ಲಕ್ಷ್ಮಿ ಹೆಬ್ಬಾಳಕರ್‌ ಗೆ ಎರಡೆರಡು ಸಿಹಿ ಸುದ್ದಿ…!

ಬೆಳಗಾವಿ: 

       ಇಂದು ನೂತನ ಸರ್ಕಾರದ ರಚನೆ ಸಂಭ್ರಮ ಒಂದೆಡೆಯಾದರೆ ಇನ್ನೊಂದೆಡೆ ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದ ಖುಷಿಯಲ್ಲಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಪಾಲಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ ಅವರ ಮನೆಗೆ ಮೊಮ್ಮಗಳ ಆಗಮನವಾಗಿದೆ ಶುಕ್ರವಾರ ಬಂದಿರುವ ಈ ವಾರ್ತೆಯಿಂದ ಅವರ ಮನೆಗೆ ಮಹಾಲಕ್ಷ್ಮಿ ಅಗಮವಾಗಿದೆ ಎಂಬ ಭಾವನೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಇದಾರೆ ಎನ್ನಲಾಗಿದೆ.

     ಇದೇ ಮೊದಲ ಬಾರಿಗೆ ಸಚಿವರಾಗಿರುವ ಸಂತಸದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಶುಕ್ರವಾರ ರಾತ್ರಿ ಸಂತಸದ ಸುದ್ದಿ ಬಂದಿದ್ದು, ಮಗ ಮೃಣಾಲ್ ಹೆಬ್ಬಾಳಕರಗೆ ಮಗಳು ಜನಿಸಿದ್ದಾಳೆ.

      ಮಗ ಮೃಣಾಲ ಹೆಬ್ಬಾಳಕರ ಹಾಗೂ ಸೊಸೆ ಡಾ. ಹೀತಾ ಹೆಬ್ಬಾಳಕರ ದಂಪತಿಗೆ ಶುಕ್ರವಾರ ರಾತ್ರಿ ಮಗಳು ಜನಿಸಿದ್ದಾಳೆ. ಬೆಂಗಳೂರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಡಬಲ್ ಧಮಾಕ ಒದಗಿ ಬಂದಿದೆ. ಇತ್ತ ಅಜ್ಜಿ ಆಗಿರುವ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ಸಚಿವರಾಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಮತ್ತೊಂದು ಖುಷಿ ಸಿಕ್ಕಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap