ಬೆಂಗಳೂರು :
ನಮ್ಮ ಕೈ ರೇಖೆಗಳ ನೋಡಿ ನಮ್ಮ ಗುಣ, ಭವಿಷ್ಯ ಹೇಳುವುದು ರೂಢಿಯಲ್ಲಿದೆ. ಕೈ ರೇಖೆಗಳು ನಮ್ಮ ಮುಂದಿನ ಜೀವನದ ಕೈಗನ್ನಡಿ ಎನ್ನಲಾಗುತ್ತದೆ. ಇದರ ಜೊತೆ ಕೈ ಬೆರಳ ಗಾತ್ರ ಸಹ ನಮ್ಮ ವ್ಯಕ್ತಿತ್ವ, ಗುಣ ಹೇಳುತ್ತವೆ.ಅದರದಂತೆ ನಮ್ಮ ಕಾಲಿನ ಬೆರಳಿನ ಗಾತ್ರವೂ ಸಹ ನಮ್ಮ ವ್ಯಕ್ತಿತ್ವ, ಗುಣ ಹೇಳುತ್ತವೆ.
ಒದೊಂದು ಬೆರಳಿನ ಗಾತ್ರವು ಸಹ ಒಂದೊಂದು ರೀತಿಯ ಗುಣಗಳ ಪ್ರತೀಕವಾಗಿವೆ. ನಮ್ಮ ಕಾಲಿನ ಬೆರಳಿನ ಆಕೃತಿಯನ್ನೂ ನೋಡಿ ನಿಮ್ಮ ಗುಣಗಳನ್ನು ಲೆಕ್ಕಹಾಕಬಹುದು. ಜಾತಕ, ಹಸ್ತಸಾಮುದ್ರಿಕ ದಂತಹ ಪದ್ಧತಿಯಿಂದ ನಮ್ಮ ವ್ಯಕ್ತಿತ್ವದ ಬಗ್ಗೆ ಹಲವು ರಹಸ್ಯಗಳನ್ನು ಹೇಳಬಹುದು.
ವ್ಯಕ್ತಿತ್ವ ಪರೀಕ್ಷೆಗಳು ನಿಮ್ಮ ಬಗ್ಗೆ, ನಿಮ್ಮ ಇಷ್ಟಗಳು ಅಥವಾ ನಿಮ್ಮ ಜೀವನ, ಆದ್ಯತೆಗಳು, ನಿಮ್ಮ ಭಾವನಾತ್ಮಕ ಜೀವನ, ದಾಂಪತ್ಯ, ಕೌಟುಂಬಿಕ ಸಂಬಂಧ ಸೇರಿದಂತೆ ಹಲವು ವಿಚಾರಗಳ ಆಗರವಾಗಿರುತ್ತದೆ. ಈ ಎಲ್ಲಾ ನಿಮ್ಮ ವ್ಯಕ್ತಿತ್ವ ನೀವು ತಿಳಿಯಬೇಕಾದರೆ ಇದೊಂದು ಸಾಧನವಾಗಿದೆ.
ಹಾಗಾದರೆ ನಾವಿಂದು ನಿಮ್ಮ ಕಾಲಿನ ಬೆರಳುಗಳ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರಬಹುದು ಎಂಬುದನ್ನು ಅಂದಾಜಿಸೋಣ. ಅಲ್ಲದೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಎಷ್ಟು ಹೊಂದಿಕೆಯಾಗುತ್ತಿದೆ ಎಂಬುದನ್ನು ನೀವು ಊಹಿಸಿ. ಜೊತೆಗೆ ಒಂದಿಷ್ಟು ಭವಿಷ್ಯದ ಕುರಿತಂತೆಯೂ ತಿಳಿದುಕೊಳ್ಳಿ.
ಈಜಿಪ್ಟಿಯನ್ ಕಾಲ್ಬೆರಳ ವ್ಯಕ್ತಿತ್ವ
ಈಜಿಪ್ಟಿಯನ್ ಕಾಲ್ಬೆರಳಿನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ಕಾಲಿನ ಬೆರಳುಗಳು ಇಳಿಕಾ ಕ್ರಮದಲ್ಲಿರುತ್ತವೆ. ಅಂದರೆ ಕಾಳಿನ ಹೆಬ್ಬಳು ಉದ್ದವಾಗಿ ಉಳಿದಂತೆ ಬೇರೆಲ್ಲಾ ಬೆರಳುಗಳು ಅದಕ್ಕಿಂತ ಚಿಕ್ಕದಾಗಿ ಇಳಿಕಾ ಕ್ರಮದಲ್ಲಿ ಸರಿಯಾಗಿ ಜೋಡಿಸಿರುವಂತೆ ಇರುತ್ತವೆ. ಈ ರೀತಿಯ ಬೆರಳಿನ ರಚನೆ ಹೊಂದಿರುವ ಜನ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಸಿಗುತ್ತಾರೆ.
ಈ ರೀತಿ ಬೆರಳಿನ ರಚನೆ ಹೊಂದಿರುವವರು ಅತ್ಯಂತ ಸೃಜನಶೀಲ, ಕೇಂದ್ರೀಕೃತ ಮತ್ತು ಹೊಸತನವನ್ನು ಹೊಂದಿರುವ ವ್ಯಕ್ತಿತ್ವ ಅವರದ್ದಾಗಿರುತ್ತದೆ. ಅವರಿಗೆ ನಿತ್ಯ ಎದುರಿಸುವ ಸಮಸ್ಯೆಗಳಿಗೆ ಧೈರ್ಯವಾಗಿ ಹಾಗೂ ಅತ್ಯಂತ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ, ಯಾವ ಸಮಸ್ಯೆಯನ್ನೂ ದೊಡ್ಡದು ಎಂದುಕೊಳ್ಳುವುದಿಲ್ಲ. ಮೇಲ್ನೋಟಕ್ಕೆ ಅವರು ಸರಳ ಮತ್ತು ನಿರಾಸಕ್ತಿ ತೋರುವ ವ್ಯಕ್ತಿಗಳಂತೆ ಕಾಣುತ್ತಾರಾದರು ಅವರು ಎಲ್ಲವನ್ನು ಸುಲಭ ಮಾರ್ಗದಲ್ಲಿ ಬಗೆಹರಿಸುವ ದಾರಿ ಕಂಡು ಕೊಳ್ಳುತ್ತಾರೆ.
ಗ್ರೀಕ್ ಕಾಲ್ಬೆರಳ ವ್ಯಕ್ತಿತ್ವ
ವಿಶ್ವದ ಬಹುಪಾಲು ಮಂದಿ ಈ ರೀತಿ ಗ್ರೀಕ್ ಕಾಲ್ಬೆರಳ ವ್ಯಕ್ತಿತ್ವ ಹೊಂದಿರುತ್ತಾರೆ. ಅಂದರೆ ನಿಮ್ಮ ಕಾಲಿನ ಹೆಬ್ಬರಳಿಗಿಂತ ಎರಡನೇ ಬೆರಳು ಸ್ವಲ್ಪ ದೊಡ್ಡದಾಗಿರುತ್ತದೆ. ಉಳಿದ ಬೆರಳುಗಳು ಚಿಕ್ಕದಾಗಿರುತ್ತದೆ. ಇವರು ಅತ್ಯಂತ ಬುದ್ಧಿವಂತರಾಗಿಯೂ, ದಾಂಪತ್ಯದಲ್ಲಿ ಖುಷಿ, ಕುಟುಂಬದ ಪ್ರಮುಖ ಜವಾಬ್ದಾರಿಗಳ ಹೊಂದಿರುತ್ತಾರೆ. ಇವರು ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಮುಂದಿರುತ್ತಾರೆ.
ಷೇರು ಮಾರುಕಟ್ಟೆ, ಹಣಕಾಸು ವ್ಯಹವಾರ ಸೇರಿ ಎಲ್ಲಾ ವ್ಯಹಹಾರದಲ್ಲಿ ಅವರು ಮುಂದಿರುತ್ತಾರೆ. ಜೊತೆಗೆ ಪ್ರೇಮ ಜೀವನ ಸಹ ಅವರು ಅಂದುಕೊಂಡಂತೆ ಸಾಗುತ್ತದೆ. ಅವರಲ್ಲಿ ಅಚಲವಾದ ಶಕ್ತಿ, ನಂಬಿಕೆ ಹಾಗೂ ಪ್ರಾಮಾಣಿಕತೆ ನೋಡಬಹುದಂತೆ. ಅವರು ಬೇರೆಯವರ ಆಲೋಚನೆಗಿಂತ ಭಿನ್ನ ಆಲೋಚನೆಯನ್ನು ಹೊಂದಿರುತ್ತಾರೆ. ಒಂದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಆಲೋಚಿಸುತ್ತಾರೆ.
ರೋಮನ್ ಲಾಬ್ಬೆರಳ ವ್ಯಕ್ತಿತ್ವ
ಈ ರೋಮನ್ ಶೈಲಿಯ ಕಾಲಿನ ಬೆರಳಿನ ರಚನೆ ಹೊಂದಿರುವವರು ಸಹ ಬಹಳಷ್ಟು ಸಂಖ್ಯೆಯಲ್ಲಿ ನಾವು ನೋಡಬಹುದು. ಅವರು ವಿಶೇಷವಾಗಿ ಕಾಲಿನ ಮೊದಲ ಮೂರು ಬೆರಳುಗಳು ಒಂದೇ ಉದ್ದವನ್ನು ಹೊಂದಿದ್ದು, ಉಳಿದ ಎರಡು ಬೆರಳುಗಳು ಚಿಕ್ಕದಾಗಿರುತ್ತವೆ. ಹೆಚ್ಚಿನವರಲ್ಲಿ ಮೊದಲ ಎರಡು ಬೆರಳು ಒಂದೇ ಗಾತ್ರ ಹೊಂದಿರುವುದನ್ನು ಸಹ ನಾವು ನೋಡಬಹುದು.
ಇವರಲ್ಲಿ ಮನೆ, ಕುಟುಂಬ, ದಾಂಪತ್ಯ ಸಂಬಂಧ ಅತ್ಯಂತ ಗಟ್ಟಿಯಾಗಿರುತ್ತದೆ. ದೊಡ್ಡ ದೊಡ್ಡ ಜವಾಬ್ದಾರಿಗಳ ಹೊರುವವರಾಗಿರುತ್ತದೆ. ತುಂಬಾನೆ ಧೈರ್ಯಶಾಲಿಗಳು, ಅವರು ಅಂದುಕೊಂಡಿರುವ ಕೆಲಸ ಸಂಪೂರ್ಣ ಆಗುವವರೆಗೂ ವಿಶ್ರಾಂತಿ ಪಡೆಯಲು ಇಚ್ಛಿಸಿದವರು. ಜೊತೆಗೆ ಪ್ರೀತಿ, ತಮ್ಮನ್ನು ನಂಬಿರುವವರನ್ನು ಎಂದಿಗೂ ಕಾಪಾಡುವವರು.