ಕಾಸ್ಟಿಂಗ್‌ ಕೌಚ್‌ : ಸ್ಪೋಟಕ ಹೇಳಿಕೆ ನೀಡಿದ ಲಕ್ಷ್ಮೀ ರೈ ….!

ಬೆಂಗಳೂರು:

      ನಟಿ ಲಕ್ಷ್ಮೀ ರೈ ಅವರು ಮೂಲತಃ ಕನ್ನಡದವರು. ಹುಟ್ಟಿದ್ದು ಬೆಳಗಾವಿಯಲ್ಲಿ ಹೀಗಾಗಿ ಇವರನ್ನು ಕುಂದಾನಗರಿ ಸುಂದರಿ ಎಂದು ಕರೆಯಲಾಗುತ್ತದೆ. ಪರಭಾಷೆಗಳಲ್ಲಿ ಮಿಂಚಿರುವ ಲಕ್ಷ್ಮೀ ರೈ, ಕಾಸ್ಟಿಂಗ್​ ಕೌಚ್​   ಬಗ್ಗೆ ಆಡಿರುವ ಮಾತುಗಳು ಇದೀಗ ಭಾರಿ ವೈರಲ್​ ಆಗಿದೆ.

     ಕಾಸ್ಟಿಂಗ್ ಕೌಚ್‌ಗೆ ಬಹಳ ಚರ್ಚೆಯಾಗಿತ್ತು. ಈ ವೇಳೆ ನಾವೆಲ್ಲರೂ ನಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯವು ಒಂದೇ ಆಗಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆಲ್ಲರಿಗೂ ವಿಭಿನ್ನ ಅನುಭವಗಳಿದ್ದು, ನಾನು ಅದರ ಬಗ್ಗೆ ಹೇಳುವುದಿಲ್ಲ. ಆದರೆ, ನನ್ನ ವಿಷಯಕ್ಕೆ ಬಂದಾಗ ನಾನು ಅದನ್ನು ಎಂದಿಗೂ ಅನುಭವಿಸಲಿಲ್ಲ ಎಂದಿದ್ದಾರೆ.

   ನನಗೆ ತಂದೆಯಂತಿದ್ದ ಆರ್‌.ವಿ. ಉದಯಕುಮಾರ್ ಸರ್ ಅವರಿಂದ ನನಗೆ ಮೊದಲ ಸಿನಿಮಾ ಸಿಕ್ಕಿತು. ಆದರೆ, ಇತರರ ಹೋರಾಟಕ್ಕೆ ಹೋಲಿಸಿದರೆ ನನ್ನ ಹೋರಾಟಗಳು ಸಿನಿಮಾ ರಂಗದಲ್ಲಿ ವಿಭಿನ್ನವಾಗಿವೆ. ಅಷ್ಟಕ್ಕೂ ಕಾಸ್ಟಿಂಗ್ ಕೌಚ್ ಅಂದರೆ, ಯಾರೂ ಇಲ್ಲಿ ನಿಮ್ಮನ್ನು ಬಲವಂತಪಡಿಸುತ್ತಿಲ್ಲ. ಇದು ನಿಜವಾಗಿಯೂ ಪರಸ್ಪರ ಒಪ್ಪಿಗೆಯ ವಿಷಯವಾಗಿದೆ ಎಂದು ಲಕ್ಷ್ಮೀ ರೈ ಹೇಳಿದ್ದಾರೆ.

   ಕಾಸ್ಟಿಂಗ್​ ಕೌಚ್​ ಎಂಬುದು ಸಂಪೂರ್ಣ ಟಿಆರ್​ಪಿ ವಿಷಯವಾಗಿದೆ. ಮಾಧ್ಯಮದವರು ಸಿನಿ ಉದ್ಯಮವನ್ನು ತುಂಬಾ ಕೆಟ್ಟದಾಗಿ ಬಿಂಬಿಸುತ್ತಾರೆ. ಆದರೆ, ಸಿನಿ ಉದ್ಯಮವು ಸುಂದರವಾಗಿದೆ. ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನು ದೂಷಿಸುತ್ತಾರೆ. ಆದರೆ, ಕಲಾವಿದರಾದ ನಮಗೆ ಈ ಇಂಡಸ್ಟ್ರಿಯಲ್ಲಿ ತುಂಬಾ ಅನುಕೂಲವಿದೆ. ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು. ಆದರೆ, ಹೆಚ್ಚಾಗಿ ಜನರು ನಕಾರಾತ್ಮಕ ವಿಷಯಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದಾರೆ ಎಂದು ಮೈಲ್‌ಸ್ಟೋನ್ ಮೇಕರ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಲಕ್ಷ್ಮೀ ರೈ ತಿಳಿಸಿದರು.

   ಅಂದಹಾಗೆ ಲಕ್ಷ್ಮೀ ರೈ ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ಅವಕಾಶಕ್ಕಾಗಿ ಒದ್ದಾಡುತ್ತಿರುವ ಹೊಸಬರನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಬಳಸಿಕೊಳ್ಳುತ್ತಾರೆ ಎಂದು ನಟಿ ಹೇಳಿದ್ದರು. ಅಲ್ಲದೆ, ನಟನಾಗುವುದು ಅಥವಾ ಈ ಕ್ಷೇತ್ರದಲ್ಲಿ ಉಳಿಯುವುದು ಅಷ್ಟು ಸುಲಭವಲ್ಲ. ನೀವು ನಿಮ್ಮದೇ ಗುರುತು ಮೂಡಿಸಲು ಬಯಸಿದರೆ ಎಲ್ಲ ಸವಾಲುಗಳು ಎದುರಿಸಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap