ರದ್ದಾಯ್ತು ಲಿಯೋ ಸಿನಿಮಾ ಆಡಿಯೋ ರಿಲೀಸ್‌ : ಕಾರಣ ಗೊತ್ತಾ….?

ಚೆನ್ನೈ

     ʼಲಿಯೋʼ ಸಿನಿಮಾದ ಹೈಪ್‌ ದಿನಕಳೆದಂತೆ ಹೆಚ್ಚಾಗುತ್ತಿದೆ. ಲೋಕೇಶ್ ಕನಕರಾಜ್ – ವಿಜಯ್‌ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಿಗೆ ಸಿನಿಮಾದ ಮೇಲೆ ಡಬಲ್‌ ಕುತೂಹಲ ಮೂಡಿಸಿದೆ.ಈಗಾಗಲೇ “ನಾ ರೆಡಿ” ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್‌ ಮಾಡಿರುವ ರಿಲೀಸ್‌ ಡೇಟ್ ಸಮೀಪಿಸುತ್ತಿದೆ.

    ಇನ್ನೇನು ಲಕ್ಷಾಂತರ ಜನರ ಮುಂದೆ ಅದ್ಧೂರಿ ಆಡಿಯೋ ಲಾಂಚ್‌ ಕಾರ್ಯಕ್ರಮ ನಡೆಸುವ ತಯಾರಿಯಲ್ಲಿದ್ದ ʼಲಿಯೋʼ ತಂಡ ಇದ್ದಕ್ಕಿದ್ದಂತೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ಅಭಿಮಾನಿಗಳಿಗೆ ಭಾರೀ ನಿರಾಶೆ ಮೂಡಿಸಿದೆ.

   ಸೆಪ್ಟೆಂಬರ್ 30 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಲಿಯೋ ಆಡಿಯೋ ಲಾಂಚ್‌ ಕಾರ್ಯಕ್ರಮ ನಡೆಯಬೇಕಿತ್ತು. ಇದರ ವೇದಿಕೆ ಕಾಮಗಾರಿ ಆರಂಭಗೊಂಡು ಪ್ರಗತಿಯಲ್ಲಿತ್ತು. ಸಾವಿರಾರು ಜನರು ದಳಪತಿ ವಿಜಯ್‌ ಅವರನ್ನು ನೋಡಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಅವರ ಉತ್ಸಾಹಕ್ಕೆ ಚಿತ್ರತಂಡ ತಣ್ಣೀರು ಎರಚಿದೆ.

   ಪ್ರೊಡಕ್ಷನ್‌ ಸಂಸ್ಥೆ ಸವೆನ್‌ ಸ್ಕ್ರೀನ್‌ ಸ್ಟುಡಿಯೋ ಟ್ವೀಟ್‌ ಮಾಡಿ ʼಲಿಯೋʼ ಆಡಿಯೋ ಲಾಂಚ್‌ ಕಾರ್ಯಕ್ರಮ ರದ್ದು ಮಾಡಿದ್ದಾಗಿ ಹೇಳಿದೆ.

   ಲಿಯೋʼ ಆಡಿಯೋ ಲಾಂಚ್‌ ಪಾಸ್‌ ಗಾಗಿ ನಿರೀಕ್ಷೆಗೂ ಮೀರಿ ಜನ ಪಾಸ್‌ ಗಳನ್ನು ಕೇಳುತ್ತಲೇ ಇದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಅಭಿಮಾನಿಗಳಿಗಾಗಿ ಸಿನಿಮಾ ಅಪ್ಡೇಟ್‌ ಗಳನ್ನು ನೀಡುತ್ತಿರುತ್ತೇವೆ. ನೀವೆಲ್ಲ ಅಂದುಕೊಂಡ ಹಾಗೆ ಇದು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ತೆಗೆದುಕೊಂಡ ನಿರ್ಧಾರವಲ್ಲ” ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

    ದಳಪತಿ ವಿಜಯ್‌ ರಾಜಕೀಯ ಅಖಾಡಕ್ಕೆ ಬರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಅವರು ʼ ವಿಜಯ್ ಮಕ್ಕಳ್ ಇಯಕ್ಕಂʼ ಪರವಾಗಿ 10 ತರಗತಿಯ ಮಕ್ಕಳಿಗೆ ಸನ್ಮಾನ ಮಾಡಿದ್ದರು. ಇದಲ್ಲದೇ ಪಕ್ಷದ ಸಭೆಯನ್ನು ನಡೆಸಿದ್ದರು.

    ಇದೇ ಕಾರಣದಿಂದ ʼಲಿಯೋʼ ಆಡಿಯೋ ಲಾಂಚ್‌ ರಾಜಕೀಯ ಕಾರಣವಾಗಿ ರದ್ದಾಗಿದೆ ಕೆಲವರು ವಾದಿಸಿದ್ದಾರೆ. ಆಡಳಿತ ಪಕ್ಷ ಡಿಎಂಕೆ ʼಲಿಯೋʼ ಆಡಿಯೋ ಲಾಂಚ್‌ ರದ್ದಾಗಲು ಕಾರಣವೆಂದು ಕೆಲವರು ‘ವಿ ಸ್ಟ್ಯಾಂಡ್ ವಿತ್ ಲಿಯೋ’ ಹ್ಯಾಷ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದ್ದಾರೆ.ವಿಜಯ್‌ ಅವರ ಆಡಿಯೋ ಲಾಂಚ್‌ ಕಾರ್ಯಕ್ರಮಕ್ಕೆ ಪ್ರತ್ಯೇಕ ಅಭಿಮಾನಿಗಳ ವರ್ಗವೇ ಇದೆ. ಅವರು ʼವಾರಿಸುʼ ಸಿನಿಮಾದ ‘ಕುಟ್ಟಿ ಕಧೈ'(ಸಣ್ಣ ಕಥೆ) ಯನ್ನು ಹೇಳಿದ್ದು ವೈರಲ್‌ ಆಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link