ಮುಂಡಗೋಡ:
ಸಾಲ ತೀರಿಸಲು ಸಹಾಯ ಮಾಡುವುದಾಗಿ ಹೇಳಿ 21 ಲಕ್ಷ ರೂ ನೀಡಿ ಕೊನೆಗೆ ಇಡೀ ಆಸ್ತಿಯನ್ನೇ ಕಬಳಿಸಿರುವ ಪ್ರಕರಣವೊಂದು ಮುಂಡಗೋಡದಿಂದ ವರದಿಯಾಗಿದೆ. 21 ಲಕ್ಷರೂ ನೀಡಿ ಸಂಚಕಾರ ಪತ್ರ ಮಾಡಿಕೊಂಡು ಜಮೀನನ್ನು NA ಮಾಡಿಸಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಎಂದು ನಂಬಿಸಿ ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತ ತನ್ನ ಸಹಚರರೊಂದಿಗೆ ಮುಂಡಗೋಡ ತಾಲೂಕು ಹಳ್ಳೂರ ಓಣಿ ನಿವಾಸಿ ರಾಜೇಶ ಚಿದಾನಂದ ಹುಲಿಯಪ್ಪನವರ ಹಾಗೂ ಈತನ ತಮ್ಮನನ್ನು ಅಪಹರಣ ಮಾಡಿಕೊಂಡು ಹೋಗಿ ಮುಂಡಗೋಡ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ, ಬಲವಂತವಾಗಿ ಸರ್ವೇ ನಂಬರ್ 73/1 ಕ್ಷೇತ್ರ 02-33- 00 ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆಂದು ಪೊಲೀಸ್ ದೂರು ನೀಡಲಾಗಿದೆ.
ಅಲ್ಲದೆ ಗೋವಾ,ಹುಬ್ಬಳ್ಳಿ,ಬಾಂಬೆ,ದೆಹಲಿ,ದಾಂಡೇಲಿ ಹೀಗೆ ಬಲವಂತವಾಗಿ ಹಿಡಿದಿಟ್ಟುಕೊಂಡು ಎಲ್ಲಾ ಕಡೆ ಸುತ್ತಾಡಿಸಿ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವ ಬಗ್ಗೆ ದೂರಲಾಗಿದೆ. ಜಮೀರ ಅಹಮದ್ ದರ್ಗಾವಾಲೆ, ತೋಪಿನ್, ಸಾಧಿಕ್ ಚಾವುಸ್,ಶಾನವಾಜ್, ಜಾಫರ್ ಕಾರ್ಪೆಂಟರ್,ಯೂಸುಫ್ ಗಡವಾಲೆ ಆರೋಪಿಗಳಾಗಿದ್ದಾರೆ.ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಜೀರೋ FIR ದಾಖಲಾಗಿದ್ದು, ಪ್ರಕರಣವನ್ನು ಮುಂಡಗೋಡಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
