ದೇವಸ್ಥಾನ  ಪವಿತ್ರ ಸಿಹಿತಿಂಡಿಯ ಪಾವಿತ್ರ್ಯತೆಯನ್ನು ಕಾಪಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

   ತಿರುಮಲ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟಿಟಿಡಿ ನಿನ್ನೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಶ್ರೀವಾರಿ ಲಡ್ಡುವಿನ ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ ಎಂದು ಹೇಳಿದೆ.’ಶ್ರೀವಾರಿ ಲಡ್ಡುವಿನ ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ. ಎಲ್ಲಾ ಭಕ್ತರಿಗೆ ತೃಪ್ತಿಯಾಗುವಂತೆ ಲಡ್ಡು ಪ್ರಸಾದದ ಪವಿತ್ರತೆಯನ್ನು ರಕ್ಷಿಸಲು ಟಿಟಿಡಿ ಬದ್ಧವಾಗಿದೆ ಎಂದು ದೇವಾಲಯದ ಮಂಡಳಿಯು ಪೋಸ್ಟ್‌ನಲ್ಲಿ ತಿಳಿಸಿದೆ.

   ಎರಡು ದಿನಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು, ತಿರುಪತಿ ಲಡ್ಡಿನ ಗುಣಮಟ್ಟಕ್ಕಾಗಿ ಪರೀಕ್ಷಿಸಲಾದ ಮಾದರಿಗಳಲ್ಲಿ ಕಳಪೆ ಗುಣಮಟ್ಟದ ತುಪ್ಪ ಮತ್ತು ಪ್ರಾಣಿಗಳ ಕೊಬ್ಬಿನ ಅಂಶ ಕಂಡುಬಂದಿದೆ ಎಂದು ಹೇಳಿಕೆ ನೀಡಿದ್ದು ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು.ಈ ವಿಚಾರದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ನಿನ್ೆ ಮಾಜಿ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಇದನ್ನು ‘ದಿವರ್ಷನ್ ಪಾಲಿಟಿಕ್ಸ್’ ಎಂದು ಬಣ್ಣಿಸಿ ಇದೊಂದು ಕಟ್ಟು ಕಥೆ ಎಂದು ಹೇಳಿದರು.

  ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಸರ್ಕಾರದಿಂದ ಈ ವಿಷಯದ ಬಗ್ಗೆ ವರದಿಯನ್ನು ಕೇಳಿದ್ದು, ಪರಿಶೀಲಿಸಿದ ನಂತರ ಸೂಕ್ತ ಕ್ರಮದ ಭರವಸೆ ನೀಡಿದೆ.

Recent Articles

spot_img

Related Stories

Share via
Copy link
Powered by Social Snap