ನವದೆಹಲಿ:
ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಅವರಿಗೆ ಮೊಬೈಲ್ ಫೋನ್ ಮೂಲಕ ಕೊಲೆ ಬೆದರಿಕೆಗಳು ಬಂದಿವೆ. ಶುಕ್ರವಾರ ರಾತ್ರಿ ಬೆದರಿಕೆಯ ಬಗ್ಗೆ ಮುಂಬೈ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಪ್ರಸ್ತುತ ಪಂಜಾಬ್ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಪರವಾಗಿ ಬೆದರಿಕೆ ಕರೆ ಮತ್ತು ಸಂದೇಶಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
“ನನಗೆ ನನ್ನ ಫೋನ್‌ನಲ್ಲಿ ಬೆದರಿಕೆ ಬಂದಿತು ಮತ್ತು ನಾನು ಅದರ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇನೆ. ಆದರೆ ಈ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು, ಆದರೆ ರಾಜ್ಯದ ಗೃಹ ಸಚಿವರು ಇದನ್ನು ಸ್ಟಂಟ್ ಎಂದು ಕರೆದರು ಎಂದು ಆರೋಪಿಸಿದ್ದಾರೆ.
ಸಂಜಯ್ ರಾವತ್ ಹೇಳುವ ಪ್ರಕಾರ ತಮಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಾಗ ಸರ್ಕಾರ ನನಗೆ ಯಾವುದೇ ಪತ್ರವನ್ನಾಗಲಿ ಅಥವಾ ಮೌಕಿಕವಾಗಿಯಾಗಲಿ ತಿಳಿಸಿರಲಿಲ್ಲ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ