ನವದೆಹಲಿ:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಕಂಪನಿಯ ನಾಯಕತ್ವದಲ್ಲಿ ಬದಲಾವಣೆಗಳು ಆಗುವ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನೂ ಸೇರಿದಂತೆ ಕಂಪನಿಯ ಹಿರಿಯರು ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ.
‘ರಿಲಯನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ’ ಎಂದು ಹೇಳಿದ್ದಾರೆ. ಆಕಾಶ್ ಮತ್ತು ಅನಂತ್ ಅವರು ಅಂಬಾನಿ ಅವರ ಪುತ್ರರು, ಇಶಾ ಅವರು ಅಂಬಾನಿ ಅವರ ಪುತ್ರಿ’.
ನನ್ನನ್ನೂ ಸೇರಿದಂತೆ ಎಲ್ಲ ಹಿರಿಯರು ಹೆಚ್ಚು ಸ್ಪರ್ಧಾತ್ಮಕ ಆಗಿರುವ, ಬಹಳ ಬದ್ಧತೆಯನ್ನು ಹೊಂದಿರುವ ಮತ್ತು ವಿಶ್ವಾಸ ಮೂಡಿಸುವಂತಹ ಯುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ನಾವು ಅವರಿಗೆ ಮಾರ್ಗದರ್ಶನ ನೀಡಬೇಕು.
ಪ್ರೋತ್ಸಾಹ ನೀಡಬೇಕು ಮತ್ತು ಅವರನ್ನು ಸಶಕ್ತರನ್ನಾಗಿಸಬೇಕು. ಅವರು ನಮಗಿಂತ ಚೆನ್ನಾಗಿ ಕೆಲಸ ಮಾಡಿದಾಗ ಬೆನ್ನುತಟ್ಟಬೇಕು’ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ