ಯಲಚೀಹಳ್ಳಿ ಗ್ರಾಮದ ಕೆರೆl

ಗುಬ್ಬಿ:

ಸುದ್ದಿ ನಮ್ಮ ಜಿಲ್ಲೆಗೆ ಹೆಮೆಯ ಹಂಚಿಕೆ ನಿಯಮಾನುಸಾರವಾಗಿದೆ ಮಂಡ್ಯ ಜಿಲ್ಲೆಗಳಿಗೂ ಹೇಮೆ ಹಂಚಿಕೆ ನಿಯಮಾನುಸಾರ ಮಾಡಲಾಗಿದೆ. ಅಡಳಿತ ವ್ಯವಸ್ಥೆ ಸರಿಪಡಿಸಿದ್ದ ಕಾರಣ ಎಲ್ಲಿಯೂ ಗೊಂದಲ ಕಾಣ ಸಲಿಲ್ಲ. ಈ ಮೊದಲು ವ್ಯವಸ್ಥೆ ಮಾಡಬಹುದಿತ್ತು. ಆದರೆ ಹಾಸನ ಮುಖಂಡರಿಗೆ ಮನಸ್ಸಿರಿಲಿಲ್ಲವಷ್ಟೇ ಎಂದು ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಕುಟುಕಿದರು.

 

ತಾಲ್ಲೂಕಿನ ಕಡಬ ಹೋಬಳಿ ಯಲಚೀಹಳ್ಳಿ ಗ್ರಾಮದ ಕೆರೆ ಹೇಮಾವತಿ ನೀರಿನಿಂದ ತುಂಬಿ ಹರಿದ ಕಾರಣ ಕೆರೆಗೆ ನೆರವೇರಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ 71 ತಾಲ್ಲೂಕು ಮರಳುಗಾಡು ಪ್ರದೇಶವಾಗಲಿದೆ ಎಂಬ ವರದಿ ಇದೆ. 1200 ಅಡಿಗಳಿಗಿಂತ ಆಳದಲ್ಲಿ ಅಂತರ್ಜಲ ಹುಡುಕುವಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿ ಅರಿತು ನದಿ ನೀರು ಫಲಾಗದಂತೆ ರೈತರು ಬಳಸಿಕೊಳ್ಳಬೇಕು ಎಂದರು.

ಶಾಸಕರಾದಿ ಹಲವು ಮುಖಂಡರು ಪಕ್ಷ ಬಿಡುವ ಬಗ್ಗೆ ಜನರಿಂದಲೇ ತಿಳಿಯುತ್ತಿದೆ. ಯಾರು ಯಾವ ಪಕ್ಷ ಬಿಡುವರು ಹಾಗೂ ಸೇರುವರು ಎಂಬ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಈ ಮಧ್ಯೆ ಗಟ್ಟಿ ನೆಲೆಯುಳ್ಳ ಬಿಜೆಪಿ ಪಕ್ಷದಲ್ಲಿ ದೂರ ಹೋಗುವವರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಹೊಸಬರನ್ನು ತಂದು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ ಎಂದು ಬಿಜೆಪಿ ತೊರೆಯುವವರಿಗೆ ಪರೋಕ್ಷ ಟಾಂಗ್ ನೀಡಿದ ಅವರು ಕಡಬ ಮತ್ತು ಸಿ.ಎಸ್.ಪುರ ಕೆರೆಗೆ ನೇರ ನೀರು ಹರಿಸುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಪ್ರಮುಖ ಕೆರೆಗಳು ಬಹು ನಿರೀಕ್ಷೆಯಲ್ಲಿದೆ. ಜೊತೆಗೆ ತಾಲ್ಲೂಕಿನ ಬಿಕ್ಕೇಗುಡ್ಡ ಮತ್ತು ಹಾಗಲವಾಡಿ ಕೆರೆಗೆ ಹೇಮೆ ಹರಿಸುವ ಯೋಜನೆಯಲ್ಲಿ ಕಂಡ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಭೂಮಿ ಬಿಟ್ಟುಕೊಡಲು ರೈತರ ಮನವೊಲಿಸಲಾಗಿ ಬಿಕ್ಕೇಗುಡ್ಡ ಯೋಜನೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಹಾಗಲವಾಡಿ ಕೆರೆಗೆ ನೀರು ಹರಿಸಲು ವಿಶೇಷ ಮೇಲ್ಗಾಲುವೆ ನಿರ್ಮಾಣಕ್ಕೂ ಸಮ್ಮತಿ ದೊರೆಕಲಿದೆ. ಬೆಳೆ ಪರಿಹಾರ ಸೇರಿದಂತೆ ಇನ್ನಿತರ ವಿಷಯದೊಂದಿಗೆ ಸರ್ಕಾರದ ಮುಂದಿಡಲಾಗಿದೆ ಎಂದ ಅವರು ಮಂಚಲದೊರೆ ಭಾಗದ ಕೆರೆಗೆ ನೀರು ಹರಿಸುವ ಯೋಜನೆ ಕಷ್ಟವಾಗುತ್ತಿದೆ. ಎರಡು ಬಾರಿ ವಾಪಸ್ ಆಗಿರುವ ಈ ಯೋಜನೆಗೂ ಸೂಕ್ತ ಪರಿಹಾರ ಕಂಡು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಆರತಿ, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್‍ಕುಮಾರ್, ಪಾರ್ಥಸಾರಥಿ, ಸಾಗರನಹಳ್ಳಿ ನಂಜೇಗೌಡ, ಶಿರಾ ಡಿವೈಎಸ್ಪಿ ಕುಮಾರಪ್ಪ, ರೈತಸಂಘದ ಗುರುಚನ್ನಬಸಪ್ಪ, ಗ್ರಾಪಂ ಸದಸ್ಯ ನಂದೀಶ್, ಸದಾಶಿವಯ್ಯ ಇತರರು ಇದ್ದರು.

ಅ.07  ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಯಲಚೀಹಳ್ಳಿ ಗ್ರಾಮದ ಕೆರೆ ಹೇಮಾವತಿ ನೀರಿನಿಂದ ತುಂಬಿ ಹರಿದ ಕಾರಣ ಗಂಗಾಪೂಜೆ ನೆರವೇರಿಸಿದ ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap